Uncategorized

ನಿಧನ ವಾರ್ತೆ ಶ್ರೀ ರಾಚಯ್ಯ ಸರಗಣಾಚಾರ್ (82) ನಿಧನ

ನಿಧನ ವಾರ್ತೆ
ಶ್ರೀ ರಾಚಯ್ಯ ಸರಗಣಾಚಾರ್ (82) ನಿಧನ

ಕುಕನೂರು: ಪಶುವೈದ್ಯರಾದ ಡಾ. ಸುರೇಶ್ ಸರಗಣಾಚಾರ್ ಅವರ ತಂದೆಯವರಾದ ಶ್ರೀ ರಾಚಯ್ಯ ಸರಗಣಾಚಾರ್ (82) ಅವರು ಭಾನುವಾರ ಸಂಜೆ ನಿಧನರಾದರು.
ಮೃತರ ಅಂತ್ಯಕ್ರಿಯೆಯನ್ನು ಸೋಮವಾರ ಮಧ್ಯಾಹ್ನ 2 ಗಂಟೆಗೆ ಕುಕನೂರಿನ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಮೃತರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಪಟ್ಟಣದ ಹಿರಿಯರಾದ ಜಂಗಮ ಸಮಾಜದ ವೇದಮೂರ್ತಿ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ (ಕಳ್ಳಿಮಠ) ಹಾಗೂ ಜಂಗಮ ಸಮಾಜದ ವತಿಯಿಂದ ಸಂತಾಪ ಸೂಚಿಸಲಾಗಿದೆ. ಅಗಲಿದ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಹಾಗೂ ಕುಟುಂಬಸ್ಥರು, ಬಂಧು-ಬಳಗದವರಿಗೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!