

*ಜಾನಪದ ಕಲೆಗಳ ವೈಭವ ಅನಾವರಣಕ್ಕೆ ‘ಜಾನಪದ ಬೆಳಗು’ ಕಾರ್ಯಕ್ರಮ*
*ರಾಜ್ಯದ ಖ್ಯಾತ ಜಾನಪದ ಕಲಾವಿದರ ಸಂಗಮ;ಆ.4ರಂದು ಕುಕನೂರಿನಲ್ಲಿ ಅದ್ದೂರಿ ಆಯೋಜನೆ*
ಕುಕನೂರು, ಆ.2: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ಜ್ಯೋತಿ ಆಗು ಜಗಕೆಲ್ಲೆ – ಜಾನಪದ ಬೆಳಗು” ಎಂಬ ವಿಶೇಷ ಜಾನಪದ ವೈಭವ ಕಾರ್ಯಕ್ರಮವು ಆಗಸ್ಟ್ 4, 2026ರಂದು (ಮಂಗಳವಾರ) ಸಂಜೆ 5 ಗಂಟೆಗೆ ಕುಕನೂರಿನ ಶ್ರೀ ಅನ್ನದಾನೇಶ್ವರ ಶ್ರೀಮಠದ ಸಭಾಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಮ.ನಿ.ಪ್ರ. ಡಾ. ಮಹಾದೇವ ಮಹಾಸ್ವಾಮಿಗಳು, ಮುಂಡರಗಿ ಅನ್ನದಾನೇಶ್ವರ ಶಾಖಾಮಠ, ವಹಿಸಲಿದ್ದಾರೆ. ಮಾಜಿ ಸಚಿವರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಿಲಾವತಿ ಪ್ರವೀಣ ಕುಮಾರ್ ಮಧೋಳ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಮಂಜುಳಾ ಯಲ್ಲಪ್ಪ ಕಲ್ಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳದ ಸಹಾಯಕ ನಿರ್ದೇಶಕ ಕರಣ ಕುಮಾರ, ಮುಖಂಡ ಯಂಕಣ್ಣ ಯರಾಸಿ, ಸಮಾಜಸೇವಕ ಕಳಕಪ್ಪ ಕಂಬಳಿ, ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ಅಧ್ಯಕ್ಷ ಶಂಭು ಜೋಳದ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈರಪ್ಪ ಕೂಡಗುಂಟಿ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಸಂಗಮೇಶ ಗುತ್ತಿ, ಪಟ್ಟಣ ಪಂಚಾಯಿತಿ ಸದಸ್ಯ ಪ್ರಶಾಂತ ಅರಬಿರಳಿನ, ಸಂಗಮೇಶ ಕಲ್ಮಠ, ವೀರಯ್ಯ ತೋಂಟದಾರ್ಯಮಠ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಶರಣಪ್ಪ ವಡಗೇರಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಹಬೂಬ್ ಕಿಲ್ಲೆದಾರ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕಳಕಪ್ಪ ಕುಂಬಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಸಬರದ್, ಮಾರುತಿ ಎಸ್. ತಳವಾರ್, ಸುರೇಶ್ ಅಬ್ಬಿಗೇರಿ, ಸಾಹಿತಿಗಳಾದ ಡಾ. ಕೆ.ಬಿ. ಬ್ಯಾಳೆ, ಪಕೀರಪ್ಪ ವಜ್ರಬಂಡಿ, ಶರಣಯ್ಯ ಇಟಗಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ರಾಜ್ಯದ ಖ್ಯಾತ ಜಾನಪದ ಕಲಾವಿದರಿಂದ ಜಾನಪದ ಗೀತೆಗಳು, ಡೊಳ್ಳು ಕುಣಿತ, ಸೋಬಾನೆ ಪದಗಳು, ಭಜನಾ ಪದಗಳು ಹಾಗೂ ವಿವಿಧ ಜಾನಪದ ಕಲಾ ಪ್ರದರ್ಶನಗಳು ನಡೆಯಲಿದ್ದು, ಪ್ರೇಕ್ಷಕರಿಗೆ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣವನ್ನು ಉಣಬಡಿಸಲಿವೆ. ಉತ್ತರ ಕರ್ನಾಟಕದ ಶ್ರೀಮಂತ ಜಾನಪದ ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಜನತೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ. ಜೀವನಸಾಬ ವಾಲಿಕಾರ ಬಿನ್ನಾಳ ಮನವಿ ಮಾಡಿದ್ದಾರೆ.
ವರದಿಗಾರರು: ಚನ್ನಯ್ಯ ಹಿರೇಮಠ, ಕುಕನೂರು




