Uncategorized

*ಶಾಲಾ ಸಂಸತ್ ಪದಗ್ರಹಣ ಕಾರ್ಯಕ್ರಮ ಯಶಸ್ವಿ* *ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್ ಉತ್ತಮ ವೇದಿಕೆಯಾಗಿದೆ:-ರಾಮರಡ್ಡೆಪ್ಪ ಹಾಲಕೇರಿ,*

*ಶಾಲಾ ಸಂಸತ್ ಪದಗ್ರಹಣ ಕಾರ್ಯಕ್ರಮ ಯಶಸ್ವಿ* *ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್ ಉತ್ತಮ ವೇದಿಕೆಯಾಗಿದೆ:-ರಾಮರಡ್ಡೆಪ್ಪ ಹಾಲಕೇರಿ,*

* ಶಾಲಾ ಸಂಸತ್ ಪದಗ್ರಹಣ ಕಾರ್ಯಕ್ರಮ ಯಶಸ್ವಿ*

ಇಟಗಿ ಗ್ರಾಮದ ಪಿಎಂ ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಡೆದ 2026–27ನೇ ಸಾಲಿನ ಶಾಲಾ ಸಂಸತ್ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.

*ಕುಕನೂರು, ಜು. 16* : ತಾಲೂಕಿನ ಇಟಗಿ ಗ್ರಾಮದ ಪಿಎಂ ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗುರುವಾರ 2026–27ನೇ ಸಾಲಿನ ಶಾಲಾ ಸಂಸತ್ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾಲಯದ ಮುಖ್ಯ ಶಿಕ್ಷಕರಾದ ರಾಮರಡ್ಡೆಪ್ಪ ಹಾಲಕೇರಿ, ಶಾಲಾ ಸಂಸತ್ತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಮಂತ್ರಿಗಳು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.

ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್ ಉತ್ತಮ ವೇದಿಕೆಯಾಗಿದ್ದು, ಪ್ರತಿ ತಿಂಗಳು ಸಭೆ ನಡೆಸಿ ಕಾರ್ಯಕ್ರಮಗಳ ಕುರಿತು ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ಶಿಕ್ಷಕರು ಸಹ ಮಂತ್ರಿಗಳಿಗೆ ನಿರಂತರ ಮಾರ್ಗದರ್ಶನ ನೀಡಬೇಕು ಎಂದರು.

2026–27ನೇ ಸಾಲಿನ ಶಾಲಾ ಸಂಸತ್ತಿಗೆ ಶರಣಕುಮಾರ ಬಳಿಗಾರ್ (ಪ್ರಧಾನಮಂತ್ರಿ), ಕೀರ್ತಿ ಟಿ (ಉಪ ಪ್ರಧಾನಮಂತ್ರಿ), ಅನಿತಾ ಸಿ.ಎಂ. (ಪ್ರವಾಸೋದ್ಯಮ ಸಚಿವೆ), ಆದರ್ಶ ಡಿ (ಸಾರಿಗೆ ಸಚಿವ), ಪಲ್ಲವಿ (ಆಹಾರ ಸಚಿವೆ), ಸೂರಜ್ (ಕ್ರೀಡಾ ಸಚಿವ), ದಿವ್ಯಶ್ರೀ (ಸಾಂಸ್ಕೃತಿಕ ಸಚಿವೆ), ಸುನಿಲ್ ಕುಮಾರ್ (ಆರೋಗ್ಯ ಸಚಿವ), ಅನುಶ್ರೀ (ಶಿಕ್ಷಣ ಸಚಿವೆ), ವಸಂತ್ (ಪರಿಸರ ಸಚಿವ), ಸೌಜನ್ಯ ಎಂ. (ಹಣಕಾಸು ಸಚಿವೆ), ಅಮಿತ್ ಎಸ್. (ವಾರ್ತೆ ಮತ್ತು ಪ್ರಸಾರ ಸಚಿವ) ಹಾಗೂ ಕೃತಿಕಾ (ಗ್ರಂಥಾಲಯ ಸಚಿವೆ) ಪ್ರಮಾಣವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಸಂತೋಷ್ ಕುಮಾರಿ, ನಾಗರಾಜ ಸೋನಗ, ಬಸಮ್ಮ ಮೇಟಿ, ರಂಗಪ್ಪ ಓಲೆಕಾರ, ವಿರೂಪಾಕ್ಷಪ್ಪ ಮ್ಯಾಳಿ, ಜಯಪ್ಪ ಕನಕಮ್ಮನವರ, ರೋಹಿಣಿ ಸಿ., ಶ್ರೀದೇವಿ ಬೆಳದಡಿ, ಜಗದೀಶ ಅಜ್ಜಣ್ಣವರ, ಮಹೇಶ್ ರಾಮದುರ್ಗ, ಮುರಾರಿ ಭಜಂತ್ರಿ, ಶ್ವೇತಾ, ಪೂಜಾ, ಭೀಮಾಂಬಿಕಾ, ಕಿರಣ್, ರವಿಕಿರಣ್, ಸಿಂಧು, ರೋಹಿಣಿ, ರಹಿಮಾನಸಾಬ್, ಬಸಣ್ಣ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವರದಿ: ಚನ್ನಯ್ಯ ಹಿರೇಮಠ, ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!