ಜಿಲ್ಲಾ ಸುದ್ದಿಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ನಗರದಲ್ಲಿ 5 ದಿನ ಮದ್ಯ ಮಾರಾಟ ಬಂದ್

ಪಬ್ಲಿಕ್ ರೈಡ್ ನ್ಯೂಸ್ 

ಹುಬ್ಬಳ್ಳಿ: ಮದ್ಯಪ್ರಿಯರೇ ನೀವು ನೋಡಲೇ ಬೇಕಾದ ಸುದ್ದಿ ಇದು. ಅವಳಿ ನಗರದಲ್ಲಿ ಐದು ದಿನಗಳ ಕಾಲ ಮದ್ಯ ಮಾರಾಟ ಬಂದ್ ಮಾಡಲಾಗಿದೆ.

ಹೋಳಿ ಹುಣ್ಣಿಮೆ ಅಂಗವಾಗಿ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮಾರ್ಚ್ 25 ರಿಂದ 29 ರವರೆಗೆ ಬಣ್ಣದ ಹಬ್ಬ ರಂಗಪಂಚಮಿ ಆಚರಿಸುವುದರಿಂದ  ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ, ಮುಂಜಾಗ್ರತಾ ಕ್ರಮವಾಗಿ ಧಾರವಾಡ ನಗರದಲ್ಲಿ ಮಾರ್ಚ್ 25 ರಂದು ಸಂಜೆ 6 ಗಂಟೆಯಿಂದ ಮಾರ್ಚ್ 26 ರಂದು ಮಧ್ಯರಾತ್ರಿ 11.59 ಗಂಟೆಯವರೆಗೆ ಮದ್ಯ ಮಾರಾಟ ಬಂದ್ ಮಾಡಿದ್ದು, ಇದೇ ರೀತಿ ಹುಬ್ಬಳ್ಳಿ ನಗರದಲ್ಲಿ ಮಾರ್ಚ್ 27 ರಂದು ಸಂಜೆ 6 ಗಂಟೆಯಿಂದ ಮಾರ್ಚ್ 30 ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ಮತ್ತು ಸಾಗಾಟ ಮಾಡಲು ನಿಷೇಧಾಜ್ಞೆ ಹೊರಡಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಆದೇಶಿಸಿದ್ದಾರೆ.

ಅಕ್ರಮ ಮದ್ಯ ಮಾರಟ ಅಥವಾ ಸಾಗಾಟ ಮಾಡಿದ್ದಲ್ಲಿ  ಕಠಿಣ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button