ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕ ಗಡಿ ಸೋಮನಾಳದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಗ್ರಾಮ ಘಟಕ ಉದ್ಘಾಟನೆ
ವರದಿ ಸುಂದರರಾಜ್ BA ಕಾರಟಗಿ

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕ ಗಡಿ ಸೋಮನಾಳದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಗ್ರಾಮ ಘಟಕ ಉದ್ಘಾಟನೆ
ರೈತರ ಪರ ಧ್ವನಿ ಎತ್ತುವ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘಟನೆಗೆ ಪ್ರೇರಣೆಗೊಂಡು ಸಂಘ ಸೇರಿದ್ದು ರೈತರ ಸದಾ ರೈತರ ಪರ ಧ್ವನಿಯಾಗುತ್ತೇವೆ……ಶ್ರೀಮತಿ ಸಂಗಮ್ಮ ಅಂಬರೇಶ್ ನೂತನ ಗ್ರಾಮ ಘಟಕ ಅಧ್ಯಕ್ಷರು
ವಿಜಯಪುರ : ಜಿಲ್ಲೆಯ ತಾಳಿಕೋಟಿ ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ (ರಿ) ರಾಜ್ಯ ಘಟಕ ಹಾಗೂ ವಿಜಯಪುರ ಜಿಲ್ಲಾ ಘಟಕ ಪದಾಧಿಕಾರಿಗಳ ನೇತೃತ್ವದಲ್ಲಿ ಗಡಿ ಸೋಮನಾಳ ಗ್ರಾಮದ ಗ್ರಾಮ ಘಟಕ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ನೇಮಕ ಮಾಡಿ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು. ವಿಶೇಷವಾಗಿ 25 ಜನ ಮಹಿಳೆಯರು ಸ್ವ ಪ್ರೇರಿತರಾಗಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘಕ್ಕೆ ಸೇರ್ಪಡೆಗೊಂಡರು. ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯ ಮುಖಂಡರಾದ ಮಾಯವ್ವ ಉಪ್ಪಾರ್ ಹಾಗೂ ಜಿಲ್ಲಾ ಯುವ ಘಟಕ ಅಧ್ಯಕ್ಷರು ಆದ ಅನ್ವರ ಪತ್ತೆಸಾಬ್ ಅವಟಿ ಹಾಗೂ ಯುವ ಮೋರ್ಚಾ ಅಧ್ಯಕ್ಷರಾದ ಗೌಡಪ್ಪಗೌಡ ಬಿರಾದರ್ ಹಾಗೂ ಸದಸ್ಯರು ಮೆಹಬೂಬ್ ಸಾಬ್ ಉಪಸ್ಥಿತರಿದ್ದರು.
ಗಡಿ ಸೋಮನಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಸಂಗಮ್ಮ ಅಂಬರೀಶ್ ಬಳಗಾರ ಗ್ರಾಮ ಘಟಕ ಅಧ್ಯಕ್ಷರಾಗಿ ಶ್ರೀಮತಿ ಮಡಿವಾಳಮ್ಮ ಶ್ರೀಶೈಲ್ ದೂಳೇಕಾರ್ ಉಪಾಧ್ಯಕ್ಷರಾಗಿ ಶ್ರೀಮತಿ ಪಾರ್ವತಿ ಸಂಗಣ್ಣ ದೊಳೆಕಾರ್ ಇವರು ಕಾರ್ಯದರ್ಶಿಯಾಗಿ ಶ್ರೀಮತಿ ಸುನಂದ ನಿಂಗಣ್ಣ ಹರವಾಳ ಖಜಾಂಚಿಯಾಗಿ ನೇಮಕ ಮಾಡಲಾಗಿದೆ ಅದೇ ರೀತಿ 25 ಜನ ಮಹಿಳೆಯರಿಗೆ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು. ಈ ಸಂದರ್ಭದಲ್ಲಿ ನೂತನ ಗ್ರಾಮ ಘಟಕದ ಅಧ್ಯಕ್ಷರಾದ ಶ್ರೀಮತಿ ಸಂಗಮ ಅಂಬರೀಶ್ ಬಳಗಾರ ಇವರು ಮಾತನಾಡಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಸದಾ ರೈತರ ಪರವಾಗಿ ಮತ್ತು ರೈತರ ಸಮಸ್ಯೆಗಳಿಗೆ ಧ್ವನಿಯೆತ್ತಿ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಡೆಸಿರುವ ಹೋರಾಟಗಳಿಗೆ ಪ್ರೇರಣೆಗೊಂಡು ನಾವುಗಳು ಸಂಘಕ್ಕೆ ಸೇರ್ಪಡೆಗೊಂಡಿದ್ದೇವೆ. ಸಂಘದ ನಿಯಮಾವಳಿಗಳಿಗೆ ಅನುಗುಣವಾಗಿ ಮತ್ತು ಷರತ್ತುಗಳಿಗೆ ಬದ್ಧರಾಗಿ ಸದಾ ರೈತರ ಪರವಾಗಿ ಹೋರಾಟವನ್ನು ಮಾಡುತ್ತೇವೆ ಎಂದರು