ಕೊಪ್ಪಳಜಿಲ್ಲಾ ಸುದ್ದಿಗಳು

ಕೊಪ್ಪಳದಲ್ಲಿ ಸಹಕಾರಿಗಳ ಜ್ಞಾನೋತ್ಸವ: ಕೆಸರಟ್ಟಿಯವರಿಂದ ಉದ್ಘಾಟನೆ

ಕೊಪ್ಪಳ : ಕರ್ನಾಟಕ ರಾಜ್ಯದಲ್ಲಿಯೇ ಇಂತಹ ವಿನೂತನ ಕಾರ್ಯಕ್ರಮ ಆಯೋಜನ ರಾಜ್ಯದ ಏಕೈಕ ಸೌಹಾರ್ದ ಒಕ್ಕೂಟ ನಮ್ಮ ಕೊಪ್ಪಳ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಒಕ್ಕೂಟ ಆಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಜಿ. ಶ್ರೀಧರ್ ಕೆಸರಟ್ಟಿ ಅವರು ಹೇಳಿದರು.

ಅವರು ಕೊಪ್ಪಳ ನಗರದಲ್ಲಿ ಶ್ರೀ ಶಿವ ಶಾಂತವೀರ ಕಲ್ಯಾಣ ಮಂಟಪದಲ್ಲಿ ಆಯೋಜನ ಮಾಡಿದ್ದ ಕೊಪ್ಪಳ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಜ್ಞಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.


ವಿಶೇಷವಾಗಿ ಸೌಹಾರ್ದ ಕಾಯ್ದೆ ಹಾಗೂ ಉಪವಿಧಿಗಳ ಜ್ಞಾನವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಆಯೋಜನೆ ಇಂತಹ ಕಾರ್ಯಕ್ರಮ ಆಯೋಜನ ಮಾಡಿದ್ದೇವೆ ಎಂದ ಅವರು ಸಹಕಾರಿ ತತ್ವಗಳ ಮಹತ್ವ ಮತ್ತು ಸೌಹಾರ್ದ ಸಹಕಾರಿಗಳ ಪಾತ್ರದ ಕುರಿತು ಮಾಹಿತಿ ನೀಡಿದರು.
ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಚೆನ್ನಪ್ಪ ಕಡ್ಡಿಪುಡಿ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವದ ಒಕ್ಕೂಟದ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ರ ಕುರಿತು ಲಿಖಿತ ಪರೀಕ್ಷೆ ಹಾಗೂ ರಸ ಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಈ ಸ್ಪರ್ಧೆಗಳಲ್ಲಿ ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರು ಮತ್ತು ವ್ಯವಸ್ಥಾಪಕರು ಭಾಗವಹಿಸಿದ್ದರು. ರಸಪ್ರಶ್ನೆ ಕಾರ್ಯಕ್ರಮ ದಲ್ಲಿ ಗಂಗಾವತಿ ತಾಲೂಕು ಪ್ರಥಮ, ಯಲಬುರ್ಗಾ ತಾಲೂಕು ದ್ವಿತೀಯ, ಕುಷ್ಟಗಿ ತಾಲೂಕು ತೃತೀಯ ಸ್ಥಾನವನ್ನು ಪಡೆದರು. ಲಿಖಿತ ಪರೀಕ್ಷೆಯಲ್ಲಿ ಕಾರಟಗಿಯ ಸಿರಿಷಾ ಪ್ರಥಮ, ಹುಲಿಗೆಯ ಆದಿಶಕ್ತಿ ಸಹಕಾರಿಯ ಚಂದನ, ಕೆಸರಟ್ಟಿಯ ಶಿವಕೃಪ ಸಹಕಾರಿಯ ಶರಣಮ್ಮ, ಕೊಪ್ಪಳ ಗಾಯತ್ರಿ ಸಹಕಾರಿ ಶ್ರೀನಿಧಿ ದ್ವಿತೀಯ ಸ್ಥಾನ ಪಡೆದರು. ತೃತೀಯ ಸ್ಥಾನವನ್ನು ಗಂಗಾವತಿಯ ಯಶಸ್ವಿನೆ ಸಹಕಾರಿಯ ಬಸವರಾಜ್, ಕುಕುನೂರ್ನ ಅನ್ನದಾನೇಶ್ವರ ಸಹಕಾರಿಯ ಶಶಿಧರ್ ಪಡೆದರು . ವಿಜೇತ ತಂಡಗಳಿಗೆ ಬಹುಮಾನ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಂಕರಗೌಡ ಹಿರೇಗೌಡ್ರು, ಶ್ರೀ ಮಾಲಿಂಗಪ್ಪ ದೋಟಿಹಾಳ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಕುಮಾರಪ್ಪ, ಶರಣಪ್ಪ ವಡಗೇರಿ, ಫಕ್ರುದ್ದಿನ್, ಶರಣಪ್ಪ ಹ್ಯಾಟಿ, ಮುದ್ದಪ್ಪ ಬೇವಿನಹಳ್ಳಿ , ನಾಗರಾಜ ನಾಗನೂರು, ಬಸವರಾಜ್ ಪಡಿ, ಟಿ. ಲೋಕೇಶಪ್ಪ, ಶರಣಪ್ಪ ಚೆನ್ನಳ್ಳಿ, ನೀಲನಗೌಡ ತಳವಗೇರಿ, ಸಂಯೋಜಕ ಓಂಕಾರ್, ಶಶಿಧರ್ ಶೆಟ್ಟರ್, ರಾಜೇಂದ್ರ ಶೆಟ್ಟರ್, ಸಿ ಜೆ ಜವಳಿ, ಹನುಮರೆಡ್ಡಿ, ಶಿವಕುಮಾರ್ ಏನಗಿ, ಆನಂದ ತೊದಲ್, ರಮೇಶ್ ಕವಲೂರು, ಶಶಿ ಕುಮಾರ ಗಡ್ಡಿ, ಗುರುಪ್ರಸಾದ್, ಗವಿಸಿದ್ದಪ್ಪ ವಣಗೇರಿ, ಅಮರೇಶ್ ಸೇರಿದಂತೆ ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರ ಮತ್ತು ಮುಖ್ಯ ಕಾರ್ಯನಿರ್ವಾಹಕರು ಮತ್ತು ವ್ಯವಸ್ಥಾಪಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!