ಗಂಗಾವತಿತಾಲೂಕ ಸುದ್ದಿಗಳು

ವಕೀಲರ ಭವನ ನಿರ್ಮಾಣ ಸೇರಿದಂತೆ ರಿಜಿಸ್ಟರ್ ಜನರಲ್ ಅವರಿಗೆ ವಿವಿಧ ಬೇಡಿಕೆ ಈಡೇರಿಸಲು ಮನವಿ.. ಅಧ್ಯಕ್ಷ ಶರಣಬಸಪ್ಪ ನಾಯಕ* 

ಜರ್ನಲಿಸ್ಟ್ ವಾಯ್ಸ್ ಗಂಗಾವತಿ : ನ್ಯಾಯದಾನ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರಷ್ಟೇ ಮಹತ್ವದ ಪಾತ್ರವನ್ನು ನ್ಯಾಯವಾದಿಗಳು ನಿರ್ವಹಿಸುತ್ತಾರೆ ಎಂದು ಗಂಗಾವತಿ ವಕೀಲರ ಸಂಘದ ಅಧ್ಯಕ್ಷರಾದ ಶರಣಬಸಪ್ಪ ಎನ್ ನಾಯಕ್ ರವರು ಹೇಳಿದರು. ಅವರ ಕಚೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ನ್ಯಾಯವಾದಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳ ಖಂಡನೀಯ ವಕೀಲರ ಮೇಲೆ ದೌರ್ಜನ್ಯಗಳು ಮತ್ತು ಮಾರಣಾಂತಿಕ ಹಲ್ಲೆಗಳು ನಡೆಸಿದರೆ ಅಂಥಹವರ ವಿರುದ್ಧ ವಕೀಲರ ರಕ್ಷಣಾ ಕಾಯ್ದೆ ಅಡಿಯಲ್ಲಿ ಕಠಿಣ ಶಿಕ್ಷೆಗೆ ಅವಕಾಶವಿದೆ ನ್ಯಾಯದಾನ ಪ್ರಕ್ರಿಯೆಯಲ್ಲಿ ನ್ಯಾಯವಾದಿಗಳು ಸ್ವತಂತ್ರವಾಗಿ ನಿರ್ಭಯವಾಗಿ ಕರ್ತವ್ಯ ನಿರ್ವಹಿಸಬೇಕಾದರೆ ಹಲವು ತೊಡಕುಗಳು ಬೆದರಿಕೆಗಳು ಬರುವುದು ಸಹಜ ಅವುಗಳನ್ನು ಮೀರಿ ನೊಂದವರ ಪರವಾಗಿ ವಕೀಲರು ಕೆಲಸ ಮಾಡಬೇಕಾದರೆ ಅದು ಸಾಮಾನ್ಯವಲ್ಲ ಆದರೂ ನ್ಯಾಯದಾನ ಪ್ರಕ್ರಿಯೆಯಲ್ಲಿ ನ್ಯಾಯವಾದಿಗಳು ಕೆಲಸ ಮಾಡುವ ಅನಿವಾರ್ಯತೆ ಇದೆ, ಹಾಗಾಗಿಯೇ ಸಾರ್ವಜನಿಕ ವಲಯದಲ್ಲಿ ವಕೀಲರ ಬಗ್ಗೆ ಗೌರವ ಹಿಮ್ಮಡಿಯಾಗುವಂತೆ ಕರ್ತವ್ಯನಿಷ್ಠರಾಗಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಎಲ್ಲಾ ವಕೀಲರಿಗೆ ಅಭಿನಂದನೆಗಳು ತಿಳಿಸಿದರು ಅದೇ ರೀತಿ ವೃತ್ತಿ ಗೌರವ ಧಕ್ಕೆಯಾಗದಂತೆ ನಡೆದುಕೊಳ್ಳುವ ಜವಾಬ್ದಾರಿಯು ನಮ್ಮ ಮೇಲಿದೆ ಎಂದರು.

