ರಾಜಕೀಯರಾಷ್ಟ್ರೀಯ ಸುದ್ದಿ

ಷೇರು ಮಾರುಕಟ್ಟೆ ಲೆಕ್ಕಾಚಾರ; ಬಿಜೆಪಿ ಮೊದಲಿಗಿಂತಲೂ ಹೆಚ್ಚು ಸ್ಥಾನ ಪಡೆಯುತ್ತದೆ

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election) ಆರು ಹಂತಗಳ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಆನ್​ಲೈನ್​ ಸ್ಟಾಕ್ ಟ್ರೇಡಿಂಗ್ ಮತ್ತು ಹೂಡಿಕೆ ಸಂಸ್ಥೆಯಾಗಿರುವ ಐಐಎಫ್ಎಲ್ ಸೆಕ್ಯುರಿಟೀಸ್ ತನ್ನ ಸಮೀಕ್ಷೆಯನ್ನು ಪ್ರಕಟಿಸಿದೆ. ಅದರ ಪ್ರಕಾರ ಈ ಬಾರಿ ಬಿಜೆಪಿ 320 ಸ್ಥಾನಗಳನ್ನು ಸಲೀಸಾಗಿ ಗೆಲ್ಲಲಿದೆ. ಇದು 2019ರ 303 ಸೀಟ್​ಗಳಿಂತ ಅಧಿಕ. ಆರನೇ ಹಂತದ ಮತದಾನ ಸೇರಿದಂತೆ ಬಿಜೆಪಿಗೆ ಹೆಚ್ಚು ಮತಗಳು ಬೀಳುವ ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ 3 ಶೇಕಡಾ ಮತ ಚಲಾವಣೆ ಕುಸಿತ ಕಂಡಿದೆ. (ಹಿಂದಿಯೇತರ ರಾಜ್ಯಗಳಲ್ಲಿ 0.6 ಶೇಕಡಾ ಕುಸಿತ) ಇದು ಬಿಜೆಪಿಗೆ ನಷ್ಟ ಎಂದು ಅಂದಾಜಿಸಲಾಗುತ್ತದೆ. ಇದರ ಹೊರತಾಗಿಯೂ, ಉತ್ತರ ಪ್ರದೇಶ (ಎಸ್ಪಿ-ಬಿಎಸ್ಪಿ ಮೈತ್ರಿಯ ಅನುಪಸ್ಥಿತಿ), ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸಿಗುವ ಸ್ಥಾನಗಳ ಲಾಭಗಳ ಮೂಲಕ ಬಿಜೆಪಿ ಬಹುಮತ ಹೆಚ್ಚಿಸಿಕೊಳ್ಳಲಿದೆ ಎಂದು ಬ್ರೋಕರೇಜ್ ಸಂಸ್ಥೆ ಅಂದಾಜಿಸಿದೆ.

ಒಟ್ಟು ಆರು ಹಂತಗಳ ಮತದಾನ ಮುಕ್ತಾಯವಾಗಿದ್ದು ಶೇಕಡಾ 89ರಷ್ಟು ಮತಗಳು ಚಲಾವಣೆಯಾಗಿದೆ. ಈ 486 ಸ್ಥಾನಗಳ ಪೈಕಿ ಬಿಜೆಪಿ 278 ಸ್ಥಾನಗಳಲ್ಲಿ ಗೆಲುವು ಸಾಧಿಸಿಲಿದೆ. ಜೂನ್ 1 ರಂದು ನಡೆಯಲಿರುವ ಕೊನೆಯ ಹಂತದ ಚುನಾವಣೆಗೆ ಮುಂಚಿತವಾಗಿ ಮೊದಲ ಎರಡು ಹಂತಗಳಲ್ಲಿ ಮತದಾನದ ಪ್ರಮಾಣ ಕುಸಿತ ಕಂಡಿದೆ. ಆದಾಗ್ಯೂ ಬಿಜೆಪಿ 320ರ ಗಡಿ ಮುಟ್ಟುವುದು ಖಚಿತ ಎಂದು ಅದು ಅಂದಾಜಿಸಿದೆ. ಇದೇ ವೇಳೆ ಕೊನೇ ಹಂತದ ಮತದಾನ 2019 ರ ಮಟ್ಟಕ್ಕಿಂತ ಸ್ವಲ್ಪ ಕಡಿಮೆಯಾಗಬಹುದು ಸಮೀಕ್ಷೆ ಹೇಳಿದೆ.

ಏಪ್ರಿಲ್ 19ರಂದು ಚುನಾವಣೆಗಳು ಪ್ರಾರಂಭವಾದಾಗಿನಿಂದ ಪ್ರಮುಖ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 3 ಪ್ರತಿಶತದಷ್ಟು ಪ್ರಗತಿ ಕಂಡಿದೆ. ಕಡಿಮೆ ಮತದಾನ ಹಾಗೂ ಸರ್ಕಾರದ ಅಸ್ಥಿರತೆಯ ಬಗ್ಗೆ ಇದ್ದ ಆರಂಭಿಕ ಕಳವಳಗಳು ನಿಧಾನವಾಗಿದೆ ಕಡಿಮೆಯಾಗಿದೆ. ಆದರೆ, ಫಿಯರ್ ಗೇಜ್ ಇಂಡಿಯಾ ವಿಐಎಕ್ಸ್ ಪ್ರಕಾರ ಮಾರುಕಟ್ಟೆ ಚಂಚಲತೆ ಮುಂದುವರಿದಿದೆ.

