ಕೃಷ್ಣಾ ನದಿ ನಡುಗಡ್ಡೆಯಲ್ಲಿ ಅಗ್ನಿಶಾಮಕದಳದಿಂದ ರಕ್ಷಣಾ ತರಬೇತಿ ಕಾರ್ಯಕ್ರಮ ಯಶಸ್ವಿ

ವರದಿ:ಕೆ.ಎಸ್.ಭಾಂಗಿ

GBnews:ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮದ ಕ್ರಿಷ್ಣಾ ನದಿಯಲ್ಲಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಯಿಂದ ನದಿ ಯಲ್ಲಿಯ ನಡು ಗಡ್ಡೆ ಜನರ ರಕ್ಷಣಾ ಕಾರ್ಯಾಚರಣೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು.

ಜಮಖಂಡಿ ತಾಲ್ಲೂಕಿನ ಕ್ರಿಷ್ಣಾ ನದಿಯಲ್ಲಿ ಒಂದು ಲಕ್ಷ ನಲವತ್ತು ಮೂರು ಸಾವಿರ ಕ್ಯುಸಿಯಕ್ಸ ದಷ್ಟು ನೀರು ಹರಿಯುತ್ತಿದೆ ಬರುವ ದಿನ ಗಳಲ್ಲಿ ನದಿ ತೀರದ ಗ್ರಾಮಗಳಲ್ಲಿ ನೆರೆ ಹಾವಳಿ ಎದುರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮದಲ್ಲಿ ಅಗ್ನಿಶಾಮಕ ಇಲಾಖೆ ಯ ಸಿಬ್ಬಂದಿ ಗಳು ರಕ್ಷಣಾ ಕಾರ್ಯಾಚರಣೆ ತರಬೇತಿ ನಡೆಸಿದರು.

ಈ ಸಂದರ್ಭದಲ್ಲಿ ಜಮಖಂಡಿ ತಹಶಿಲ್ದಾರರಾದ ಪ್ರಶಾಂತ. ಎಸ.ಚನಗೊಂಡ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ.ಉಪ ತಹಶಿಲ್ದಾರ ವಾಯ.ಎಚ.ದ್ರಾಕ್ಷಿ. PSI ಬಸವರಾಜ. ಅವಟಿ.ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಲ್ಲಿಕಾರ್ಜುನಪ್ಪ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಾತನಾಡಿ

ಈ ದಿನ ಪ್ರವಾಹ ಮುನ್ಸೂಚನೆ ಯಾಗಿ ಬೋಟ್ ನಲ್ಲಿ ಯಾವ ರೀತಿ ಅಕಸ್ಮಾತಾಗಿ ಜನಗಳು ನಡು ಗಡ್ಡೆ ಯಲ್ಲಿ ಸಿಕ್ಕಿಹಾಕಿ ಕೊಂಡರೆ ಹೇಗೆ ಪಾರು ಮಾಡಬೇಕು ಅನ್ನುವ ಸಲುವಾಗಿ ತರಬೇತಿ ತೆಗೆದುಕೊಳ್ಳುವದಕ್ಕೆ ಜನಗಳಿಗೆ

ಅರಿವು ಮೂಡಿಸುವುದಕ್ಕೆ ಅಗ್ನಿಶಾಮಕ ಇಲಾಖೆ, ನಗರ ಸಭೆ ಇಲಾಖೆ, ಮತ್ತು ಪೊಲೀಸ್ ಇಲಾಖೆ, ಈ ಮೂರು ಟಿಂ ನವರು ಒಟ್ಟಾಗಿ ಸೇರಿ ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮದಲ್ಲಿ ಕಾರ್ಯಕ್ರಮ ಅಳವಡಿಸಲಾಗಿತ್ತು ಇದಕ್ಕೆ ತಹಶಿಲ್ದಾರರ ವರು ಹಾಗೂ ಇನ್ನುಳಿದ  ಅಧಿಕಾರಿಗಳು ಭಾಗವಹಿಸಿದ್ದರು ಹಿಗಾಗಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

 

=5

follow me

Leave a Reply

Your email address will not be published.

error: Content is protected !!
×