ಕೈಕೆಸರು ಮಾಡಿಕೊಂಡು ಸೇವೆ ಮಾಡಿದ ಲಾಕ್ ಡೌನ್ ಕರ್ಣ ರೆಡ್ಡಿ ಶ್ರೀನಿವಾಸ್

ವರದಿ:ಸುಂದರರಾಜ್ ಕಾರಟಗಿ

GBnewsಕಾರಟಗಿ:ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ಭಯಭೀತರಾಗಿ ಲಾಕ್ಡೌನ್ ಮಾಡಿಕೊಂಡು ಮನೆಯಲ್ಲಿ ಇದ್ದರೂ ಕೂಡ ಹಲವಾರು ಜನರು ಕರೋನ ಪಾಸಿಟಿವ್ ಬಂದು ಆರೈಕೆ ಕೇಂದ್ರಗಳಿಗೆ ಸೇರುತ್ತಿದ್ದಾರೆ .

ಇಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವರಾಜಕಾರಣಿಯೂ ಮಾಡದಂತಹ ಯಾವ ಸೋಶಿಯಲ್ ವರ್ಕರ್ ಮಾಡದಂತಹ ಸೇವಾಕಾರ್ಯವನ್ನು ಕೊಪ್ಪಳ ಜಿಲ್ಲೆಯ ಶ್ರೀರಾಮನಗರ ಕಾರಟಗಿ ತಾಲೂಕಿನ ಶ್ರೀರಾಮನಗರದಲ್ಲಿ ರೆಡ್ಡಿ ಶ್ರೀನಿವಾಸ್ ವ್ಯಕ್ತಿ ಮಾಡುತ್ತಿರುವುದು ಕ್ಷೇತ್ರ ಮತ್ತು ಜಿಲ್ಲೆಯ ಜನತೆಯ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಕೋವಿಡ್ ಎರಡನೇ ಅಲೆ ಲಾಕ್ ಡೌನ್ ಶುರುವಾದಾಗಿನಿಂದಲೂ ಇಲ್ಲಿವರೆಗೆ  ನಿರ್ಗತಿಕರಿಗೆ ಬಡವರಿಗೆ ಕೂಲಿಕಾರ್ಮಿಕರಿಗೆ ತರಕಾರಿಗಳನ್ನು ಜೊತೆಗೆ ಆಹಾರ ವಿತರಿಸಿದ ರೆಡ್ಡಿ ಶ್ರೀನಿವಾಸ್ ಅವರ ಸೇವಾ ಮನೋಭಾವದ ಸಮಾಜದ ಸೇವೆಗೆ ಅವರನ್ನು ಅವರ ಅರ್ಪಿಸಿ ಕೊಳ್ಳುವಂತಹ ಮನಸ್ಥಿತಿಯನ್ನು ನಾವಿಲ್ಲಿ ಕಾಣಬಹುದು.

ಶ್ರೀ ರಾಮನಗರದ ಆರೈಕೆ ಕೇಂದ್ರ ಸುತ್ತಲೂ 2.06.2021 ರಂದು ರಾತ್ರಿ ಸುರಿದ ಮಳೆಗೆ ಸಂಪೂರ್ಣವಾಗಿ ವೈದ್ಯರುಗಳು ತಿರುಗಾಡಲು ಬಾರದಂತೆ ಕೋವಿಡ್ ಆರೈಕೆ ಕೇಂದ್ರ ಮೈದಾನ ನೀರಿನಿಂದ ತುಂಬಿ ಹೋಗಿತ್ತು. ಆರೈಕೆ ಕೇಂದ್ರದೊಳಗೆ ಇರುವಂತಹ ರೋಗಿಗಳಿಗೆ ಆಹಾರ ಮತ್ತು ವೈದ್ಯಕೀಯ ಸೇವೆ ಮಾಡಲು ತುಂಬಾನೇ ತೊಂದರೆಯಾಗಿತ್ತು.

