ಧಾರವಾಡ ಲೋಕ ಕೈ ಟಿಕೆಟ್ಗಾಗಿ ರಜತ ಬೆಂಬಲಿಗರ ಆಕ್ರೋಶ; ಟಿಕೆಟ್ ನೀಡಲು ಅಗ್ರಹಿಸಿ ಬೆಂಬಲಿಗರ ಪ್ರೊಟೆಸ್ಟ್
ಪಬ್ಲಿಕ್ ರೈಡ್ ನ್ಯೂಸ್
ಹುಬ್ಬಳ್ಳಿ; ಧಾರವಾಡ ಲೋಕ ಸಭಾ ಕಾಂಗ್ರೆಸ್ ಟಿಕೆಟ್ ರಜತ್ ಉಳ್ಳಾಗಡ್ಡಿಮಠಗೆ ನೀಡಲು ಅಗ್ರಹಿಸಿ, ಹುಬ್ಬಳ್ಳಿಯಲ್ಲಿ ರಜತ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.
ನಗರದ ದುರ್ಗದ್ ಬೈಲ್ನಲ್ಲಿ ಪ್ರತಿಭಟನೆ ನಡೆಸಿದ ರಜತ್ ಬೆಂಬಲಿಗರು ಹಾಗೂ ಕಾರ್ಯಕರ್ತರು ರಜತ್ ಪರ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಜತ್ ಉಳ್ಳಾಗಡ್ಡಿಮಠ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಯುವ ಮುಖಂಡರಾಗಿದ್ದು, ಧಾರವಾಡ ಲೋಕ ಸಭಾ ಟಿಕೆಟ್ ಇವರಿಗೇ ನೀಡಬೇಕು ಎನ್ನುವದು ಕಾರ್ಯಕರ್ತರ ಒತ್ತಾಯಆಗಿತ್ತು. ಈ ಹಿಂದೆಯೂ ರಜತ್ ಅವರಿಗೆ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಪಕ್ಷ ಸೇರ್ಪಡೆಯಿಂದ ಅನ್ಯಾಯವಾಗಿದೆ. ಕೊನೆ ಕ್ಷಣದಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದ ವಿಧಾನ ಸಭಾ ಟಿಕೆಟ್ ತ್ಯಾಗ ಮಾಡಿದ್ದರು. ಆದರೆ ಈಗ ಮತ್ತೆ ಅದೇ ಅನ್ಯಾಯ ಲೋಕ ಸಭಾ ಟಿಕೆಟ್ ವಿಚಾರದಲ್ಲಿಯು ಮುಂದುವರೆದಿದೆ. ಈಗಾಗಲೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯೊಂದಿಗೆ, ಲೋಕಸಭಾ ಚುನಾವಣೆ ತಯಾರಿ ನಡೆಸಿದ್ದರು. ಆದರೆ ಈಗ ಟಿಕೆಟ್ ಕೈ ತಪ್ಪುವ ವದಂತಿ ಹಬ್ಬುತಿದೆ. ಹಾಗಾಗಿ ಕೂಡಲೇ ಕಾಂಗ್ರೆಸ್ ರಾಜ್ಯ ಹಾಗೂ ರಾಷ್ಟ್ರೀಯ ಹೈಕಮಾಂಡ್ ರಜತ್ ಅವರಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಜಿಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಾಧವ್, ಉಣಕಲ್ ಬ್ಲಾಕ್ ಉಪಾಧ್ಯಕ್ಷ ಸುನೀಲ್ ಮಠಪತಿ,ಹಿಂದುಳಿದ ವರ್ಗ ಘಟಕ ಅಧ್ಯಕ್ಷ ಉಮೇಶ್ ಕೊಟ್ರನ್ನವರ,ಕಿಸಾನ್ ಘಟಕದ ಅಧ್ಯಕ್ಷ ಪ್ರಕಾಶ್ ಮಾಯ್ಕರ್, NSUI ಘಟಕದ ಅಧ್ಯಕ್ಷ ಜೈಶ್ವಂತ್ ಗಾಂಧಾಳ,ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರಾದ ಗೋಪಾಲ ಎನ್ನೆಚವಡಿ,ವೀರೇಶ್ ಕಡಕೋಳಮಠ,ರಾಘವೇಂದ್ರ ಪಾಟೀಲ್,ಹರೀಶ್ ಪೂಜಾರ್,ಸಾಧಿಕ್ ಯಕ್ಕುಂಡಿ ,ಅಬ್ಬಾಸ್ ಯರಗಟ್ಟಿ,ವೀರೇಶ್ ಗೋಕಾಕ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.