ತಂತ್ರಜ್ಞಾನಬೆಳಗಾವಿ

ಪ್ರತಿಯೊಬ್ಬರಿಗೆ ಪರಿಸರದ ಜ್ಞಾನವನ್ನು ಕೊಡಬೇಕು. ಪರಿಸರವಿದ್ದರೆ ಮಾನವ ಎಂಬುದನ್ನು ಅರಿತುಕೊಂಡು ಪ್ರತಿಯೊಬ್ಬರು ಪರಿಸರಕ್ಕೆ ಪೂರಕವಾಗಿ ಬದುಕಬೇಕು ಎಂದು ಭಾರತೀಯ ಅರಣ್ಯ ಸೇವಾ ಅಧಿಕಾರಿ ಮಂಜುನಾಥ ಆರ್ ಚೌವ್ಹಾಣ್ ಅಭಿಪ್ರಾಯಪಟ್ಟರು

ಪ್ರತಿಯೊಬ್ಬರಿಗೆ ಪರಿಸರದ ಜ್ಞಾನವನ್ನು ಕೊಡಬೇಕು. ಪರಿಸರವಿದ್ದರೆ ಮಾನವ ಎಂಬುದನ್ನು ಅರಿತುಕೊಂಡು ಪ್ರತಿಯೊಬ್ಬರು ಪರಿಸರಕ್ಕೆ ಪೂರಕವಾಗಿ ಬದುಕಬೇಕು ಎಂದು ಭಾರತೀಯ ಅರಣ್ಯ ಸೇವಾ ಅಧಿಕಾರಿ ಮಂಜುನಾಥ ಆರ್ ಚೌವ್ಹಾಣ್ ಅಭಿಪ್ರಾಯಪಟ್ಟರ.ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ಜೆಐಎಸ್ ದಿನಾಚರಣೆಯ ನಿಮಿತ್ತ ಹವಾಮಾನ ಬದಲಾವಣೆ ಮತ್ತು ದೂರ ಸಂವೇದನಾಶೀಲತೆ ಎಂಬ ವಿಶೇಷ ಉಪನ್ಯಾಸವನ್ನು ಬುಧವಾರದಂದು ನವೆಂಬರ್ 20/06/2024ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಕುರಿತು ಮಂಜುನಾಥ್ ಚವಾಣ್ ನವರು ಭಾರತೀಯ ಅರಣ್ಯ ಸೇವಾ ಅಧಿಕಾರಿ

ಇವರು ತ್ಯಾಜ್ಯವಸ್ತುಗಳು, ಹೊರಸೂಸುವ ವಿಷಪೂರಿತ ಗಾಳಿ, ವಾಹನದಿಂದ ಹೊರಸೂಸುವ ವಿಷಯುಕ್ತ ಅನಿಲ ಇನ್ನೂ ಅನೇಕ ಮೂಲಗಳಿಂದ ಜೊತೆಗೆ ಜೀವಿಗಳ ಮೇಲೆ ಅಪಾರವಾದ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಗಂಡಾಂತರ ಎದುರಾಗಿದೆ. ಇಂಥ ಸಂದರ್ಭದಲ್ಲಿ ಜಗತ್ತು ಹವಾಮಾನ ವೈಪರಿತ್ಯದ ಕಡೆಗೆ ತುರ್ತಾಗಿ ಗಮನ ಹರಿಸಬೇಕು. ಅದಕ್ಕೆ ಬೇಕಾದ ಅತ್ಯುತ್ತಮ ಯೋಜನೆಗಳನ್ನು ರೂಪಿಸಬೇಕು. ತನ್ನ ಬದುಕಿನ ಜೊತೆಗೆ ಇತರ ಜೀವಿಗಳ ಬದುಕು ಇದೆ ಎಂಬುದನ್ನು ಮಾನವ ಅರಿತು ಬದುಕಬೇಕು. ಹವಾಮಾನ ಬದಲಾವಣೆಯನ್ನು ಎದುರಿನಲ್ಲಿ ಅರಣ್ಯ ನಿರ್ವಹಣೆಯೂ ಒಂದು ಹವಾಮಾನ ಬದಲಾವಣೆಯನ್ನು ತಡೆಯುವ ಅನೇಕ ಮಾರ್ಗಗಳಲ್ಲಿ ಪ್ರಮುಖವಾದುದು ಮರಗಳನ್ನು ಬೆಳೆಸುವುದಾಗಿದೆ ಭೌಗೋಳಿಕ ಮಾಹಿತಿ ದಿನಾಚರಣೆಯು ಮಹತ್ವವಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜೆಐಎಸ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜನ ವಿಜ್ಞಾನಿ ಡಾ. ಅನಿರ್ ಕುಲಕರ್ಣಿ ಅವರು ಹವಾಮಾನ ಬದಲಾವಣೆ ತಂತ್ರಜ್ಞಾನಗಳು ಹೇಗೆ ಪ್ರಮುಖವಾಗಿದೆ ಎಂಬುದನ್ನು ವಿವರಿಸಿದರು. ಹವಮಾನ ಬದಲಾವಣೆ ಮತ್ತು ದೂರ ಸಂವೇದಿ ಕುರಿತು ಅದರ ಒಳನೋಟಗಳನ್ನು ಬಿಚ್ಚಿಟ್ಟರು.

ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿ ಡಾಕ್ಟರ್ ರತ್ನ ವಿ ಅವರು ಹವಮಾನ ಬದಲಾವಣೆ ಮತ್ತು ಅರಣ್ಯ ರಕ್ಷಣೆ ಕುರಿತು ಮಾತನಾಡಿದರು. ಹವಮಾನ ರಕ್ಷಣೆಯಲ್ಲಿ ಅರಣ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಅರಣ್ಯ ಸಂರಕ್ಷಣೆಯ ಕಾರ್ಯತಂತ್ರಗಳ ಕುರಿತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಎಂ. ಜಿ. ಹೆಗಡೆಅವರು . ಹವಾಮಾನ ಬದಲಾವಣೆ ಇಂದು ಒಂದು ದೇಶದ ಸಮಸ್ಯೆ ಆಗಿ ಉಳಿದಿಲ್ಲ. ಅದು ಜಾಗತಿಕ ಸಮಸ್ಯೆಯಾಗಿದೆ. ಒಂದು ದೇಶದ ಹವಾಮಾನ ವೈಪರೀತ್ಯವು ಇನ್ನೊಂದು ದೇಶದ ಮೇಲೆ ಪರಿಣಾಮ ಬೀರುತ್ತಿದೆ ಹವಾಮಾನ ಬದಲಾವಣೆಯ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ಗಮನ ಪರಿಸರಕ್ಕೆ ಸಂಬಂಧಿಸಿದ ದಿನಾಚರಣೆಗಳನ್ನು ವಿಶೇಷವಾಗಿ ಆಚರಿಸುವುದರ ಜೊತೆಗೆ ವಿದ್ಯಾರ್ಥಿಗಳು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದೇವೆ.

ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ಪ್ರಾಜೆಕ್ಟ್ ಗಳನ್ನು ಇಬ್ಬರೂ ಸಂಪನ್ಮೂಲ ವ್ಯಕ್ತಿಗಳು ಮೌಲ್ಯಮಾಪನ ಮಾಡಿ, ಸ್ವಯಂ ಚಾಲಿತ ಬೀದಿ ದೀಪ ಸಿದ್ಧಪಡಿಸಿದ ರಾಮೇಶ್ವರ ಮತ್ತು ತಂಡಕ್ಕೆ ಮೊದಲ ಸ್ಥಾನ ಹಾಗೂ ಜೆಐಎಸ್ಎಸ್ ನಲ್ಲಿ ವೃತ್ತಿ ಜೀವನದ ಅಂಶಗಳು ಕುರಿತು ಸಿದ್ಧಪಡಿಸಿದ ಕರಣ್ ಪವರ್ ಮತ್ತು ತಂಡಕ್ಕೆ ದ್ವಿತೀಯ ಸ್ಥಾನವನ್ನು ನೀಡಿದರು.

ಸುಮಾ ಸ್ವಾಗತಿಸಿದರು.ಮೇಘ ಎಚ್ ನಿರೂಪಿಸಿದರು. ಮೇಘಾ ಬಿ. ವಂದಿಸಿದರು.  ಡಾ.ಪ್ರವೀಣ್ ಕುಮಾರ್  ಅವರು ಈ ಕಾರ್ಯಕ್ರಮದ ಸಂಯೋಜಕರು ಆಗಿದ್ದರು.

ಕಾರ್ಯಕ್ರಮದಲ್ಲಿ ಬೆಳಗಾವಿ, ಗದಗ ಬಾಗಲಕೋಟೆಯ ವಿವಿಧ ತಾಂತ್ರಿಕ ಮತ್ತು ಪ್ರಥಮ ದರ್ಜೆ ಮಾಹಾವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು..

Related Articles

Leave a Reply

Your email address will not be published. Required fields are marked *

Back to top button