ಕೊಪ್ಪಳಜಿಲ್ಲಾ ಸುದ್ದಿ

ಸಾರ್ವಜನಿಕರ ಅನುಕೂಲಕ್ಕೆ ಜಾತ್ರೆಯಲ್ಲಿ ಉಕ್ಕಡ ಪೊಲೀಸ್ ಠಾಣೆ: ಸೈಬರ್ ಕ್ರೈಂ ಜಾಗೃತಿ

 

ಕೊಪ್ಪಳ ಜನವರಿ 15 : ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಾತ್ರೆಯಲ್ಲಿ ಉಕ್ಕಡ ಪೊಲೀಸ್ ಠಾಣೆಯನ್ನು (ಔಟ್ ಪೋಸ್ಟ್) ಬುಧವಾರ ತೆರೆಯಲಾಯಿತು.

ಜಾತ್ರೆಯಲ್ಲಿ ತೆರೆಯಲಾದ ಉಕ್ಕಡ ಪೊಲೀಸ್ ಠಾಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ ಅವರು ಉದ್ಘಾಟಿಸಿದರು.

ಸೈಬರ್ ಕ್ರೈಂ ಬಗ್ಗೆ ಜಾಗೃತಿ: ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೊಪ್ಪಳ ಜಿಲ್ಲಾ ಪೊಲೀಸ್ ಹಾಗೂ ಸೈಬರ್, ಕೊಪ್ಪಳದ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯು ಮುಂದಾಗಿದ್ದು, ಜಾತ್ರೆಯ ಉಕ್ಕಡ ಪೊಲೀಸ್ ಠಾಣೆಯ ಮುಂಭಾಗದಲ್ಲಿ `ನನಗೆ ಸೈಬರ್ ಕ್ರೈಂ ಜಾಗೃತಿ ಇದೆ ನಾನು ಸೈಬರ್ ಮೋಸಕ್ಕೆ ಒಳಗಾಗುವುದಿಲ್ಲ’ ಮತ್ತು ನೀವು ಸೈಬರ್ ಅಪರಾಧಕ್ಕೆ ಒಳಗಾಗಿದ್ದರೆ, ತಕ್ಷಣ 24*7 ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ’ ಎಂಬ ಸಂದೇಶವಿರುವ ಸೆಲ್ಫಿ ಪಾಯಿಂಟ್ ನಿರ್ಮಿಸಿ ಅರಿವು ಮೂಡಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ ಕುಮಾರ, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button