
ಗುರು ನಮನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮತೊಂಡಿಹಾಳ ಗ್ರಾಮಸ್ಥರ ಪ್ರೀತಿಗೆ ಚಿರಋಣಿ; ಶಿಕ್ಷಕ ಹೋಮಣ್ಣ
ಕಾರಟಗಿ : ನನ್ನ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಲು ಮೊದಲನೇ ಬಾರಿಗೆ ಈ ಗ್ರಾಮಕ್ಕೆ ಬಂದಾಗ, ಗ್ರಾಮಸ್ಥರು ತೋರಿದ ಪ್ರೀತಿ ವಿಶ್ವಾಸ ಮೂವತ್ತು ವರ್ಷಗಳಾದರು ಮರೆಯಲು ಸಾಧ್ಯವಿಲ್ಲ, ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿರುವುದು ಗುರುವಾರ ನನಗೆ ಹೆಮ್ಮೆ ವಿಷಯವಾಗಿದೆ. ಇಲ್ಲಿಯವರೆಗೂ ಗ್ರಾಮಸ್ಥರ ಪ್ರೀತಿ ನನ್ನ ಮೇಲಿದ್ದು ಇವರ ಈ ಆತ್ಮೀಯತೆಗೆ ನಾನು ಚಿರಋಣಿಯಾಗಿದ್ದೇನೆ ಎಂದು ನಿವೃತ್ತ ಶಿಕ್ಷಕ ಹೋಮಣ್ಣ ಮೇಗಳಮನಿ ಹೇಳಿದರು.
ತಾಲೂಕಿನ ತೊಂಡಿಹಾಳ ದುಂಡಗಿ ಕ್ಯಾಂಪಿನಲ್ಲಿ ಜರುಗಿದ ನಿವೃತ್ತ ಶಿಕ್ಷಕ ಹೋಮಣ್ಣ ಮೇಗಳಮನಿ ಅವರಿಗೆ ಗುರುನಮನ ಹಾಗೂ ಗ್ರಾಮದ ವಿವಿಧ ಹುದ್ದೆಗಳಲ್ಲಿ ಸೇರಿಕೊಂಡು ಗ್ರಾಮದ ಕೀರ್ತಿ ಹೆಚ್ಚಿಸಿದ ಸಾಧಕರಿಗೆ ಸನ್ಮಾನ, ಹಾಗೂ ಸರಕಾರಿ ಶಾಲೆಯಲ್ಲಿ ಕಲಿತು ಮುರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ಕೇಂದ್ರಬಿಂದು ನಿವೃತ್ತ ಶಿಕ್ಷಕ ಹೋಮಣ್ಣ ಮಾತನಾಡಿ, ಅಭಿವೃದ್ಧಿಯೇ ಕಾಣದ ಒಂದು ಸಣ್ಣ ಗ್ರಾಮದಲ್ಲಿ ಮೊದಲು ನನ್ನ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದೆ. ನನ್ನ ಕೈಲಾದ ಮಟ್ಟಿಗೆ ಸಾಧ್ಯವಾದಷ್ಟು ಶಿಕ್ಷಣವನ್ನು ನೀಡಿದ್ದೇನೆ. ಸುಮಾರು 14 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕೆಲಸವನ್ನು ನಿರ್ವಹಿಸಿ ಇದೇ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿಯೇ ನನ್ನ ಸಂಪೂರ್ಣ 30 ವರ್ಷಗಳು ಸಾವಿರಾರು ವಿದ್ಯಾರ್ಥಿಗಳ ಪ್ರೀತಿಯಲ್ಲಿಯೇ ನಿವೃತ್ತಿಯನ್ನು ಹೊಂದಿದ್ದೇನೆ. ಇತ್ತೀಚಿನ ದಿನಮಾನಗಳಲ್ಲಿ ನಮ್ಮ ತೊಂಡಿಹಾಳ ಗ್ರಾಮವು ಅಭಿವೃದ್ಧಿಯನ್ನು ಕಂಡಿದ್ದು ಸುಮಾರು 40 ರಿಂದ 50 ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ಶೈಕ್ಷಣಿಕ ಆರ್ಥಿಕ ಪ್ರಗತಿಯ ಸಂಕೇತವಾಗಿದೆ. ಅದರಲ್ಲೂ ಮುಖ್ಯವಾಗಿ ಇದೇ ಗ್ರಾಮದಿಂದ ನನ್ನ ಶಿಕ್ಷಣ ವೃತ್ತಿಯನ್ನು ಪ್ರಾರಂಭಿಸಿ ಇದೇ ಗ್ರಾಮದಲ್ಲಿ ನಿವೃತ್ತಿಯಾಗುತ್ತಿರುವುದು ಅತ್ಯಂತ ಖುಷಿಯನ್ನು ಉಂಟು ಮಾಡಿದೆ. ಗ್ರಾಮದ ಮುಖಂಡರು ಹಿರಿಯರು ಯುವಕರು ವಿದ್ಯಾರ್ಥಿಗಳು ನನ್ನ ಮೇಲೆ ಇಟ್ಟ ಪ್ರೀತಿ ವಿಶ್ವಾಸವೇ ಈ ದೊಡ್ಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಇವರ ಪ್ರೀತಿ ವಿಶ್ವಾಸದಲ್ಲಿ ನಾನು ಚಿರಋಣಿಯಾಗಿದ್ದೇನೆ ಎಂದರು.
