Uncategorized

ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು

 

ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು

ಕುಕನೂರ: ದೇಶಕ್ಕೆ ಸ್ವತಂತ್ರ ಸಿಕ್ಕು ಒಂದು ವರ್ಷ ಒಂದು ತಿಂಗಳ ಎರಡು ದಿನದ ನಂತರ ನಮ್ಮ ಹೈದರಾಬಾದ್ ಕರ್ನಾಟಕ ಸ್ವತಂತ್ರವಾಯಿತು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಇಡೀ ದೇಶ ಸ್ಮರಿಸುವದರ ಜೊತೆಗೆ ನಮ್ಮ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸೆಪ್ಟಂಬರ್ 17, 1948 ರಂದು ಭಾರತ ದೇಶದ ಒಕ್ಕೂಟಕ್ಕೆ ಸೇರ್ಪಡೆಯಾಯಿತು, ನಿಜಮರ ಆಳ್ವಿಕೆ ಅಂತ್ಯಗೊಂಡು ಸ್ವತಂತ್ರವಾದ ದಿವಸ ಈ ದಿನ ಎಂದು ಇಟಿಗಿಯ ಪಿಎಂ ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ರಾಮರಡೆಪ್ಪ ಹಾಲಕೇರಿ ಹೇಳಿದರು.

ತಾಲೂಕಿನ ಇಟಗಿ ಗ್ರಾಮದ ಪಿ ಎಂ ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ , ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದವರು, ಹೈದ್ರಾಬಾದ್ ನಿಜಾಮಾ ಹಾಗೂ ರಜಕರ ಆಳ್ವಿಕೆಯಿಂದ ತತ್ತರಿಸಿದ ನಮ್ಮ ಭಾಗದ ಜನಗಳಿಗೆ, ೩೯೭ ದಿನಗಳಾದ ಮೇಲೆ ಈಭಾಗದವರಿಗೆ ಸ್ವಾತಂತ್ರ್ಯ ಸಿಕ್ಕಿತು ಇದಕ್ಕಾಗಿ ಹೋರಾಡಿದ ಮಹನೀಯರಾದ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಆಪರೇಷನ್ ಪೋಲೊ ಕಾರ್ಯಾಚರಣೆಯಿಂದ ಈ ಭಾಗದ ಜನರಿಗೆ ಸ್ವಾತಂತ್ರ್ಯ ಸಿಕ್ಕಿತು,ದೇಶಕ್ಕಾಗಿ ಹೋರಾಡಿದ ಮಹಾನ್ ನೇತಾರರನ್ನು ಸ್ಮರಿಸುವದು ಇಂದಿನ ಸಂದರ್ಭದಲ್ಲಿ ಬಹಳ ಅವಶ್ಯವಿದೆ ಈ ಭಾಗ ಅತ್ಯಂತ ಕಡು ಬಡತನ ಮತ್ತು ಆರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕ ವಾಗಿ ಹಿಂದುಳಿದ ಪ್ರದೇಶವಾಗಿತ್ತು ಈಗ 371 ಜೆ ಕಲಂ ತಂದ ಮೇಲೆ ಎಷ್ಟೊ ಅಭಿವೃದ್ಧಿ ಯನ್ನು ಕಾಣುತ್ತಾ ಇದ್ದೇವೆ ಇದರ ಉಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಂಡು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಿಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿಶ್ವಕರ್ಮ ಜಯಂತಿ ಕುರಿತು ವಿಶ್ವಕರ್ಮರು ದೇವಾನುದೇವತೆಗಳಿಗೆ ಅರಮನೆ ಶಸ್ತ್ರಾಸ್ತ್ರ ಗಳನ್ನು ಹಾಗೂ ಮಾಯಾನಗರಿಯನ್ನು ನಿರ್ಮಿಸಿದ ಅಪ್ರತಿಮ ದೇವ ಶಿಲ್ಪಿ ವಿಶ್ವದಲ್ಲಿ ಮೊದಲ ಇಂಜಿನಿಯರ್ ಎಂದು ಹೇಳಲಾಗುತ್ತದೆ, ವಿಶ್ವಕರ್ಮ ಅವರು ಸ್ವರ್ಗಲೋಕ, ದ್ವಾರಕಾನಗರ ಇಂದ್ರ ಪ್ರಸ್ಥ ದಂತಹ ಅರಮನೆಗಳನ್ನು ಕೂಡ ಅವರು ನಿರ್ಮಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳು ಹಾಗೂ ಭಾಷಣ ಕಾರ್ಯಕ್ರಮಗಳು ಜರುಗಿದವು,
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರದ ಕಳಕನಗೌಡ ಸಾದರ, ಶಿಕ್ಷಕರಾದ ಸಂತೋಷ್ ಕುಮಾರಿ, ರಂಗಪ್ಪ ಓಲೆಕಾರ್, ಜಗದೀಶ್, ಜಯಪ್ಪ, ವಿರುಪಾಕ್ಷಪ್ಪ ಮ್ಯಾಳಿ, ಶ್ರೀದೇವಿ ಬೆಳದಡಿ, ಬಸ್ಸಮ್ಮ ಮೇಟಿ, ಮಹೇಶ್ ರಾಮದುರ್ಗ, ಮುರಾರಿ ಭಜಂತ್ರಿ, ಶರಣಪ್ಪ, ಮಂಜುನಾಥ್ ಜಗದಾಪ್, ರವಿಕಿರಣ, ಕಿರಣ್, ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಶಿಕ್ಷಕರು ಶಿಕ್ಷಕಿಯರು ಸೇರಿದಂತೆ ವಿದ್ಯಾರ್ಥಿನಿಯರು ಇತರರು ಉಪಸ್ಥಿತರಿದ್ದರು.

ವರದಿ ಚನ್ನಯ್ಯ ಹಿರೇಮಠ ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!