ಹೆಗ್ಗನಹಳ್ಳಿಯಲ್ಲಿ ಕಾರ್ಮಿಕ ರಕ್ಷಣಾ ವೇದಿಕೆ ಸಂಘ ಹಾಗೂ ಕಚೇರಿ ಉದ್ಘಾಟನೆ
ಪಬ್ಲಿಕ್ ರೈಡ್ ನ್ಯೂಸ್
ಪೀಣ್ಯ ದಾಸರಹಳ್ಳಿ : ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಘಟಕದ ಅಧ್ಯಕ್ಷ ಎಚ್ ಎಂ ಮಂಜುನಾಥ್ ನೇತೃತ್ವದಲ್ಲಿ ಕಾರ್ಮಿಕ ರಕ್ಷಣಾ ವೇದಿಕೆ ಸಂಘ ಹಾಗೂ ಕಚೇರಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷ ಎಚ್ ಇ ಕೃಷ್ಣಪ್ಪ, ಹೆಗ್ಗೇನಹಳ್ಳಿ ಬಿಬಿಎಂಪಿ ಸದಸ್ಯ ಭಾಗ್ಯಮ್ಮ ಅವರ ಪತಿ ಬಿಜೆಪಿ ಮುಖಂಡ ಕೃಷ್ಣಯ್ಯ, ಪ್ರಿಂಟಿಂಗ್ ಈಶ್ವರ್ ಇನ್ನಿತರರು ಆಗಮಿಸಿ ಸಂಘ ಹಾಗೂ ಕಚೇರಿ ಉದ್ಘಾಟನೆಯನ್ನು ನೆರವೇರಿಸಿದರು . ಕೇಂದ್ರ ಕಚೇರಿ ಬಿಟಿಎಂ ಲೇಔಟ್ ನಲ್ಲಿ i ಸ್ಥಾಪಿಸಿಕೊಂಡು ದೇಶದ ನಾನಾ ರಾಜ್ಯಗಳಲ್ಲಿ ಸಂಘಟನೆಯ ಘಟಕಗಳನ್ನು ಸ್ಥಾಪಿಸಿ ಇದೀಗ ರಾಜ್ಯದ 25 ಜಿಲ್ಲೆಗಳಲ್ಲಿಯೂ ಸಂಘಟನೆಯನ್ನು ಬೆಳೆಸಿದ್ದು ಕಾರ್ಮಿಕರಿಗೋಸ್ಕರ ಅವರ ಸಮಸ್ಯೆ ಹಾಗೂ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಬಗೆಹರಿಸುತ್ತಾ ಬಂದಿರುವ ಇವರ ಸಂಘಟನೆಗೆ ನೂರಾರು ಕಾರ್ಮಿಕರು ಸದಸ್ಯರಾಗಿ ಕರ್ನಾಟಕ ರಾಜ್ಯದಲ್ಲಿ ಬಲಿಷ್ಠ ಸಂಘಟನೆಯಾಗಿ ಬೆಳೆಸುತ್ತಿದ್ದಾರೆ .
ಹೆಗ್ಗೇನಹಳ್ಳಿ ಘಟಕದಲ್ಲಿ ಅಧ್ಯಕ್ಷ ಎಚ್ ಎಮ್ ಮಂಜುನಾಥ್ , ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುನಿಲ್ ಕುಮಾರ್ ಎಚ್ ಎಮ್ , ಗೌರವ ಅಧ್ಯಕ್ಷ ಲಿಂಗೇಶ್ ವೈ ಜೆ , ಉಪಾಧ್ಯಕ್ಷ ಮಂಜು ಪಿ ಎಸ್ , ರಜಾಂಚಿ ಸೇಲ್ವಂ ಇನ್ನಿತರ ಪದಾಧಿಕಾರಿಗಳು ಒಗ್ಗಟ್ಟಾಗಿ ಈ ಭಾಗದಲ್ಲಿ ದೇಶದ ಎರಡನೇ ಕೈಗಾರಿಕೆ ಎಂಬ ಹೆಗ್ಗಳಿಕೆ ಪಡೆದಿರುವ ಪೀಣ್ಯ ಕಾರ್ಮಿಕರಿಗೋಸ್ಕರ ಹಗಲಿರುಳು ಅವರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘಟನೆಯೂ ಬಲಿಷ್ಠವಾಗಿ ಬೆಳೆಯುವುದಕ್ಕೆ ನಮ್ಮೆಲ್ಲರ ಸಹಕಾರ ಇದೆಯೆಂದು ಮಂಜುನಾಥ್ ಮಾತನಾಡಿದರು .
ಇದೇ ವೇಳೆ ಬಿಜೆಪಿ ಮುಖಂಡ ಕೃಷ್ಣಯ್ಯ , ರಾಜ್ಯಾಧ್ಯಕ್ಷ ಎಚ್ ಈ ಕೃಷ್ಣಪ್ಪ ಕೊಡ ಕಾರ್ಮಿಕರ ಸಮಸ್ಯೆಗಳು ಹಲವಾರು ರೀತಿಯ ಸೌಲಭ್ಯಗಳ ಕುರಿತು ಕೂಲಂಕುಶವಾಗಿ ಮಾತನಾಡಿ ದರು.
ಇದೇ ಸಂದರ್ಭದಲ್ಲಿ ಸಂಘಟನೆಯ ನಾರಾಯಣ ಆಚಾರಿ , ಅಂಬಿಕಾ ಆಚಾರಿ, ಸುಶೀಲಮ್ಮ, ವಿಜಯಕುಮಾರ್, ಬಿಜೆಪಿ ಮುಖಂಡ ಈಶ್ವರ್ , ಯುವ ಘಟಕದ ಅಧ್ಯಕ್ಷ ಸಿದ್ದರಾಜು, ಪ್ರಶಾಂತ್, ವೆಂಕಟೇಶ್, ಜಗದೀಶ್, ಆರ್ ರಮೇಶ್, ಗಂಗಾ ತಿಮ್ಮಯ್ಯ, ಶರತ್, ಇನ್ನಿತರ ಸಂಘಟನೆ ಪದಾಧಿಕಾರಿಗಳು ಕಾರ್ಮಿಕರು ಮಹಿಳೆಯರು ಉಪಸ್ಥಿತರಿದ್ದರು.