ಅಪರಾಧ

ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಇಬ್ಬರ ಯುವಕರ ದುರ್ಮರಣ

ಲಾರಿ ಬೈಕ್ ನಡುವೆ ಭೀಕರ ಅಪಘಾತ ಸ್ಥಳದಲ್ಲಿಯೇ ಯುವಕರ ದುರ್ಮರಣ

ನವಲಿ : ಸಮೀಪದ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಮರಳು ತುಂಬಿದ ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಥಳೀಯ ಬೈಕ್ ಸವಾರರಿಬ್ಬರು ಅಸುನೀಗಿದ್ದಾರೆ,
ಯುವಕರು ಗುಡೂರು ಗ್ರಾಮದ ರಮೇಶ್ ತಂದೆ ಸಿದ್ದಪ್ಪ ಜವಳಗೇರ ನಾಯಕ್ ಹಾಗೂ ಸಿದ್ದಪ್ಪ ತಂದೆ ಲಿಂಗಪ್ಪ ಪ್ಯಾಟಿಹಾಳ ನಾಯಕ್ ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ರಮೇಶ್ ಸಹೋದರನ ಮದುವೆ ಬುಧವಾರ ನಡೆಯಬೇಕಾಗಿದೆ ಮಂಗಳವಾರ ನಿಶ್ಚಿತಾರ್ಥಕ್ಕೆ ವೀಳ್ಯದೆಲೆ ತರಲು ಸಮೀಪದ ನವಲಿ ಗ್ರಾಮಕ್ಕೆ ಹೋಗಿ ಬರುವಾಗ ರೈಸ್ ಪಾರ್ಕ್ ಹತ್ತಿರ ಟಿಪ್ಪರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ಅಸುನೀಗಿದ್ದಾರೆ ಸ್ಥಳಕ್ಕೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಬಂದು ಟಿಪ್ಪರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *

Back to top button