ಲೋಕಸಭೆ ಸಾರ್ವತ್ರಿಕ ಚುನಾವಣೆ, ತಾಲ್ಲೂಕಿನಲ್ಲಿ ಪೊಲೀಸರ ಪಥ ಸಂಚಲನ….
ಪಬ್ಲಿಕ್ ರೈಡ್ ನ್ಯೂಸ್
ನಿಪ್ಪಾಣಿ:ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ನಿಪ್ಪಾಣಿ ತಾಲ್ಲೂಕಿನ ಪೊಲೀಸರು ಸಿಐಎಸ್‌ಎಫ್ ,ಪೋಲಿಸರ ಸೈನಿಕರ ನೆರವಿನೊಂದಿಗೆ ಶುಕ್ರವಾರ, ಸಂಜೆ ವಿವಿಧ ಮಾರ್ಗದ, ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು, ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು, ಹಾಗೂ
ಸ್ವಾಗತವನ್ನ ಸಿಪಿಐ ಬಿ ಎಸ್ ತಳವಾರ ಮಾಡಿದರು.
ಈ ಸಂದರ್ಭದಲ್ಲಿ ಜವಾನ ,ಘಟಕದ ನಿರೀಕ್ಷಕ ಅಧೀಕ್ಷಕ ಉಪಸ್ಥಿತರಿದ್ದರು,
ನಗರ ಪೊಲೀಸ್ ಠಾಣೆಯಿಂದ ರಸ್ತೆ ಸಂಚಾರ ಆರಂಭವಾಯಿತು,ನಂತರ ಜಾಮದಾರ್ ಪ್ಲಾಟ್, ದರ್ಗಾ ಗಲ್ಲಿ , ನಿರಾಳೆ ಗಲ್ಲಿ, ಬಾಗವಾನ್ ಗಲ್ಲಿ, ಗಾಂಧಿ ಚೌಕ್, ಕೋಠಿವಾಲೆ ಕಾರ್ನರ್, ಕಿತ್ತೂರು ರಾಣಿ ಚನ್ನಮ ಸರ್ಕಲ್, ಅಶೋಕನಗರ, ನಿಪಾಣಿ ಮೆಡಿಕಲ್, ಧರ್ಮವೀರ ಸಂಭಾಜಿ ಚೌಕ್, ನಗರಸಭೆ ಮಾರ್ಗವಾಗಿ ಮುಖ್ಯ ಬೀದಿಗಳಲ್ಲಿ ಪೋಲಿಸರಿಂದ ಪಥ ಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ, ಪಿ ಎಸ್ ಆಯ್ ಸಿ ಉಮಾದೇವಿ, ಗ್ರಾಮೀಣ ಪೋಲಿಸ ಠಾಣೆಯ, ಪಿಎಸ್ಐ ಮಣಿಕಂಠ ಪೂಜಾರಿ, ಬಸವೇಶ್ವರ ಪೊಲೀಸ ಠಾಣೆಯ ಪಿಎಸ್ಐ ರಮೇಶ ಪವಾರ್, ಖಡಕಲಾಟ್ ಪೋಲಿಸ್ ಠಾಣೆ ಪಿಎಸ್ಐ ಅನಿತಾ ರಾಠೋಡ್, ಸರಿದಂತೆ ಎಲ್ಲಾ ಪೊಲೀಸ, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.