ಸಂಭ್ರಮದ ವಾತಾವರಣ ಸೃಷ್ಟಿ ಮಾಡಿದ ಸಂವಿಧಾನ ಜಾಥಾ ಕಾರ್ಯಕ್ರಮ
ಹನೂರು, ಸಂಭ್ರಮದ ಜೊತೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದ ಮಾರ್ಟೀಳ್ಳಿ ಗ್ರಾಮದಲ್ಲಿ ನೆಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ,
ತಾಲ್ಲೂಕಿನ ಕಾಡಂಚಿನ ಗುಡ್ಡ ಗಾಡು ಪ್ರದೇಶದಿಂದ ಕೂಡಿರುವ ಗಡಿ ಭಾಗದ ಮಾರ್ಟೀಳ್ಳಿ ಗ್ರಾಮದಲ್ಲಿ, ಗ್ರಾಮ ಪಂಚಾಯ್ತಿ ಆಡಳಿತ ವರ್ಗದಿಂದ ತುಂಬಾ ವಿಜೃಂಭಣೆಯಿಂದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ನೆಡೆಸಿದ್ದರು,
ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆವತಿಯಿಂದ ನೆಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಮಾರ್ಟೀಳ್ಳಿ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ನೆಡೆದ ಜಾಗೃತಿ ಜಾಥಾ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿತ್ತು, ನಾಲರೋಡ್ ನಿಂದ ಪ್ರಾರಂಭವಾದ ಜಾಥಾ ಕಾರ್ಯಕ್ರಮ ತುಂಬಾ ವಿಶೇಷತೆಯಿಂದ ಕಂಡು ಬಂತು, ಪ್ರಾರಂಭದಲ್ಲಿ ಜಾಥಾ ರಥದಲ್ಲಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ದೊಡ್ಡ ಹೂವಿನ ಹಾರ ಹಾಕಿ ವ್ಯಾದ್ಯ ಮೇಳದ ಜೊತೆ ಮಹಿಳೆಯರು ಪೂರ್ಣ ಕುಂಭ ಕಳಸ ಹಿಡಿದು ಶಾಲೆ ಮಕ್ಕಳು ವಿವಿಧ ನೃತ್ಯ ಮಾಡುವ ಮೂಲಕ ಸಾವಿರಾರು ಅಂಬೇಡ್ಕರ್ ಅಭಿಮಾನಿಗಳು ಗ್ರಾಮಸ್ಥರು ಬರಮಾಡಿಕೊಂಡರು, ನಂತರ ಸುಮಾರು ನಾಲ್ಕು ಕಿಲೋಮೀಟರ್ ತನಕ ಅಂದ್ರೆ ನಾಲ್ ರೋಡ್ ನಿಂದ ಸಂಧಾನಪಾಳ್ಯ, ಸುಲ್ವಡಿ ಗ್ರಾಮದ ಮಾರ್ಗವಾಗಿ ಮಾರ್ಟೀಳ್ಳಿ ಗ್ರಾಮದ ಪಂಚಾಯ್ತಿ ಮುಂದೆ ಇರುವ ಶಾಲೆ ಆವರಣ ತನಕ ಬೈಕ್ ಆಟೋ ಟೆಂಪೋಗಳಲ್ಲಿ ಕಾಲ್ನಡಿಗೆಯಲ್ಲಿ ಅಂಬೇಡ್ಕರ್ ಭಾವುಟಗಳನ್ನು ಹಿಡಿದು ಸಂವಿಧಾನ ಹಾಗೂ ಅಂಬೇಡ್ಕರ್ ರವರಿಗೆ ಬಂದು ತಲುಪಿದ್ದರು, ದಾರಿ ಉದ್ದಕ್ಕೂ ಯುವಕರು ಕಲಾ ತಂಡಗಳು ಕುಣಿದು ಕುಪ್ಪಳಿಸಿ ಜಾಥಾದ ಬಗ್ಗೆ ಜಾಗೃತಿ ಮೂಡಿಸಿದ್ದರು,
ಜಾಥಾ ರಥ ಮುಂದೆ ಈ ಭಾಗದ ಪ್ರಗತಿ ಪರ ಮುಖಂಡ ಮಣಿ ರವರು ಮೈಕ್ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಸಂವಿಧಾನ ಬಗ್ಗೆ ಅನೇಕ ವಿಷಯಗಳನ್ನು ತಮಿಳು ಹಾಗೂ ಕನ್ನಡದಲ್ಲಿ ದಾರಿ ಉದ್ದಕ್ಕೂ ಪ್ರಚಾರ ಮಾಡಿದ್ದರು,