ಇಂತಹ ಸಂದರ್ಭದಲ್ಲಿ ರೆಡ್ಡಿ ಶ್ರೀನಿವಾಸ್ ರವರೆ ಚಲಕಿ ಯನ್ನು ಹಿಡಿದು ಮೈದಾನದಿಂದ ನೀರು ಹೊರಗೆ ಹೋಗಲು ಹರಿ ಮಾಡಿ ನೀರಿನಿಂದ ತುಂಬಿದ ಮೈದಾನವನ್ನು ಸಂಪೂರ್ಣವಾಗಿ ನೀರು ತೆಗೆದು ವೈದ್ಯರುಗಳ ಸೇವೆಗೆ ರೋಗಿಗಳಿಗೆ ಅನುಕೂಲ ಮಾಡಿಕೊಟ್ಟಂತಹ ಮಹೋನ್ನತ ಕಾರ್ಯವನ್ನು ರೆಡ್ಡಿಶ್ರೀನಿವಾಸರವರು ಮಾಡಿದ್ದಾರೆ. ಕಳೆದ ವಾರವಷ್ಟೇ ಈಗಿರುವ ಹಾರೈಕೆ ಕೇಂದ್ರದಲ್ಲಿರುವ ಕರೋನಪಾಸಿಟಿವ್ ಮಕ್ಕಳಿಗೆ ಆಟಿಕೆ ಸಾಮಾನುಗಳು ವಿತರಿಸಿದ್ದರು.

ರೆಡ್ಡಿ ಶ್ರೀನಿವಾಸ ರವರನ್ನು ಮುಕ್ತಕಂಠದಿಂದ ನಾವು ಅವರ ಬಗ್ಗೆ ಹೇಳಬೇಕಾಗುತ್ತದೆ.ಲಾಕ್ ಡೌನ್ ನಲ್ಲಿ ಸಂಕಷ್ಟಕ್ಕೀಡಾದ ಬಡವರಿಗೆ ನಿರ್ಗತಿಕರಿಗೆ ಆಹಾರದ ವಿತರಣೆ ಮಾಡುತ್ತಿದ್ದಾರೆ ಇನ್ನೊಂದು ಕಡೆ ಕರೋನ ಇರುವಂತಹ ಕುಟುಂಬಗಳಿಗೆ ತರಕಾರಿಗಳನ್ನು ಅಗತ್ಯವಸ್ತುಗಳ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದಾರೆ.

ಮತ್ತೊಂದು ಕಡೆ ಆರೈಕೆ ಕೇಂದ್ರಗಳಿಗೆ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಖರ್ಚಿಗೆ ಲೆಕ್ಕಇಲ್ಲದೆ ತರಕಾರಿಗಳನ್ನು ವಿತರಣೆ ಮಾಡುತ್ತಿದ್ದಾರೆ ಈಗ ಪ್ರತ್ಯಕ್ಷವಾಗಿ ನೋಡಿದರೆ ಕೋವಿಡ್ಆರೈಕೆ ಕೇಂದ್ರ ಆವರಣದೊಳಗೆ ನುಗ್ಗಿದ ನೀರನ್ನು ಕೈಯಿಂದಲೇ ಚಲಕಿ ಹಿಡಿದು ನೀರನ್ನು ಹರಿ ಮಾಡಿ ಅನುಕೂಲ ಮಾಡಿದ್ದಾರೆ ಸದಾ ಇವರು ಸಮಾಜಮುಖಿಯಾಗಿ ಅವರನ್ನು ಅವರೇತೊಡಗಿಸಿಕೊಂಡು ಸಾಧನೆ ಮೀರಿದ ಸೇವೆಯನ್ನು ಮಾಡುತ್ತಿದ್ದಾರೆ.

 

=11

follow me

Leave a Reply

Your email address will not be published.

error: Content is protected !!
×