 

ಗಂಗಾವತಿ ತಾಲೂಕ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ತಾಲೂಕ ವಕೀಲರ ಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಹೇಳಿದರು ಆ ನಿಟ್ಟಿನಲ್ಲಿ ಈ ಹಿಂದೆ ಕರ್ನಾಟಕ ಸರ್ಕಾರದಿಂದ ವಕೀಲರ ಸಂಘಕ್ಕೆ ಬರುತ್ತಿದ್ದ ವಾರ್ಷಿಕ 50 ಸಾವಿರ ರೂಪಾಯಿಗಳನ್ನು ಸುಮಾರು ಹತ್ತು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ 2025 ನೇ ಸಾಲಿನಿಂದ ವಕೀಲರ ಸಂಘದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರದಿಂದ ವಾರ್ಷಿಕ ಅನುದಾನ 50 ಸಾವಿರ ಬಿಡುಗಡೆ ಮಾಡುವಂತೆ ರಾಜ್ಯ ಕಾನೂನು ಸಚಿವರಿಗೆ ದಿನಾಂಕ 23.12.2024ರಂದು ಮನವಿಯನ್ನು ಸಲ್ಲಿಸಲಾಗಿದೆ, ಗಂಗಾವತಿ ತಾಲೂಕಿಗೆ ಎರಡು ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಗಳ ಉದ್ಘಾಟನೆ ಮತ್ತು ನ್ಯಾಯಾಧೀಶರ ನೇಮಕ್ಕಾಗಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ರಿಜಿಸ್ಟರ್ ಜನರಲ್ ಅವರಿಗೆ ಮನವಿಯನ್ನು ನೀಡಲಾಗಿದೆ ಅದೇ ರೀತಿ ಈ ಮೊದಲು ಪ್ರಧಾನ ನ್ಯಾಯಾಲಯ ನ್ಯಾಯಾಧೀಶರು ತಾಲೂಕಿನ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲಾಗಿತ್ತು ಆದರೆ ಕೆಲವು ದಿನಗಳಿಂದ ತಾಲೂಕಿಗೆ ಪ್ರಧಾನ ನ್ಯಾಯಾಲಯ ನ್ಯಾಯಾಧೀಶರು ಇರಲಿಲ್ಲ ಹೀಗಾಗಿ ಪುನಃ ತಾಲೂಕಿಗೆ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರ ನೇಮಿಸುವಂತೆ ಹಾಗೂ ಹಿರಿಯ ನ್ಯಾಯಾಲಯಕ್ಕಾಗಿ ಹೆಚ್ಚುವರಿ ಸೀನಿಯರ್ ಡಿವಿಜನ್ ಪ್ರಾರಂಭಿಸುವಂತೆ, ರಾಜ್ಯ ಉಚ್ಚ ನ್ಯಾಯಾಲಯದ ರಿಜಿಸ್ಟರ್ ಜನರಲ್ ಅವರಿಗೆ ದಿನಾಂಕ 23. 12. 2024 ರಂದು ಮನವಿ ಸಲ್ಲಿಸಲಾಗಿದೆ

 