1951-67ನ್ನು ಹೊರತುಪಡಿಸಿ ಭಾರತದಲ್ಲಿ ಸತತವಾಗಿ ನಡೆದ 3 ಲೋಕಸಭಾ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳಗೊಂಡ ಉದಾಹರಣೆಗಳು ಇಲ್ಲ. ಅಂತೆಯೇ 2014 ಮತ್ತು 2019 ರ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳ ಕಂಡ ನಂತರ 2024 ರ ಚುನಾವಣೆಯಲ್ಲಿ ಯಥಾವತ್​ ಪ್ರಮಾಣ ಸ್ವಲ್ಪ ಕುಸಿತ ಕಂಡಿದೆ ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ಹೇಳಿದೆ.

ಐಐಎಫ್ಎಲ್ ಸೆಕ್ಯುರಿಟೀಸ್ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ 2019 ರ ಒಟ್ಟು ಸ್ಥಾನಕ್ಕೆ ಇನ್ನೂ 10 ಸ್ಥಾನಗಳನ್ನು ಸೇರ್ಪಡೆಗೊಳಿಸಲಿದೆ. ಅಂದರೆ ಒಟ್ಟು 80ರಲ್ಲಿ 72 ಬಿಜೆಪಿ ಪಾಲಾಗಲಿದೆ. 2019ರಲ್ಲಿ ಅದು 62 ಆಗಿತ್ತು. ನರೇಂದ್ರ ಮೋದಿ ನೇತೃತ್ವದ ಪಕ್ಷವು ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ 2019ಕ್ಕಿಂತ ತಲಾ 5 ಹೆಚ್ಚುವರಿ ಸ್ಥಾನಗಳನ್ನು ಗಳಿಸಲದೆ. ಬಂಗಾಳದಲ್ಲಿ 18ರಿಂದ 23ಕ್ಕೆ ಏರಿಕೆಯಾದರೆ, ಒಡಿಶಾದಲ್ಲಿ 8ರಿಂದ 13ಕ್ಕೆ ಜಿಗಿಯಲಿದೆ. ಅಲ್ಲದೆ, ತೆಲಂಗಾಣ ಮತ್ತು ಆಂಧ್ರಪ್ರದೇಶ ತಲಾ 3 ಸ್ಥಾನಗಳನ್ನು ಪಡೆಯಲಿದೆ.

ಬೇಸ್​ ಪಾಯಿಂಟ್​ಗಳ ಕುಸಿತ

6 ಹಂತಗಳ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮತದಾನದ ಪ್ರಮಾಣದಲ್ಲಿ ಸರಾಸರಿ 150 ಬೇಸಿಸ್ ಪಾಯಿಂಟ್​​ಗಳ ಕುಸಿತ ಕಂಡುಬಂದಿದೆ. ಮೊದಲ ಹಂತದಲ್ಲಿ ಮತದಾನದ 400 ಬೇಸಿಸ್ ಪಾಯಿಂಟ್​ಗಳ ಕುಸಿತ ಹೋಲಿಸಿದರೆ ಇದು ಕಡಿಮೆ. ಹಂತ 4 ಮತ್ತು 5ನೇ ಹಂತದಲ್ಲಿ 2019 ಕ್ಕೆ ಹೋಲಿಸಿದರೆ ಅಲ್ಪ ಏರಿಕೆ ಕಂಡಿದ್ದು. 6 ನೇ ಹಂತವು ಅಲ್ಪ ಕುಸಿತ ದಾಖಲಾಗಿದೆ ಐಐಎಫ್ಎಲ್ ಸೆಕ್ಯುರಿಟೀಸ್ ಹೇಳಿದೆ.

2019 ರ ಚುನಾವಣೆಗೆ ಹೋಲಿಸಿದರೆ 486 ಸ್ಥಾನಗಳಲ್ಲಿ ಒಟ್ಟು 156 ಸ್ಥಾನಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ತಿಳಿಸಿದೆ.

ಅನಿರೀಕ್ಷಿತ ಫಲಿತಾಂಶ ಅಸಾಧ್ಯ

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ಪ್ರಮಾಣದ ಮತ ಹಂಚಿಕೆ ವ್ಯತ್ಯಾಸ ಆಗಿದೆ. ಹೀಗಾಗಿ 2024 ರ ಚುನಾವಣೆಯ ಫಲಿತಾಂಶ 2004 ರ ಚುನಾವಣೆಗಳಂತೆ ಅಚ್ಚರಿಯ ಫಲಿತಾಂಶವನ್ನು ಪ್ರಕಟಿಸುವುದಿಲ್ಲ ಎಂದು ಐಐಎಫ್ಎಲ್ ದೃಢವಾಗಿ ಹೇಳಿದೆ.

ಕರ್ನಾಟಕದಲ್ಲಿ ನಷ್ಟ

“ಮೈತ್ರಿ / ಅಭ್ಯರ್ಥಿ ಆಯ್ಕೆ ಸಮಸ್ಯೆಗಳಿಂದಾಗಿ ರಾಜಸ್ಥಾನ, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳಲ್ಲಿ ಬಿಜೆಪಿಗೆ ನಷ್ಟವಾಗಬಹುದು. ಆದರೆ, ಮಹಾರಾಷ್ಟ್ರದಲ್ಲಿ ಎನ್​ಡಿಎ 2 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಅಂದಾಜಿಸಿದೆ. 2019 ರಲ್ಲಿ 224 ಸ್ಥಾನಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮತ ಪಡೆಯುವ ಮೂಲಕ ಬಿಜೆಪಿ ತನ್ನ ಬಹುಮತವನ್ನು ಉಳಿಸಿಕೊಳ್ಳುತ್ತದೆ ಐಐಎಫ್ಎಲ್ ಸೆಕ್ಯುರಿಟೀಸ್ ಹೇಳಿದೆ.

Related Articles

Leave a Reply

Your email address will not be published. Required fields are marked *

Back to top button