ಲೋಕ ಸಮರದಲ್ಲಿ ಹಳಬರ ಕೈ ಬಿಟ್ಟು ಹೊಸಬರಿಗೆ ಟಿಕೆಟ್ ನೀಡುತ್ತಾರೆ ಅನ್ನೊದು ಊಹಾಪೋಹ – ಜೋಶಿ
ಪಬ್ಲಿಕ್ ರೈಡ್ ನ್ಯೂಸ್
ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ನಿರ್ಣಯ ತಗದೆಕೊಳ್ಳುತ್ತದೆ. ಹಳಬರಿಗೆ ಟಿಕೆಟ್ ಕೊಡಲ್ಲ, ಹೊಸಬರಿಗೆ ಅವಕಾಶ ಕೊಡತ್ತಾರೆ ಎಂಬುದು ಊಹಾಪೋಹ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ಬಾರಿ ಗೆದ್ದವರಿಗೂ ಅವಕಾಶ ಕೊಟ್ಟಿದ್ದೇವೆ. ಲೋಕಸಭಾ ಟಿಕೆಟ್ ಹಂಚಿಕೆ ಕುರಿತು ಎಲ್ಲವೂ ಊಹಾಪೋಹಗಳು ಕೇಳಿ ಬರುತ್ತಿದೆ. ಅದಕ್ಕೆ ನಾನು ಉತ್ತರಿಸೋಲ್ಲ ಎಂದರು.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವನು ಕಾಂಗ್ರೆಸ್ ಪಾರ್ಟಿಗೆ ಹತ್ತಿರ ಇದ್ದಾನೆ, ನಾಸೀರ್ ಹುಸೇನ್ ಕನಿಷ್ಠ ಪಕ್ಷ ಕ್ಷಮೆಯಾದರೂ ಕೇಳಬೇಕು. ಆರೋಪಿ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯನವರ ಜೊತೆಗೆ ಫೋಟೋದಲ್ಲಿ ಇದ್ದಾನೆ ಎಂದವರು ಒಳಗೊಳಗೆ ಪುಷ್ಟೀಕರಣಕ್ಕೆ ತಲೆ ಮೇಲೆ ಕೂರಿಸಿಕೊಂಡು, ಅಪ್ಪಿ ಮುದ್ದಾಡುತ್ತದೆ ಆರೋಪಿಗೆ ನಾಸೀರ್ ಹುಸೇನ್ ಆಶೀರ್ವಾದವಿದೆ. ನಾಸೀರ್ ಹುಸೇ ಕ್ಷಮೆ ಕೇಳಲೇಬೇಕು. ಅಲ್ಲಿಯವರೆಗೆ ಪ್ರಮಾಣ ವಚನ ಸ್ವೀಕಾರ ಮಾಡಬಾರದು ಎಂದು ಆಗ್ರಹಿಸಿದರು.
ಬೆಂಗಳೂರಿನ ರಾಮೇಶ್ವರಂ ಕಫೆ ಬಾಂಬ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ರಾಮೇಶ್ವರಂ ಕೆಫೆ ಬ್ಲಾಸ್ಟ್ ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಆಗಿದ್ದು, ರಾಜ್ಯ ಸರ್ಕಾರ ಸರಿಯಾದ ತನಿಖೆ ಮಾಡುತ್ತಿಲ್ಲ ಎಂದು ದೂರಿದರು
ನರೇಗಾ ಹಣ ಬಳಕೆ ಬಗ್ಗೆ ಅನೇಕ ರಾಜ್ಯಗಳಯ ಮಾಹಿತಿ ನೀಡಿಲ್ಲ. ರಾಜ್ಯ ಸರ್ಕಾರ ಅಡಿಟ್ ರಿಪೋರ್ಟ್ ಕೊಟ್ಟಿಲ್ಲ. ರಾಜ್ಯ ಸರ್ಕಾರ ನಿಮ್ಮದಿದೆ, ನರೇಗಾಕ್ಕೆ ದುಡ್ಡು ಕೊಡಿ ಎಂದು ಆಗ್ರಹಿಸಿದರು. ಇನ್ನೂ ಕಾಂಗ್ರೆಸ್ ಅವರು ಮಹಾದಾಯಿ ಅಡ್ಡಗಾಲು ಹಾಕುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಹನಿ ನೀರು ಬಿಡಲ್ಲ ಅಂದವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಎಂದು ಟಾಂಗ್ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿಲಿಂಡರ್ ದರವನ್ನಯ ಮುನ್ನೂರು ರೂಪಾಯಿ ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹಿಳೆಯರು ಮೋದಿಯವರನ್ನು ಮತ್ತೊಮ್ಮೆ ಬೆಂಬಲಿಸುವಂತೆ ಮನವಿ ಮಾಡುತ್ತೇನೆ ಎಂದರು.
ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನವಾಗಿರುವುದು ಖುಷಿ ತಂದಿದೆ: ಸುಧಾ ಮೂರ್ತಿಯವರು ಹುಬ್ಬಳ್ಳಿಯವರು, ಅವರು ರಾಜ್ಯ ಸಭೆಗೆ ನಾಮನಿರ್ದೇಶನವಾಗಿರುವುದು ನಮ್ಮೆಲ್ಲರಿಗೆ ಬಹಳ ಖುಷಿ ತಂದಿದೆ. ಸೃಜನಶೀಲ ಲೇಖಕಿ, ಸರಳ ಜೀವನಕ್ಕೆ ಸುಧಾ ಮೂರ್ತಿಯವರು ಖ್ಯಾತರಾಗಿದ್ದಾರೆ, ಅವರು ಪದ್ಮಶ್ರೀಗೆ ಭಾಜನರಾಗಿದ್ದರು. ಈಗ ರಾಜ್ಯ ಸಭೆಗೆ ಪ್ರವೇಶ ಮಾಡಿದ್ದಾರುವುದು ಸಂತಸ ಎಂದು ತಿಳಿಸಿದರು.