
ಕಾರಟಗಿ ಪುರಸಭೆಯಲ್ಲಿ ರಾಷ್ಟ್ರಗೀತೆಗೆ ಅಪಮಾನ ‘ ನಮಸ್ತೆ ದಿನಾಚರಣೆ ವೇಳೆ ನಡೆದ ಘಟನೆ
ಕಾರಟಗಿ ; ಪುರಸಭೆಯಲ್ಲಿ ನಡೆದ ನಮಸ್ತೆ ದಿನಾಚರಣೆ ವೇಳೆ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಘಟನೆ ನಡೆದಿದೆ. ಪೌರ ಕಾರ್ಮಿಕರ ಕುರಿತಾದ ನಮಸ್ತೆ ದಿನಾಚರಣೆ ಕಾರ್ಯಕ್ರಮ ಪುರಸಭೆಯ ಆರೋಗ್ಯ ನಿರೀಕ್ಷಕರ ಮೇಲುಸ್ತುವಾರಿಯಲ್ಲಿ ನಡೆದಿತ್ತು. ಸಮಾಜದ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅಮೂಲ್ಯವಾದುದು. ಅವರ ಶ್ರಮ ಮತ್ತು ತ್ಯಾಗಕ್ಕೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎನ್ನುವ ಸಂದೇಶ ಸಾರುವ ಮೂಲಧ್ಯೆಯದೊಂದಿಗೆ ಸರ್ಕಾರ ನಮಸ್ತೆ ದಿನಾಚರಣೆ ಕಾರ್ಯಕ್ರಮ ನಡೆಸುತ್ತಿದೆ, ಅದರಂತೆ ಕಾರಟಗಿ ಪುರಸಭೆಯಲ್ಲಿ ನಮಸ್ತೆ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಕೊನೆಯಲ್ಲಿ ಆರೋಗ್ಯ ನಿರೀಕ್ಷಕರ ಮೊಬೈಲ್ ಮೂಲಕ ‘ಸೌಂಡ್ ಬಾಕ್ಸ್
(ಶಬ್ದವನ್ನು ಹೊರಸೂಸುವ ವಿದ್ಯುನ್ಮಾನ ಸ್ಪೀಕರ್) ಗೆ ಸಂಪರ್ಕದ ಮೂಲಕ ರಾಷ್ಟ್ರಗೀತೆ ಗಾಯನವನ್ನು ಪ್ರಾರಂಭಿಸಲಾಯಿತು. ಆದರೆ ರಾಷ್ಟ್ರಗೀತೆ ಗಾಯನ ಜನಗಣಮನ ದಿಂದ ಪ್ರಾರಂಭಗೊಳ್ಳದೆ ನೇರವಾಗಿ ಮೊದಲ ಎರಡು ಸಾಲು ಬಿಟ್ಟು
‘ಪಂಜಾಬ ಸಿಂಧು ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ…… ಸಾಲಿನಿಂದ ಪ್ರಾರಂಭಗೊಂಡಿದೆ, ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರು ಮತ್ತು ಅಧಿಕಾರಿಗಳು ಗಾಯನ ಕೇಳಿ ತಬ್ಬಿಬ್ಬಾಗಿದ್ದಾರೆ, ರಾಷ್ಟ್ರಗೀತೆಯಲ್ಲಿ ಎರಡು ಸಾಲು ಬಿಟ್ಟಿರುವುದು ಗಮನಕ್ಕೆ ಬಂದಿದೆ ಮೊದಲು ನಿಧಾನ ಗತಿಯಲ್ಲಿ ಹಾಡಿ ಪುನಃ ಮತ್ತೆ ಯಥಾ ರೀತಿಯಲ್ಲಿ ರಾಷ್ಟ್ರಗೀತೆ ಯನ್ನು ಹಾಗೆ ಮುಂದುವರಿಸಿದ್ದಾರೆ. ಇದು ಸಂಪೂರ್ಣವಾಗಿ ವಿಡಿಯೋದಲ್ಲಿ ಕಾಣಬಹುದು,
ನಿರೀಕ್ಷಕರ ಮೇಲುಸ್ತುವಾರಿಯಲ್ಲಿ ನಡೆದ ನಮಸ್ತೆ ದಿನಾಚರಣೆ ಕಾರ್ಯಕ್ರಮದಲ್ಲಿ ಮೊಬೈಲ್ ನಲ್ಲಿ ರಾಷ್ಟ್ರಗೀತೆ ಗಾಯನವನ್ನು ಸೌಂಡ್ ಬಾಕ್ಸಿಗೆ ಸಂಪರ್ಕ ಕೊಡಲು ಬಂದ ಆರೋಗ್ಯ ನಿರೀಕ್ಷಕರು ರಾಷ್ಟ್ರಗೀತೆಯನ್ನು ಮೊಬೈಲ್ ನಲ್ಲಿ ಸರಿಯಾಗಿ ಪರಿಶೀಲನೆ ಮಾಡದೆ ಅಲ್ಲಿರುವ ತಾಜುದ್ದೀನ್ ಎನ್ನುವ ಅಧಿಕಾರಿಗೆ ನೀಡಿದ್ದಾರೆ,ತಾಜುದ್ದೀನ್ ಅವರು ಹಾಗೆ ಆನ್ ಮಾಡಿರುವುದರಿಂದ ರಾಷ್ಟ್ರಗೀತೆಯ ಮೊದಲ ಎರಡು ಸಾಲು ಬಾರದೆ ಗಾಯನ ಬಾರದೆ ನೇರವಾಗಿ ಪಂಜಾಬ್ ಸಿಂಧು ಗುಜರಾತ ಮರಾಠ ಎನ್ನುವ ಸಾಲಿನೊಂದಿಗೆ ಪ್ರಾರಂಭಗೊಂಡಿದೆ ಇದು ರಾಷ್ಟ್ರಗೀತೆಗೆ ಮಾಡಿರುವ ಅಪಮಾನ
ರಾಷ್ಟ್ರಗೀತೆಯನ್ನು ಹಾಡಲು ಮತ್ತು ರಾಷ್ಟ್ರ ದ್ವಜಾರೋಹಣಕ್ಕೆ ತನ್ನೆದೆಯಾದ ಗೌರವಯುತವಾದ ನಿಯಮವಿದೆ, ನಿಯಮಗಳನ್ನು ಪಾಲಿಸುವ ಮೂಲಕ ರಾಷ್ಟ್ರಗೀತೆ ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಜವಾಬ್ದಾರಿಯುತ ಭಾರತೀಯರ ಆದ್ಯ ಕರ್ತವ್ಯವಾಗಿದೆ ಆದರೆ ಕಾರಟಗಿ ಪುರಸಭೆಯಲ್ಲಿ ನಡೆದಿರುವ ಈ ಘಟನೆ ರಾಷ್ಟ್ರಗೀತೆಗೆ ಮಾಡಿರುವ ಅಪಮಾನ, ಇದು ಶಿಕ್ಷಾರ್ಹ ಅಪರಾಧವು ಕೂಡ ಹೌದು ಮೇಲಾಧಿಕಾರಿಗಳು ಈ ಘಟನೆ ಕುರಿತು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು




