ಜಿಲ್ಲಾ ಸುದ್ದಿಹುಬ್ಬಳ್ಳಿ

ಹಲವಾರು ಜಿಲ್ಲಾ ನ್ಯಾಯಾಲಯಗಳಲ್ಲಿ ಜ್ಯಾಮೀನು ಪಡೆದುಕೊಂಡು ಮತ್ತೆ ಕಳ್ಳ ಆಟ ಶುರು ಮಾಡಿದ್ದ ಪರಿಣಿತ ಕಳ್ಳರು ಕೇಶ್ವಾಪೂರ ಪೊಲೀಸರ ಬಲೆಗೆ

ಹುಬ್ಬಳ್ಳಿ: ಕೇಶ್ವಾಪೂರ ಪೊಲೀಸ ಠಾಣಾ ವ್ಯಾಪ್ತಿಯ ಕ್ಲಬ ರೋಡ ರೇಲ್ವೆ ಗಾಲ್ಪ ಗೌಂಡ ಹತ್ತಿರ, ಮೋಟರ ಸೈಕಲ ಮೇಲೆ ಹಿಂದೆ ಕುಳಿತು ಹೊರಟಿದ್ದ ಒಬ್ಬ ಹೆಣ್ಣುಮಗಳ ಕೊರಳಲ್ಲಿದ್ದ ಮಂಗಳಸೂತ್ರವನ್ನು ಜಬರಿಯಿಂದ ಕಿತ್ತುಕೊಂಡು ಹೋದ ಬಗ್ಗೆ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲ್ಲಗಿತ್ತು.
ತನಿಖೆಯನ್ನು ಕೈಕೊಂಡ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ ಠಾಣೆಯ ಪೊಲೀಸ ಇನ್ಸ್‌ಪೆಕ್ಟರ್ ರವರಾದ ಶ್ರೀ ಕೆ.ಎಸ್.ಹಟ್ಟಿ, ಶ್ರೀ ಸದಾಶಿವ ಕಾನಟ್ಟಿ, ಪಿ.ಎಸ್.ಐ, ಇವರು ಠಾಣೆಯ ಅಪರಾದ ವಿಭಾಗದ ಸಿಬ್ಬಂದಿಯೂಂದಿಗೆ ರಾಣೆಬೆನ್ನೂರ ಮೂಲದ ಇಬ್ಬರು ಆರೋಪಿತರಿಗೆ ದಾವಣಗೆರಿಯಲ್ಲಿ ಬಂಧಿಸಿ ದಾವಣಗೆರಿ ಮತ್ತು ಮೈಸೂರು ನಗರಕ್ಕೆ ಹೋಗಿ ಈ ಪ್ರರಕಣಕ್ಕೆ ಸಂಬಂದಿಸಿದಂತೆ ಆರೋಪಿತರಿಂದ
ಒಟ್ಟು 32 ಗ್ರಾಂ ತೂಕದ ಒಟ್ಟು 1.90.000/-ರೂ ಕಿಮ್ಮತ್ತಿನ ಬಂಗಾರವನ್ನು
ಅಪರಾಧ ಮಾಡಲು ಬಳಿಸಿದ ಒಂದು ಕೆ.ಟಿ.ಎಮ್. ಡೋಕ್ ಮೋಟರ ಸೈಕಲ ಅಕಿ:50.000/-ರೂ
ಒಟ್ಟು 2.40.000/-ರೂ
ಕಿಮ್ಮತ್ತಿನ ಜಪ್ತ ಮಾಡಿಕೊಂಡಿದ್ದಾರೆ.
ಈ ಆರೋಪಿತರ ಮೇಲೆ ಈಗಾಗಲೇ ರಾಣೆಬೆನ್ನೂರ. ಶಿವಮೂಗ್ಗ, ಉಡುಪಿ, ಮಣಿಪಾಲ ಪೊಲೀಸ ಠಾಣೆಗಳಲ್ಲಿ ಮೋಟರ ಸೈಕಲ ಕಳ್ಳತನ ಮತ್ತು ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಇವರು ನ್ಯಾಯಾಲಯದಿಂದ ಜ್ಯಾಮೀನು ಪಡೆದುಕೊಂಡು ಬಂದು ಸುಧಾರಿಸಿಕೊಳ್ಳದೆ ಸುಲಿಗೆಯನ್ನು ಮುಂದುವರಸಿದ್ದು ತನಿಖೆಯ ಕಾಲಕ್ಕೆ ಕಂಡು ಬಂದಿರುತ್ತದೆ.
ಮಾನ್ಯ ಶ್ರೀಮತಿ ರೇಣುಕಾ ಸುಕುಮಾರ ಪೊಲೀಸ ಕಮೀಷನರ ಹು-ಧಾ ನಗರ, ಹಾಗೂ ಶ್ರೀ ರಾಜೀವ ಎಮ್. ಡಿಸಿಪಿ (ಕಾವಸು), ಶ್ರೀ ರವೀಶ ಸಿ. ಆರ್, ಡಿಸಿಪಿ (ಅವಸಂ), ಹುಬ್ಬಳ್ಳಿ ಉತ್ತರ ಉಪ ವಿಭಾಗದ ಎಸಿಪಿ ರವರಾದ ಶ್ರೀ ಶಿವಪ್ರಕಾಶ ನಾಯಕ್ ಇವರುಗಳ ಮಾರ್ಗದರ್ಶನದಲ್ಲಿ ಕೇಶ್ವಾಪೂರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ಕೆ.ಎಸ್.ಹಟ್ಟಿ ಇವರ ನೇತೃತ್ವದಲ್ಲಿ ಕೇಶ್ವಾಪೂರ ಠಾಣೆಯ ಶ್ರೀ ಸದಾಶಿವ ಕಾನಟ್ಟಿ, ಪಿ.ಎಸ್.ಐ.[ಕಾವಸು], ಶ್ರೀಮತಿ ಆರ.ಎಸ್.ಸಪಾಟೆ ಮ.ಪಿ.ಎಸ್.ಐ.[ಅವಿ], ಸಿಬ್ಬಂದಿ ಜನರಾದ ಶ್ರೀ ಬಿ.ಕೆ.ಕೊಟಬಾಗಿ, ಶ್ರೀ ಎಂ.ಡಿ. ಕಾಲವಾಡ, ಶ್ರೀ ಕೃಷ್ಣಾ ಕಟ್ಟಿಮನಿ, ಶ್ರೀ ಆನಂದ ಪೂಜಾರ, ಶ್ರೀ ವಿಠಲ ಮಾದರ ಶ್ರೀ ಎಸ್.ಎಸ್. ಶ್ರೀ ಎಂ.ಪಿ.ಬಂಡಿ ಹಾಗೂ ತಾಂತ್ರಿಕ ರಾಗಿ, ಶ್ರೀ ಚಂದ್ರು.ಕೆ. ಲಮಾಣಿ, ಶ್ರೀ ಶರಣಪ್ಪ ವಾಲಿಕಾರ, ಸಹಾಯಕರದ ಎಮ್.ಎಸ್.ಚಿಕ್ಕಮಠ, ರವಿ ಗೋಮಪ್ಪನವರ, ರಾಘವೇಂದ್ರ ಬಡಂಕರ, ರವರು ಕೂಡಿ ಆರೋಪಿತರ ಪತ್ತೆ ಕಾರ್ಯ ನಿರ್ವಹಿಸಿದ್ದು ಇರುತ್ತದೆ. ಮಾನ್ಯ ಪೊಲೀಸ ಆಯುಕ್ತರು ಈ ಪತ್ತೆ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!