ಕಾರಟಗಿ

ಸಚಿವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ ಮಾಜಿ ಶಾಸಕ ಬಸವರಾಜ್ ದಡೇಸೂಗೂರು

ಸಚಿವರು ಆದಷ್ಟು ಬೇಗ ಗುಣಮುಖರಾಗಲಿ , ಭಗವಂತ ಅವರಿಗೆ ಒಳ್ಳೆ ಆರೋಗ್ಯ ನೀಡಲಿ…..! ಬಸವರಾಜ್ ಧಡೇಸೂಗೂರು

ಕಾರಟಗಿ : ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಗಡಗಿ ಎದೆ ನೋವಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರ ಸಲಹೆಯಂತೆ ಒಂದು ಸ್ಟಂಟನ್ನು ಅಳವಡಿಸಿಕೊಂಡಿರುತ್ತಾರೆ.

ಸಚಿವರ ಅನಾರೋಗ್ಯದ ವಿಚಾರ ತಿಳಿದುಕೊಂಡಿರುವ ಕನಕಗಿರಿಯ ಮಾಜಿ ಶಾಸಕ ಬಸರಾಜ್ ದಡೆಸೂಗುರು ಶಿವರಾಜ್ ಎಸ್ ತಂಗಡಗಿ ಸಾಹೇಬ್ರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು ಸಚಿವರ ಅನಾರೋಗ್ಯದ ವಿಚಾರ ತಿಳಿದು ಆಶ್ಚರ್ಯವಾಯಿತು, ನಿರಂತರ ಸಕ್ರಿಯರಾಗಿ ಇರುವ ಅವರಿಗೆ ಏಕಾಏಕಿ ಯಾಕೆ ಈ ಥರ ಆಯ್ತು ಅಂತ ಯೋಚಿಸಿದೆ

ಸಚಿವರು ನಾನು ರಾಜಕೀಯ ವಿರೋಧಿಗಳು ಮಾತ್ರ ನಮ್ಮಿಬ್ಬರ ನಡುವೆ ಯಾವುದೇ ವಯಕ್ತಿಕ ವೈರತ್ವ ಇಲ್ಲ, ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!