ವಾಲ್ಮೀಕಿ ನಿಗಮದ ಹಣವನ್ನು ಕಾಂಗ್ರೆಸ್ ಸರ್ಕಾರ ದೋಚಿದೆ: ಜನಾರ್ದನ ರೆಡ್ಡಿ
ನಾಗೇಂದ್ರನನ್ನು ಎರಡು ವರ್ಷ ಜೈಲಿನಲ್ಲಿ ಇಟ್ಟಿದ್ದು ಯುಪಿಎ ಸರ್ಕಾರ ಅನ್ನೋದನ್ನು ನಾಗೇಂದ್ರ ಮರೆತಿದ್ದಾನೆ
ಬಳ್ಳಾರಿ: ವಾಲ್ಮೀಕಿ ಜನಾಂಗದ ಅಭಿವೃದ್ಧಿಗಾಗಿ ಹಾಗು ಏಳೆಗೆ ಮಾಜಿ ಸಿಎಂ ಯಡಿಯೂರಪ್ಪ ನವರು ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರು. ಅಂತಹ ವಾಲ್ಮೀಕಿ ನಿಗಮದ ಹಣವನ್ನು ಕಾಂಗ್ರೆಸ್ ಸರ್ಕಾರ ದೋಚಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು.
ನಾಗೇಂದ್ರ ಬಿಡುಗಡೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರಗಳನ್ನು ಬೀಳಿಸಲು ನಮ್ಮನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಮಾತು ಕೇಳಿ ಇಡೀ ಬಳ್ಳಾರಿ ಜನ ನಗುವ ಪರಿಸ್ಥಿತಿ ಬಂದಿದೆ. 2011 ಸೆಪ್ಟೆಂಬರ್ ನಲ್ಲಿ ನನ್ನನ್ನು ಜೈಲಿಗೆ ಹಾಕಿದ್ದು ಯುಪಿಎ ಸರ್ಕಾರ, 2012 ರಲ್ಲಿ ನಾಗೇಂದ್ರ ಬಂಧನವಾದರು. ಆಗ ಯಾವ ಸರ್ಕಾರ ಇತ್ತು, ಯುಪಿಎ ಸರ್ಕಾರ ಇರಲಿಲ್ಲವೇ? ಎಂದು ರೆಡ್ಡಿ ಪ್ರಶ್ನಿಸಿದರು. 2012 ರಲ್ಲಿ ಆನಂದ್ ಸಿಂಗ್. ಸುರೇಶ್ ಬಾಬು, ನಾಗೇಂದ್ರ, ಸತೀಶ್ ಶೈಲ್ ಸೇರಿ ಐದು ಶಾಸಕರನ್ನು ಬಂಧಿಸಲಾಯಿತು.
ನಾಗೇಂದ್ರ ಬಂಧನಾವಾದಾಗ ಯುಪಿಎ ಸರ್ಕಾರವಿತ್ತು. ಆಗ ನಾಗೇಂದ್ರ ಎರಡು ವರ್ಷ ಜೈಲಿನಲ್ಲಿದ್ದರು. ಹೀಗಾಗಿ ಹಿಂದೆ ಯುಪಿಎ ಸರ್ಕಾರ ಬಂಧನ ಮಾಡಿದ್ದನ್ನು ನಾಗೇಂದ್ರ ಮರೆಯಬಾರದು. ಈ ರೀತಿ ಹುಚ್ಚುಚ್ಚಾಗಿ ಮಾತಾಡಬಾರದು ಮಾತಾಡಿದರೆ ನಾನು ಜನತೆಯ ಮುಂದೆ ಎಲ್ಲಾ ಬಿಚ್ಚಿಡುತ್ತೇನೆ,
ನಾಗೇಂದ್ರ ಮೇಲೆ ದೊಡ್ಡ ದೊಡ್ಡ ಆರೋಪವಿದೆ ಎಂದು ಚಾರ್ಜ್ ಶೀಟ್ ನೋಡಿದರೆ ಗೊತ್ತಾಗ್ತದೆ. ಬಿಜೆಪಿ ಮೇಲೆ ಗೂಬೆ ಕೂರಿಸಿ ಹೀರೊಯಿಸಂ ತೋರಿಸೋಕೆ ಹೋಗಬೇಡಿ. ವಾಲ್ಮೀಕಿ ನಿಗಮದ ಹಣವನ್ನು ವೈಯಕ್ತಿಕವಾಗಿ ಬಳಿಸಿದ್ದಾರೆ. ವಿಮಾನ ಪ್ರಯಾಣ, ಪೆಟ್ರೋಲ್ ಡಿಸೆಲ್, ಮನೆ ವಿದ್ಯುತ್ ಬಿಲ್, ಲ್ಯಾಂಬರ್ಗಿನಿ ಕಾರ್ ಗೆ ತೆಗೆದುಕೊಂಡಿದ್ದರು. ಸಾಕ್ಷಿ ಸಮೇತ, ಬ್ಯಾಂಕ್ ನವರು ದಾಖಲೆ ಮುಂದಿಟ್ಟುಕೊಂಡು ಸೀಜ್ ಮಾಡಲಾಗಿದೆ. 2024 ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕೊಪ್ಪಳ ರಾಯಚೂರಿಗೆ ಖರ್ಚು ಮಾಡಿದ್ದಾರೆ. 14 ಕೋಟಿಗೂ ಹೆಚ್ಚು ಹಣವನ್ನು ಬಳ್ಳಾರಿಯ ಮೂರು ಶಾಸಕರಿಗೆ ಹಣ ಹಂಚಲು ಕೊಟ್ಟಿದ್ದಾರೆ.
