ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮೀನಾವೇಶ ಗೂತ್ತಿಗೆದಾರರ ವಿರುದ್ದ ಪ್ರತಿಭಟನೆ
ಪಬ್ಲಿಕ್ ರೈಡ್ ನ್ಯೂಸ್
ಹನೂರು : ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ನಿತ್ಯವೂ ಸಾವಿರಾರು ವಾಹನಗಳ ಸಂಚಾರ ಮಾಡುತ್ತಿದ್ದು ವಾಹನ ಸವಾರರು ಕಷ್ಟ ಪಡುತ್ತಿದ್ದ ಹಿನ್ನಲೆ ಛಲವಾದಿ ಮಹಾಸಭಾ ಹನೂರು ತಾಲ್ಲೂಕು ಘಟಕದ ವತಿಯಿಂದ ಕೆಲವು ಸಮಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಹನೂರು ಪೆಟ್ರೋಲ್ ಬಂಕ್ ವೃತ್ತದಿಂದ ಪ್ರತಿಭಟನೆ ಪ್ರಾರಂಭ ರಸ್ತೆ ಕಾಮಗಾರಿ ನೆಡೆಯುವ ಸ್ಥಳದಲ್ಲಿ ವಾಹನಗಳನ್ನು ತಡೆದು ಅಧಿಕಾರಿಗಳು ಜನಪ್ರತಿನಿದಿನಗಳ ವಿರುದ್ಧ ಘೋಷಣೆ ಕೂಗಿ ಪೂರ್ಣಗೊಳ್ಳದ ರಸ್ತೆಯಲ್ಲಿ ಕೆಲವು ಸಮಯ ಕುಳಿತುಕೊಂಡ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೆಡೆಯುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಪ್ರತಿಭಟನೆಕಾರರಿಗೆ ಸಮಂಜಷಿ ನೀಡಲು ಮುಂದಾದರು ಆದ್ರೆ ಅವರರನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ವಿಳಂಭ ಆಗುವುದಕ್ಕೆ ಕಾರಣ ತಿಳಿಸಿ ಇಲ್ಲದಿದ್ದರೆ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಒತ್ತಾಯ ಮಾಡಿ ಅವರನ್ನು ರಸ್ತೆಯಲ್ಲಿ ಕುಳಿತುಕೊಳ್ಳುವಾಗೆ ಮಾಡಿದ್ದರು,
ಪ್ರತಿಭಟನೆಕರಾರು ಪ್ರಶ್ನೆ ಮಾಡುತ್ತಿದ್ದಾರೆ ಸರಿಯಾದ ಮಾಹಿತಿ ನೀಡದೆ ತಡವರಿಸುತ್ತ ಇಂಗು ತಿಂದ ಪೆಂಗನಂತೆ ಆಡುತ್ತಿದ್ದರು ಹಣ ಬಿಡುಗಡೆಯಾಗಿರುವುದನ್ನ ತಡವರಿಸಿ ಹೇಳುತ್ತಿದ್ದರು, ಶಿವರಾತ್ರಿ ಜಾತ್ರಾ ಮಹೋತ್ಸವ ಹತ್ತಿರ ಇರುವುದರಿಂದ ಕೂಡಲೇ ಅದಷ್ಟು ಕಾಮಗಾರಿ ಮುಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಪ್ರತಿಭಟನೆ ನಿಲ್ಲಿಸಿದರು.
ಈ ಸಂಧರ್ಭದಲ್ಲಿ ಛಲವಾದಿ ಮಹಾ ಸಭಾ ರಾಜ್ಯ ಉಪಾಧ್ಯಕ್ಷ ಅನಾಗಳ್ಳಿ ಬಸವರಾಜ್, ತಾಲ್ಲೂಕು ಅಧ್ಯಕ್ಷ ಬಸವರಾಜ್, ಚಂಗಾವಡಿ ರಾಜಣ್ಣ, ಮಹೇಶ್, ಅಧಿಕಾರಿಗಳಾದ ತಹಸೀಲ್ದಾರ್ ಗುರು ಪ್ರಸಾದ್, ಚಿನ್ನಣ್ಣ, ಮಹೇಶ್, ಹಾಗೂ ಇನ್ನಿತ್ತರರು ಇದ್ದರು.