ಗ್ರಾಮ ಪಂಚಾಯ್ತಿ ಆಡಳಿತ ವರ್ಗ ನಿರಂತರ ಶ್ರಮ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು, ಪಂಚಾಯ್ತಿ ಅಧ್ಯಕ್ಷ ಇನ್ನಿಯಿ ಮುತ್ತು, ದಲಿತ ರಾಷ್ಟ್ರೀಯ ಪೆಲೋಶಿಪ್ ಪ್ರಶಸ್ತಿ ಪುರಸ್ಕೃತ ರಾಮಲಿಂಗಮ್ ಪಂಚಾಯ್ತಿ ಅಧಿಕಾರಿ ಶಿವಣ್ಣ, ಕಾರ್ಯದರ್ಶಿ ಚಿನ್ನಸ್ವಾಮಿ ಹಾಗೂ ಇನ್ನಿತ್ತರು ತುಂಬಾ ಶ್ರಮ ಹಾಕಿ ಯಾವುದೇ ಗೊಂದಲ ಆಗದ ರೀತಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದರು, ಸಂಜೆ 7ಗಂಟೆಯದರು ಸಮಾವೇಶದಲ್ಲಿ ಜನರು ಭಾಗವಹಿಸಿದ್ದರು, ಮಕ್ಕಳು ವಿವಿಧ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರೂ,
ಸಮಾವೇಶದಲ್ಲಿ ಭಾಗವಹಿಸಿದ್ದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಾಗೆ ಇತಿಹಾಸ ಮರೆತವನು ಇತಿಹಾಸವನ್ನು ಸೃಷ್ಟಿಸಲಾರ, ಎನ್ನುವ ವ್ಯಾಖ್ಯಾವನ್ನು ಬರೆಯ ಬಾರದು ಸ್ವಾತಂತ್ರ ಬರುವ ಮುಂಚೆ ಈ ದೇಶದಲ್ಲಿ ಯಾವ ಪರಿಸ್ಥಿತಿ ಇತ್ತು ಯಾವ ರೀತಿ ಶೋಷಣೆಗೆ ಮಹಿಳೆಯರು ಮಕ್ಕಳು ಒಳಗಾಗಿದ್ದರು ತಿಳಿದುಕೊಳ್ಳಬೇಕು ಈ ದಿನ ನೀವೆಲ್ಲ ಇಷ್ಟು ಸಂತೋಷವಾಗಿ ಬಂದು ಕುಳಿತಿರುವುದಕ್ಕೆ ಅದು ಸಂವಿಧಾನ ಕಾರಣ ನೀವು ಮೊದಲು ಇತಿಹಾಸವನ್ನು ತಿಳಿದುಕೊಳ್ಳಬೇಕು,, ಕಾರ್ಯಕ್ರಮವನ್ನು ಇಷ್ಟು ಅಚ್ಚು ಕಟ್ಟಯಾಗಿ ಯಾವುದೇ ಸಮಸ್ಯೆ ಕುಂದು ಕೊರೆತೆ ಇಲ್ಲದಂತೆ ಮಾಡಿರುವ ನಿಮಗೆ ಅನಂತ ಅನಂತ ಧನ್ಯವಾದಗಳು ಎಂದು ತಿಳಿಸಿದ್ದರು
ಈ ಸಂದರ್ಭದಲ್ಲಿ ಪುಸ್ತಕ ಜೋಳಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಇನ್ನಿಯಮುತ್ತು ಸಂವಿಧಾನ ಜಾಗೃತ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷ ವಿಷಯವಾಗಿದೆ ನಾವೆಲ್ಲ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಸಂವಿಧಾನವನ್ನು ತಿಳಿಯುವ ಕೆಲಸ ಮಾಡಬೇಕು ಎಂದರು
ಈ ಸಂಧರ್ಭದಲ್ಲಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಶಿವಣ್ಣ, ಗ್ರಾಮ ಪಂಚಾಯ್ತಿ ಸದಸ್ಯರು ಉಪಾಧ್ಯಕ್ಷರು, ಹಾಗೂ ಇನ್ನಿತ್ತರು ಇದ್ದರು.
ಸುರೇಶ್ ಗುಂಡಾಪುರ
ಚಾಮರಾಜನಗರ ವರದಿಗಾರರು
7022991304