
ರಿಪೋಟರ್ ನ ಜೀವಹಾನಿಗೆ ಹುನ್ನಾರ ? ಪೋಟೋ ಪ್ರಿಂಟ್ ತೆಗಿಸಿ ಸುಪಾರಿ ಕೊಟ್ನಾ ? ಸಿಕ್ಕಿಬಿದ್ದವನ ಮಾತಿನಲ್ಲಿ ದಟ್ಟ ಅನುಮಾನ !
ಕಾರಟಗಿ : ತಾಲೂಕಿನ ಬೇವಿನಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ವರದಿಗಾರ ಸುಂದರರಾಜ್ ಅವರ ಜೀವ ಹಾನಿಗೆ ಹುನ್ನಾರ ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಹಿತಾಶಕ್ತಿಗಾಗಿ ನಿರಂತರ ವರದಿಗಳನ್ನು ಬರೆಯುತ್ತಾ ಪತ್ರಿಕಾ ಕರ್ತವ್ಯ ನಿರ್ವಹಿಸುವ ಸುಂದರರಾಜ್ ಇವರು ಪೊಲೀಸ್ ವಾರ್ತೆ ದಿನ ಪತ್ರಿಕೆಗೆ ಹಾಗೂ ಜಿಬಿ ನ್ಯೂಸ್ ವೆಬ್ ಸೈಟ್ ಗೆ ಸುದ್ದಿಗಳನ್ನು ಬರೆದು ಕಳುಹಿಸುತ್ತಿದ್ದಾರೆ. ಹಾಗೂ ಕೊತ್ವಾಲ್ ನ್ಯೂಸ್ YOUTUBE ಚಾನೆಲ್ ವರದಿಗಾರನಾಗಿ ಸುದ್ದಿಗಳ ಬಿತ್ತರಿಸುತ್ತಿದ್ದಾರೆ.
ಕಾರಟಗಿ ತಾಲೂಕಿನ ಪನ್ನಾಪುರ ಹತ್ತಿರದ ಬಸವಣ್ಣ ಕ್ಯಾಂಪ್ ನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ದೂರು ನೀಡಿದ್ದರು. ಸರ್ವೇ ನಂಬರ್ 41 ರ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಸಮಾಧಿ ಕಟ್ಟಡ ನಿರ್ಮಾಣ. ಗ್ರಾಮದ ಸಿಎಲ್ 07 ಬಾರ್ ನಿಯಮ ಉಲ್ಲಂಘನೆ.ಸರ್ಕಾರಕ್ಕೆ ವಂಚಿಸಿ ಬಿಪಿಎಲ್ ಪಡಿತರ ಚೀಟಿ ದುರುಪಯೋಗ ಕುರಿತಂತೆ ಗ್ರಾಮದ ವೆಂಕೋಬ ತಂದೆ ದಿ.ಈರಣ್ಣ ಅವರ ವಿರುದ್ಧ ದಾಖಲೆ ಸಮೇತ ದೂರು ನೀಡಿ ನಿರಂತರ ಸರಣಿ ಸುದ್ದಿಗಳನ್ನು ರಿಪೋಟರ್ ಸುಂದರರಾಜ್ ಪ್ರಸಾರ ಮಾಡಿದ್ದರು. ಹಾಗೂ ಪತ್ರಿಕೆಗಳಲ್ಲಿಯೂ ಸುದ್ದಿ ಪ್ರಸಾರ ಮಾಡಿದ್ದರು. ಸುದ್ದಿಗಳ ಪ್ರಸಾರ ಮಾಡದಂತೆ ಹಾಗೂ ಕೊಟ್ಟಿರುವ ದೂರುಗಳ ಹಿಂಪಡೆಯುವಂತೆ ನಿರಂತರ ಒತ್ತಡವೂ ಹೇರಲಾಗಿತ್ತು. ಆದರೂ ನಾನು ಯಾವುದೇ ಒತ್ತಡಕ್ಕೆ ಮಣಿಯದ ಕಾರಣ ಜೀವ ಹಾನಿಗೆ ಹುನ್ನಾರ ನಡೆಯುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ

