ಧಾರವಾಡ ಹಳಿಯಾಳ ಚಕ್ ಪೋಸ್ಟ್ ತಪಾಸಣೆಯಲ್ಲಿ ಸರಿಯಾದ ದಾಖಲೆ ಇಲ್ಲದ 1.49 ಲಕ್ಷ ಪತ್ತೆ

ಪಬ್ಲಿಕ್ ರೈಡ್ ನ್ಯೂಸ್
ಧಾರವಾಡ ಹಳಿಯಾಳ ಚೆಕ್ ಪೋಸ್ಟ್‌ದಲ್ಲಿ ಅಧಿಕಾರಿಗಳು ಕಾರ್ ತಪಾಸಣೆ ಮಾಡುವ ಸಂದರ್ಭದಲ್ಲಿ, ಸರಿಯಾದ ದಾಖಲೆ ಇಲ್ಲದ 1 ಲಕ್ಷ 49 ಸಾವಿರ ರೂಪಾಯಿ ನಗದು ಹಣ ಪತ್ತೆಯಾಗಿದ್ದು, ಹಣವನ್ನು ವಶಕ್ಕೆ ಪಡೆದ ಅಧಿಕಾರಿಗಳು ಸೀಜ್ ಮಾಡಿ ಖಜಾನೆಯಲ್ಲಿ ಠೇವಣಿಗೆ ರವಾನೆ ಮಾಡಿದ್ದಾರೆ.
ವೈ-೧ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣ ನಿವಾಸಿಯಾದ ಮಹಮ್ಮದ ಶಂಶುದ್ದೀನ್ ಎಂಬವರು, ಹುಬ್ಬಳ್ಳಿಯಿಂದ ಕಾರ್ ಮೂಲಕ ಅಳ್ನಾವರಗೆ ತೆರಳುವಾಗ ಹಳಿಯಾಳ ಚೆಕ್ ಪೋಸ್ಟ್ ದಲ್ಲಿ ಅವರ ಕಾರ್ ತಪಾಸಣೆ ಒಳಪಡಿಸಲಾಗಿದೆ. ಈ ವೇಳೆ ಅವರ ಬಳಿ ರೂ.1.49 ಲಕ್ಷ ನಗದು ಹಣ ಪತ್ತೆಯಾಗಿದೆ. ಅಧಿಕಾರಿಗಳು ಪರಿಶೀಲನೆ ವೇಳೆ ದಾಖಲೆಗಳಿಗೂ ಮತ್ತು ಅವರಲ್ಲಿ ದೊರೆತ ಹಣಕ್ಕೂ ಸರಿಯಾದ ಹೊಂದಾಣಿಕೆ ಆಗದೇ ಇರುವದರಿಂದ, ಅವರಲ್ಲಿನ ಹಣವನ್ನು ಮಾಜಿಸ್ಟೆಟ್ ನೇತೃತ್ವದ ಎಸ್ಎಸ್ ಟಿ ತಂಡದ ಅಧಿಕಾರಿಗಳು ಪತ್ತೆ ಹಚ್ಚಿ, ಎಪ್ಎಸ್ ಟಿ ತಂಡವು ಪತ್ತೆಯಾದ ಹಣವನ್ನು ಖಜಾನೆಯಲ್ಲಿ ಠೇವಣಿ ಮಾಡಲು ಕ್ರಮವಹಿಸಿದ್ದಾರೆ. ಮತ್ತು ಇದನ್ನು ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