ಕನಕಗಿರಿ ತಾಲೂಕಿನ ಜನರು ಗಂಗಾವತಿಯ ನ್ಯಾಯಾಲಯಕ್ಕೆ ಬರಲು ಸುಮಾರು 25ಕಿ.ಮೀ ದೂರವಿದ್ದು ಸಮಯಕ್ಕೆ ಸರಿಯಾಗಿ ನ್ಯಾಯಾಲಯದಲ್ಲಿ ಹಾಜರಾಗಲು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಆದ್ದರಿಂದ ಕನಕಗಿರಿಯಲ್ಲಿ ಜೆಎಂಎಫ್ ಸಿ ನ್ಯಾಯಾಲಯ ಪ್ರಾರಂಭಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ರಿಜಿಸ್ಟರ್ ಜನರಲ್ ಅವರಿಗೆ ಮನವಿ ಸಲ್ಲಿಸಲಾಗಿದೆ, ಹಳೆಯ ನ್ಯಾಯಾಲಯ ಆವರಣದಲ್ಲಿ ನ್ಯಾಯಾಧೀಶರ ನಿವಾಸದ ಕೊಠಡಿಗಳ ನಿರ್ಮಾಣಕ್ಕೆ ಹೈಕೋರ್ಟ್ ಆದೇಶ ನೀಡಲಾಗಿದೆ ಅದಕ್ಕೆ ಗಂಗಾವತಿ ತಾಲೂಕ ವಕೀಲರ ಸಂಘದಿಂದ ತಕರಾರು ವ್ಯಕ್ತಪಡಿಸಲಾಗಿದೆ ಯಾಕೆಂದರೆ ಆ ಸ್ಥಳದಲ್ಲಿ ತಾಲೂಕ ವಕೀಲರ ಭವನ ನಿರ್ಮಾಣವಾಗಬೇಕಾಗಿದೆ ಮತ್ತು ಅಡಿಟೋರಿಯಂ ಹಾಲ್ ನಿರ್ಮಾಣಕ್ಕೆ ಮೀಸಲಿರಿಸಲಾಗಿರುವುದರಿಂದ ನ್ಯಾಯಾಧೀಶರ ಕೊಠಡಿಗಳು ನಿರ್ಮಾಣವಾಗದಂತೆ ವಿರೋಧವನ್ನು ವ್ಯಕ್ತಪಡಿಸಿದ್ದೇವೆ. ನ್ಯಾಯಾಧೀಶರಿಗೆ ರಾಜ್ಯ ಸರ್ಕಾರ ಬೇರೆ ಸ್ಥಳ ಗುರುತಿಸಿ ಅಲ್ಲಿ ನ್ಯಾಯಾಧೀಶರ ಕೊಠಡಿಗಳನ್ನು ನಿರ್ಮಾಣ ಮಾಡಲು ನಾವು ಕೂಡ ಸಮ್ಮತಿಸುತ್ತೇವೆ,

 

ತಾಲೂಕಿನ ವಕೀಲರ ಭವನ ಶೀಥಿಲಾವಸ್ಥೆಯಲ್ಲಿದ್ದು ನೂತನ ವಕೀಲರ ಭವನ ನಿರ್ಮಾಣಕ್ಕಾಗಿ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್ ತಂಗಡಗಿಯವರಿಗೆ ಮನವಿ ಸಲ್ಲಿಸುತ್ತೇವೆ ಜನವರಿ 26.2025 ರಂದು ತಾಲೂಕ ವಕೀಲರ ಲೈಬ್ರರಿ ಉದ್ಘಾಟನೆ ನಡೆಯಲಿದೆ ವಕೀಲರ ಲೈಬ್ರರಿಗೆ ತಾಲೂಕಿನ ಪ್ರತಿಯೊಬ್ಬ ವಕೀಲರು ತಮ್ಮದೇ ಆದ ಸಹಾಯ ಸಹಕಾರಗಳನ್ನು ಮಾಡಿದ್ದು ಅವಿಸ್ಮರಣೀಯವಾಗಿದೆ ಎಂದರು ನನ್ನ ಅಧ್ಯಕ್ಷೀಯ ಆಡಳಿತ ಅವಧಿಯಲ್ಲಿ ತಾಲೂಕಿನ ವಕೀಲರ ಪರವಾಗಿ ಮತ್ತು ವಕೀಲರ ಆಡಳಿತಾತ್ಮಕ ಸಮಸ್ಯೆಗಳಿಗೆ ಸ್ಪಂದಿಸಿ ತಾಲೂಕ ವಕೀಲರ ಸಂಘದ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಪ್ರತಿಯೊಬ್ಬ ವಕೀಲರ ಸಹಕಾರ ಅಗತ್ಯವಾಗಿದೆ ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.

Related Articles

Leave a Reply

Your email address will not be published. Required fields are marked *

Back to top button