ಶಾಸಕರಾದ ನಾರಾ ಭರತ್ ರೆಡ್ಡಿ. ಗಣೇಶ್, ಎನ್.ಟಿ. ಶ್ರೀನಿವಾಸ್ ಗೆ 14 ಕೋಟಿಗೂ ಹೆಚ್ಚು ಹಣ ಹಂಚಲು ಕೊಟ್ಟಿದ್ದಾರೆ, ಒಬ್ಬೊಬ್ಬ ಕಾರ್ಯಕರ್ತರಿಗೆ ತಲಾ ಹತ್ತು ಸಾವಿರ ಕೊಟ್ಟಿದ್ದಾರೆ. ತೆಲಂಗಣದಲ್ಲೂ ನಮ್ಮ ವಾಲ್ಮೀಕಿ ನಿಗಮದ ಹಣ ಖರ್ಚಾಗಿದೆ. 20.19 ಕೋಟಿ ಹಾಗೂ ನಾಲ್ಕು ಕೋಟಿ ಮದ್ಯ ಖರೀದಿ, 50 ಲಕ್ಷ ಓಡಾಟಕ್ಕೆ ಮಾಡಿದ್ದಾರೆ. ಖರ್ಚು ಇದೆಲ್ಲವೂ ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ. ದೇಶದಲ್ಲಿ ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರವಾಗಿದೆ. ಇದು ಬ್ಯಾಂಕ್ ಮಾಡಿರೋ ಹಗರಣ ಎಂದು ನಾಗೇಂದ್ರ ನಾಚಿಕೆಗೇಡಿನ ಹೇಳಿಕೆ ಕೊಟ್ಟಿದ್ದಾರೆ. ಇಡಿ ತನಿಖೆ ಇನ್ನೂ ಮುಗಿದಿಲ್ಲ. ಇನ್ನೂ ಆಳ ತನಿಖೆ ಮಾಡಲಿದ್ದಾರೆ ಎಂದರು.
ನಾಳೆ (ಅ.18) ಸಂಡೂರಿನಲ್ಲಿ ಮನೆ ಗೃಹ ಪ್ರವೇಶ ನಾಳೆಯಿಂದ ಶುರುವಾಗುತ್ತದೆ. ಜವಾಬ್ದಾರಿ ಇದೆ. ನಿಭಾಯಿಸುವೆ ಎಂದರು. ಚುನಾವಣೆ ನಡೆಯಲಿದೆ. ಕೆಲಸ ನನಗೂ ಒಂದು ಅದನ್ನ ನಾನು
ಜನಾರ್ದನ ರೆಡ್ಡಿ ನಾಗೇಂದ್ರ ಅವರಿಂದ ಸಂಡೂರು ಹೈ ವೋಲ್ವೇಜ್ ಅಗುತ್ತಿದೆಯಾ ಎಂಬ ಪ್ರಶ್ನೆಗೆ ನಾಗೇಂದ್ರನಲ್ಲಿ ಈಗಾಗಲೇ ಹೈ ಓಲ್ವೇಜ್ ಇದೆ. ಚುನಾವಣೆ ಕಣವನ್ನು ಅವರೇನು ಹೈವೋಲ್ವೇಜ್ ಮಾಡುವುದು ಬೇಡ. ಈಗ ಅವರಲ್ಲಿರುವ ವೋಲ್ವೆಜ್ ಇನ್ನೂ ಹೆಚ್ಚಾಗಿ ಬ್ಲಾಸ್ಟ್ ಆಗದಿದ್ದರೆ ಸಾಕು ಎಂದು ಜನಾರ್ದನ ರೆಡ್ಡಿ ಲೇವಡಿ ಮಾಡಿದರು.