ಬೆಳಕಿಗೆ ಬಂದ ಘಟನೆ : ಸಿಂಧನೂರು ತಾಲೂಕಿನ ಹೊಸಳ್ಳಿ ಕ್ಯಾಂಪಿನಿಂದ ನಮ್ಮ ಅಳಿಯನಿಂದ ನಿನ್ನೆ ಬೆಳಗ್ಗೆ 11.30 ಘಂಟೆ ಸುಮಾರಿಗೆ ಕರೆ ಬರುತ್ತದೆ. ಮಾವ ಯಾರೋ ಒಬ್ಬ ವ್ಯಕ್ತಿ ನನ್ನ ಹತ್ರ ನಿನ್ನ ಫೋಟೋ ಪ್ರಿಂಟ್ ತೆಗೆಸಿಕೊಂಡು ಹೋದ, ಯಾಕೆ ಈ ಫೋಟೋ ಎಂದು ಕೇಳಿದರೆ ಆಫೀಸ್ ಗೆ ಕೊಡಬೇಕು ಎಂದು ಹೇಳಿದ್ದಾನೆ. ಶ್ರೀಪುರಂ ಜಂಕ್ಷನ್ ಸಿಂಧನೂರು ಕಡೆ ಹೋದ ಎಂದು ಹೇಳಿದನು. ಆಗ ಪ್ರಿಂಟ್ ತೆಗೆಸಿಕೊಂಡ ವ್ಯಕ್ತಿಯ ಫೋಟೋ ನನ್ನ ವಾಟ್ಸಪ್ ಗೆ ಹಾಕಿಸಿ ಕೊಂಡು ನೋಡಲಾಗಿ ಆ ವ್ಯಕ್ತಿ ಬಸವಣ್ಣ ಕ್ಯಾಂಪ್ ನ ವೆಂಕೋಬ ತಂದೆ ದಿ.ಈರಣ್ಣ ಎಂದು ತಿಳಿದಿರುತ್ತದೆ. ಬಸವಣ್ಣ ಕ್ಯಾಂಪ್ ನ ಈ ವ್ಯಕ್ತಿಯ ಕಾನೂನು ಬಾಹಿರ ಕೆಲಸಗಳ ಕುರಿತು ನಿರಂತರ ಸುದ್ದಿ ಮಾಡುವುದನ್ನು ಸಹಿಸದೆ ನನ್ನ ವಿರುದ್ಧ ಜೀವಹಾನಿಗೆ ಸಂಚು ರೂಪಿಸುತ್ತಿದ್ದಾನೆ ಎಂದು ಅನುಮಾನ ದಟ್ಟವಾಗಿದೆ. ಯಾಕೆಂದರೆ ಯಾವುದೇ ಕಚೇರಿಯಲ್ಲಿ ಅಧಿಕಾರಿಗಳು ಯಾವುದೇ ವ್ಯಕ್ತಿಯ ಫೋಟೋ ಕೇಳೋದಿಲ್ಲ ಆದರೆ ಈ ವ್ಯಕ್ತಿ ಅಧಿಕಾರಿಗಳಿಗೆ ತೋರಿಸಬೇಕು ಎಂದು ನನ್ನ ಫೋಟೋ ಪ್ರಿಂಟ್ ತೆಗಿಸಿಕೊಂಡಿರುವುದು ನನ್ನ ಕೊಲೆಗೆ ಸುಪಾರಿ ಸಂಚು ರೂಪಿಸುತ್ತಿದ್ದಾನೆ ಎಂದು ಅನುಮಾನ ದಟ್ಟವಾಗಿದ್ದು, ಪೋಟೋ ಪ್ರಿಂಟ್ ತೆಗೆಸಿ ಯಾರಿಗೆ ಕೊಟ್ಟ ? ನನ್ನ ಜೀವಕ್ಕೆ ಅಪಾಯ ಸಂಭವಿಸಿದರೆ ಅದಕ್ಕೆ ವೆಂಕೋಬ ತಂದೆ ದಿವಂಗತ ಈರಣ್ಣ ಈತನೇ ಕಾರಣ. ರಕ್ಷಣೆಗಾಗಿ ದೂರು ನೀಡುತ್ತೇನೆ ಎಂದಿದ್ದಾರೆ.




