ಕೊಪ್ಪಳಜಿಲ್ಲಾ ಸುದ್ದಿಗಳು

ಸೆ 20 ರಂದು ನಡೆಯುವ ಪಂಚಮಸಾಲಿ ಸಮಾಜ ಸಂಘದ ಅಧಿಕೃತ ಸಭೆಗೆ ಕರೆ,,

ಜಿಬಿ ನ್ಯೂಸ್ ಕನ್ನಡ ಕೊಪ್ಪಳ.

ಕೊಪ್ಪಳ : ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ರಾಜ್ಯ ಘಟಕದ ವತಿಯಿಂದ ಸಂಘದ ರಾಜ್ಯಮಟ್ಟದ ಸಾಮಾನ್ಯ ಸಭೆ ಬರುವ ಸೆ. 20ರ ರವಿವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗ ರಸ್ತೆ ಹರಿಹರ ನಗರದ ಹೆಚ್ ಕೆ. ವೀರಪ್ಪ ಸಭಾ ಭವನದಲ್ಲಿ ಜರುಗಲಿದೆ ಎಂದು ಸಂಘದ ರಾಜ್ಯ ಅಧ್ಯಕ್ಷರಾದ ಸೋಮನ ಗೌಡ ಎಂ ಮಾಲಿಪಾಟೀಲ್ ರವರು ತಿಳಿಸಿದ್ದಾರೆ,

ಅವರು ಶುಕ್ರವಾರ ಇಲ್ಲಿನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಸಂಘದ ಉಚ್ಛಾಟಿತ ಪ್ರಧಾನ ಕಾರ್ಯದರ್ಶಿಯವರು ಆಗಸ್ಟ್ 9 ರಂದು ಕರೆದಿರುವ ಸಭೆ ಸಮಂಜಸವಲ್ಲ ಮತ್ತು ಅದು ಕಾಯ್ದೆ ಕ್ರಮವು ಅಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕಾರಿ ಸಮಿತಿ ಸಭೆ ಕರೆಯಲು ರಾಜ್ಯ ಅಧ್ಯಕ್ಷರ ಅನುಮತಿ ಕಡ್ಡಾಯ ಅನುಮತಿ ಇಲ್ಲದೆ ಕರೆಯುವ ಸಭೆ ಕಾನೂನುಬಾಹಿರ ವಾಗಿರುತ್ತದೆ ಎಂದು ತಿಳಿಸಿದ ಅವರು ಸದರಿ ಅನಧಿಕೃತ ಸಭೆಗೆ ಸಮಾಜದ ಸದಸ್ಯರು ಪದಾಧಿಕಾರಿಗಳು ಯಾರು ಕೂಡ ಭಾಗವಹಿಸಬಾರದು ಎಂದು ಸ್ಪಷ್ಟಪಡಿಸಿದರು, ಸಂಘದಲ್ಲಿ ಸುಮಾರು 48 ಕೋಟಿ ವ್ಯವಹಾರ ನಡೆದಿದೆ ಲೆಕ್ಕಪತ್ರಗಳು ಸಭೆಯಲ್ಲಿ ಮಾಹಿತಿ ನೀಡಬೇಕು, ಸಂಘದಲ್ಲಿ ಪೀಠದಲ್ಲಿ ಗೊಂದಲ ಸೃಷ್ಟಿಸುವವರನ್ನು ಯಾರೇ ಆಗಿರಲಿ ಅವರಿಗೆ ಸಂಘದಲ್ಲಿ ಮುಂದುವರಿಯಲು ಅವಕಾಶ ನೀಡುವುದಿಲ್ಲ, ರಾಜ್ಯದಲ್ಲಿ ಸುಮಾರು 80 ಲಕ್ಷ ಜನ ಪಂಚಮಸಾಲಿ ಸಮಾಜ ಬಾಂಧವರು ಇದ್ದಾರೆ ಅವರೆಲ್ಲರನ್ನು ಒಗ್ಗೂಡಿಸಿ ಸಂಘ ಬೆಳೆಸುವ ನಿಟ್ಟಿನಲ್ಲಿ ಬರುವ ಸೆಪ್ಟೆಂಬರ್ 20 ರಂದು ಸಂಘದ ಸಾಮಾನ್ಯ ಸಭೆ ಕರೆಯಲಾಗಿದೆ ಅಂದಿನ ಸಭೆಗೆ ತಪ್ಪದೆ ಎಲ್ಲರೂ ಭಾಗವಹಿಸಬೇಕು, ಸಂಘದ ಸದಸ್ಯತ್ವ ಅಭಿಯಾನ ಚಾಲ್ತಿಯಲ್ಲಿದ್ದು ಸಮಾಜದ ಎಲ್ಲರೂ ಸಂಘದ ಸದಸ್ಯತ್ವ ಹೊಂದಲು ಮನವಿ ಮಾಡಿದರು ಹಾಗೂ ಸಾಮಾನ್ಯ ಸಭೆಯ ದಿನಾಂಕ ನಿಗದಿಯಾಗಿದ್ದು ಸಂಘದ ಬೈಲಾ ದಲ್ಲಿ ಏನಾದರೂ ತಿದ್ದುಪಡಿಗಳನ್ನು ತರಲು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಅಧ್ಯಕ್ಷರಾದ ಸೋಮನ ಗೌಡ ಎಂ ಮಾಲಿಪಾಟೀಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್, ಜಿಲ್ಲಾ ಅಧ್ಯಕ್ಷ ಬಸವನಗೌಡ ತೊಂಡಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ ಹಾಲಸಮುದ್ರ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!