ಈ ಸಮಯದಲ್ಲಿ ತೊಂಡಿಹಾಳ ಮತ್ತು ದುಂಡಗಿ ಕ್ಯಾಂಪ್ ಗ್ರಾಮಗಳಿಂದ ನಿವೃತ್ತಿ ಹೊಂದಿದ ಹಾಗೂ ವರ್ಗಾವಣೆಗೊಂಡ ಶಿಕ್ಷಕರುಗಳಾದ ಸೋಮಲಿಂಗಪ್ಪ, ಶಶಿಧರ, ಮಲ್ಲೇಶಪ್ಪ ಅಡ್ಡೆದಾರ್, ಗಂಗಪ್ಪ ಸಿಂಗನಾಳ, ರಾಚೋಟಪ್ಪ, ವಿರೂಪಾಕ್ಷಿ, ಅಮರಮ್ಮ, ಕನಕರಾಯ, ಬಸವರಾಜ ಹಳೆಗೌಡರ್, ಮಲ್ಲಿಕಾರ್ಜುನ, ಸೇರಿದಂತೆ ಅನೇಕರು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಗ್ರಾಮದ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಸನ್ಮಾನಿಸಲಾಯಿತು. ಹಾಗೂ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಸರಕಾರಿ ನೌಕರರ ತಾಲೂಕ ಅಧ್ಯಕ್ಷರಾದ ಹನುಮಂತಪ್ಪ ನಾಯಕ, ಮುಖ್ಯ ಅತಿಥಿಗಳಾಗ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಘವೇಂದ್ರ, ಸಿಆರ್.ಪಿ ಪ್ರಭುದೇವ್, ಗ್ರಾಮದ ಮುಖಂಡರಾದ ಲೀಲಾಧರನಾಯಕ, ವೀರನಗೌಡ, ಸಣ್ಣ ನಾಗಪ್ಪ, ಯಂಕೋಬಣ್ಣ ನಾಡಿಗೇರ್, ಶ್ರೀ ಶಾರದಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಮಲ್ಲಿಕಾರ್ಜುನ ತೊಂಡಿಹಾಳ, ಭೀಮಣ್ಣ ಕರಡಿ, ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಮಹಬೂಬ್ ಕಿಲ್ಲೆದಾರ್, ಮಂಜುನಾಥ ಬಾದನಟ್ಟಿ ವಿಟ್ಟಲ್ ಜೀರಗಾಳಿ, ಸೋಮನಾಥ ದೊಡ್ಡಮನಿ, ವೆಂಕಟೇಶ್ ಪಿ.ಡಿ.ಓ, ಚನ್ನಬಸಪ್ಪ ವಕ್ಕಳದ್ ಸೇರಿದಂತೆ, ಮರಿಯಣ್ಣ ಇಂಜಿನೀಯರ್, ಶಿಕ್ಷಕರಾದ ಪಂಪಾಪತಿ, ಬಸವರಾಜ ಗೋಮರ್ಸಿ, ರಮೇಶ ತೊಂಡಿಹಾಳ, ಡಾ.ಮಂಜುನಾಥ ಬಡಗೇರ್, ವಿರೇಶ ನಾಡಿಗೇರ್, ಬಸವರಾಜ ಬೆಣಕಲ್, ಗಂಗಪ್ಪ, ಚಂದ್ರು ಮಕಲಮಡಿ, ಸೋಮನಾಥ ಕೊಪ್ಪಳ, ಬಸವರಾಜ ಕಲ್ಗುಡಿ, ತಮ್ಮಣ್ಣ, ಲಕ್ಕಪ್ಪ, ದೇವರಾಜ, ಅತಿಥಿ ಶಿಕ್ಷಕರಾದ ಹನುಮಂತ, ಸೋಮನಾಥ ಸೇರಿದಂತೆ ಗ್ರಾಮದ ಮುಖಂಡರು ಗ್ರಾಮಸ್ಥರು, ಯುವಕರು, ಮಹಿಳೆಯರು ಇದ್ದರು.




