ಲಸಿಕೆಯಿಂದ ವ್ಯಕ್ತಿ ಸಾವು; ಒಪ್ಪಿಕೊಂಡ ಕೇಂದ್ರ ಸರ್ಕಾರ

ಕೋವಿಡ್​ ಲಸಿಕೆ ಪಡೆದ ಬಳಿಕ ದೇಶದಲ್ಲಿ ಇದುವರೆಗೂ ಸಾವನ್ನಪ್ಪಿದವರು ಕೇವಲ ಒಬ್ಬ ವ್ಯಕ್ತಿ ಮಾತ್ರ ಎಂದು ಸರ್ಕಾರದ ಸಮಿತಿ ದೃಢಪಡಿಸಿದೆ. ಲಸಿಕೆ ಅಡ್ಡಪರಿಣಾಮ ಕುರಿತು ಅಧ್ಯಯನ ನಡೆಸಿದ ಸರ್ಕಾರದ ಸಮಿತಿ ಈ ವರದಿ ಬಹಿರಂಗ ಪಡಿಸಿದೆ. ಲಸಿಕೆ ಪಡೆದ ಬಳಿಕ ಉಂಟಾಗುವ ಅಲರ್ಜಿಯಿಂದಾಗಿ 68 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಜೀಬಿ ನ್ಯೂಸ್ ಕನ್ನಡ ನವದೆಹಲಿ, ಜೂ. 15:  ಕೋವಿಡ್​ ಲಸಿಕೆ ವಿತರಣೆ ದೇಶದಲ್ಲಿ ಆರಂಭಿಸಿದ ಬಳಿಕ ಲಸಿಕೆ ಪಡೆದ ಅನೇಕ ಮಂದಿ ವಿವಿಧ ಕಾರಣಗಳಿಂದ ಸಾವನ್ನಪ್ಪಿದರು. ಅಲ್ಲದೇ, ಲಸಿಕೆ ಪಡೆದ ಕಾರಣದಿಂದಲೇ  ಕೆಲವರು ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಆದರೆ, ಸರ್ಕಾರ ಮಾತ್ರ ಅವರ  ಸಾವಿಗೆ ಲಸಿಕೆಯೇ ಕಾರಣ ಎಂಬ ವಾದವನ್ನು  ತಳ್ಳಿ ಹಾಕಿತ್ತು. ಅಲ್ಲದೇ, ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂಬ ಬಗ್ಗೆ ಭರವಸೆ ಕೂಡ ನೀಡಿತ್ತು. ಇದರ ಜೊತೆ ಲಸಿಕೆಯ ಪರಿಣಾಮಕಾರಿತ್ವ ಹಾಗೂ ಅಡ್ಡ ಪರಿಣಾಮದ ಕುರಿತು ಪರೀಕ್ಷೆ ನಡೆಸಲು ಮುಂದಾಗಿತ್ತು. ಈ ಬಗ್ಗೆ ಅಧ್ಯಯನ ನಡೆಸಿದ ಸರ್ಕಾರದ ಸಮಿತಿ, ಇದೇ ಮೊದಲ ಬಾರಿಗೆ ಲಸಿಕೆಯ ಪರಿಣಾಮದಿಂದ 68 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಒಪ್ಪಿಕೊಂಡಿದೆ.

ಕೋವಿಡ್​ ಲಸಿಕೆ ಪಡೆದ ಬಳಿಕ ದೇಶದಲ್ಲಿ ಇದುವರೆಗೂ ಸಾವನ್ನಪ್ಪಿದವರು ಕೇವಲ ಒಬ್ಬ ವ್ಯಕ್ತಿ ಮಾತ್ರ ಎಂದು ಸರ್ಕಾರದ ಸಮಿತಿ ದೃಢಪಡಿಸಿದೆ. ಲಸಿಕೆ ಅಡ್ಡಪರಿಣಾಮ ಕುರಿತು ಅಧ್ಯಯನ ನಡೆಸಿದ ಸರ್ಕಾರದ ಸಮಿತಿ ಈ ವರದಿ ಬಹಿರಂಗ ಪಡಿಸಿದೆ. ಲಸಿಕೆ ಪಡೆದ ಬಳಿಕ ಉಂಟಾಗುವ ಅಲರ್ಜಿಯಿಂದಾಗಿ 68 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಲಸಿಕೆ ಪಡೆದ ಕಾರಣವೇ ಇವರು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟ ಪಡಿಸಿದೆ. ಮಾರ್ಚ್​ 8 ರಂದು ಇವರು ​ ಲಸಿಕೆ ಪಡೆದಿದ್ದ ಇವರು ಮಾರ್ಚ್​ 31ರಂದು ಸಾವನ್ನಪ್ಪಿದರು ಎಂದು ಸಮಿತಿ ತಿಳಿಸಿದೆ. ​ಲಸಿಕೆ ಪ್ರತಿಕೂಲ ಪರಿಣಾಮ ಕುರಿತು ಎಇಎಫ್​ಐ ಸಮಿತಿ ಅಧ್ಯಯನ ನಡೆಸಿತು. ಈ ಸಮಿತಿಯಲ್ಲಿ ಕೋವಿಡ್​ ಲಸಿಕೆ ಪಡೆದ ಬಳಿಕ ಗಂಭೀರ ಪರಿಣಾಮ ಬೀರಿದ 31 ಪ್ರಕರಣಗಳನ್ನು ಅಧ್ಯಯನ ನಡೆಸಲಾಯಿತು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮಾತ್ರ ಅನಾಫಿಲ್ಯಾಕ್ಸಿಸ್​ನಿಂದಾಗಿ ಸಾವನ್ನಪ್ಪಿದ್ದಾರೆ ಎಂಬುದು ದೃಢವಾಗಿದೆ.

ಈ ಕುರಿತು ಮಾತನಾಡಿರುವ ಎಇಎಫ್​ಐ ಮುಖ್ಯಸ್ಥ ಡಾ. ಎನ್​ಕೆ ಆರೋರಾ, 68 ವರ್ಷದ ವ್ಯಕ್ತಿ ಸಾವಿಗೆ ಕೋವಿಡ್​ ಲಸಿಕೆಯೇ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಈ ಕುರಿತು ಯಾವುದೇ ಹೇಳಿಕೆ ನೀಡಲು ಅವರು ನಿರಾಕರಿಸಿದ್ದಾರೆ.

=11

follow me

Leave a Reply

Your email address will not be published.

error: Content is protected !!
×