ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ; ತಂದೆ ಹೃದಯಾಘಾತದಿಂದ ಮೃತ

ಮಂಡ್ಯ: ಕಾಲೇಜಿಗೆ ಸೇರುವ ವಿಚಾರದಲ್ಲಿ ತಂದೆಯೊಂದಿಗೆ ಮುನಿಸಿಕೊಂಡ ಮಗಳು ಕೊನೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮಗಳ ಸಾವಿನಿಂದ ನೊಂದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಜರುಗಿದೆ.

ತಳಗವಾದಿ ಗ್ರಾಮದ ಬಾಂಧವ್ಯ (17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ ರಾಜು (65) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಲೇಜಿಗೆ ಸೇರುವ ವಿಚಾರದಲ್ಲಿ ಬಾಂಧವ್ಯ ತನ್ನ ತಂದೆ ರಾಜು ಅವರ ಜೊತೆಗೆ ಮುನಿಸಿಕೊಂಡಿದ್ದಳು. ಇದಾದ ಬಳಿಕ ಇಂದು ಬಾಂಧವ್ಯ ಬೆಳಗಿನ ಜಾವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನು ನೋಡಿದ ರಾಜು ಅವರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.police

ಮಗಳು ನೇಣಿಗೆ ಶರಣಾಗಿ ಸಾವನ್ನಪ್ಪಿರುವುದನ್ನು ನೋಡಿ ನೊಂದ ರಾಜು ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇದೀಗ ಒಂದೇ ಮನೆಯಲ್ಲಿ ಸಣ್ಣ ವಿಷಯಕ್ಕೆ ಮುನಿಸಿಕೊಂಡ ಎರಡು ಜೀವ ಬಲಿಯಾಗಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

=12

follow me

Leave a Reply

Your email address will not be published.

error: Content is protected !!
×