ಲಾಕ್ಡೌನಲ್ಲಿ ಅಕ್ರಮ ಮರಳು ದಂಧೆಕೋರರಿಗೆ ಬೆನ್ನಿಗೆ ನಿಂತರೆ ಜಮಖಂಡಿ ಶಾಸಕರು.?

 

ವರದಿ:K.S.ಭಾಂಗಿ ಜಮಕಂಡಿ

GBnewsಹೊಟ್ಟೆಪಾಡಿಗಾಗಿ ಜನಸಾಮಾನ್ಯರ ಪರದಾಟ.ಅಕ್ರಮ ದಂಧೆಕೋರರು ತಮ್ಮ ಪ್ರಾಬಲ್ಯ ಬಳಸಿ ಮೆರೆದಾಟ.

ಗೃಹಬಳಕೆ ವಸ್ತು, ತರಕಾರಿ ತರಲು ಹೋದ ಜನ ಸಾಮಾನ್ಯರ ಬೈಕ್ ಸೀಜ್.

ಇಟಂಗಿ, ಇಟ್ಟಿಗೆ, ಬಟ್ಟಿಗೆ ಅಕ್ರಮ ಮಣ್ಣು ತರುತ್ತಿರುವ ಟ್ರಾಕ್ಟರ್, ಟಿಪ್ಪರ್, ಜೆಸಿಬಿ, ಹಿಟಾಚಿಯಂತಹ ನೂರಾರು ವಾಹನಗಳ ರಾಜಾರೋಷವಾಗಿ ಓಡಾಟ.

ಅಧಿಕಾರಿಗಳ ಜಾಣ ಕುರುಡುತನ, ಏಲ್ಲೋ ಒಂದು ಕಡೆ ಅಧಿಕಾರಿಗಳಿಗೆ ಆಮಿಷ ಒಡ್ಡಿದ್ದಾರಾ ಅಕ್ರಮ ಧಂದೆಕೊರರು?

ಕೃಷ್ಣಾ ಮೇಲ್ದಂಡೆ ಯೋಜನೆಯ ಅಧೀನ ದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ.

ಅಕ್ರಮ ಧಂದೆಗೆ ಪೋಲಿಸ್ ಇಲಾಖೆಯೆ ಕಾವಲಾಗಿ ನಿಂತಿರುವ ಶಂಕೆ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು.

ಜಮಖಂಡಿ ಶಾಸಕರಾದ. ಆನಂದ. ನ್ಯಾಮಗೌಡರ. ಕೃಪಾ ಕಟಾಕ್ಷದಲ್ಲಿ ನಡಿತಿದೆಯಾ ಅಕ್ರಮ ಇಟ್ಟಿಗೆ ಭಟ್ಟಿ ಗಳು ಎಂದು ಪ್ರಶ್ನಿಸುತ್ತಿರುವ ಪ್ರಜ್ಞಾವಂತರು.

ಜಮಖಂಡಿ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಅಕ್ರಮ ಇಟಂಗಿ, ಇಟ್ಟಿಗೆ ಭಟ್ಟಿಗಳಿದ್ದು ಕೃಷ್ಣಾ ಮೇಲ್ದಂಡೆ ಯೋಜನೆಯ ಅಧೀನದ ಜಮೀನಿನಲ್ಲಿ ಅನಧೀಕೃತವಾಗಿ ಪ್ರಭಾವಿಗಳು ಇಟ್ಟಿಗೆ ಭಟ್ಟಿಗೆ ಮಣ್ಣು ಸಾಗಿಸುತ್ತಾ ಲಾಕಡೌನ್ ಅನ್ನು ತಮ್ಮ ಸ್ವಂತ ಲಾಭಕ್ಕಾಗಿ ಸದುಪಯೋಗ ಪಡಿಸಿಕೊಳ್ಳುತಿದ್ದಾರೆ.

ಒಂದೆಡೆ ಹೊಟ್ಟೆಪಾಡಿಗಾಗಿ ಜನಸಾಮಾನ್ಯರು ತಮ್ಮ ದಿನಸಿ ಹಾಗೂ ಗೃಹೊಪಯೋಗಿ ವಸ್ತುಗಳಿಗಾಗಿ ಪರದಾಟ ನಡೆಸುತ್ತಿದ್ದರೆ, ಅಕ್ರಮ ದಂಧೆಕೋರರು ತಮ್ಮ ಪ್ರಾಬಲ್ಯ ಬಳಸಿ ಸರ್ಕಾರದ ಸ್ವಾಮಿತ್ವದ ಜಮೀನಿನ ಮಣ್ಣನ್ನು ಹಾಡು ಹಗಲೇ ದೋಚುತಿದ್ದಾರೆ. ಗೃಹಬಳಕೆ ವಸ್ತು, ತರಕಾರಿ ತರಲು ಹೋದ ಜನ ಸಾಮಾನ್ಯರ ಬೈಕ್ ಸೀಜ ಮಾಡುವ ಈ

ಅಧಿಕಾರಿಗಳು ತಮ್ಮ ಕಣ್ಣೆದುರೇ ಸರ್ಕಾರಿ ಆಸ್ತಿ, ಮಣ್ಣಿನ ಅಕ್ರಮ ಸಾಗಾಣಿಕೆ ನಡೆಸುತ್ತಿದ್ದರೂ ಕೂಡ ಅಕ್ರಮ ಧಂದೆಗೆ ಕಡಿವಾಣ ಹಾಕದಿರುವುದು ಪೋಲಿಸ್ ಇಲಾಖೆಯೆ ಅಕ್ರಮ ಧಂದೆಕೊರರಿಗೆ ಕಾವಲಾಗಿ ನಿಂತಿದೆಯಾ? ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವು ಮೂಲಗಳ ಪ್ರಕಾರ ಈ ಅಕ್ರಮ ಧಂದೆಕೊರರು ಪೋಲಿಸ್ ಇಲಾಖೆಯ ಕೇಲವು ಅಧಿಕಾರಿಗಳಿಗೆ ಹಪ್ತಾ ಮುಟ್ಟುತ್ತಿದೆ ಅಂತಾನೂ ಕೇಳಿ ಬರುತ್ತಿದೆ.

ಪ್ರತಿಯೊಂದು ಇಟ್ಟಿಗೆ ಭಟ್ಟಿಗಳಲ್ಲಿ ರಾಶಿ ರಾಶಿ ಅಕ್ರಮ ಮಣ್ಣು ಶೇಖರಣೆಯಲ್ಲಿ ತೊಡಗಿರುವ ಟ್ರಾಕ್ಟರ್, ಟಿಪ್ಪರ್, ಜೆಸಿಬಿ, ಹಿಟಾಚಿಯಂತಹ ನೂರಾರು ವಾಹನಗಳು ರಾಜಾರೋಷವಾಗಿ ಮಾರ್ಧನಿಸುತ್ತಾ ನದಿ ದಂಡೆಯ ಫಲವತ್ತಾದ ಜಮೀನನ್ನು ಅಗೆದು ಬಗೆದು ಅನಧೀಕೃತವಾಗಿ ಸಾಗಿಸುತಿದ್ದಾರೆ. ಇದೆಲ್ಲವನ್ನು ಅಧಿಕಾರಿಗಳು ಕಂಡರೂ ತಮ್ಮ ಕಣ್ಣಿಗೆ ಕಾಣದಂತೆ ಜಾಣ ಕುರುಡುತನ ಪ್ರದರ್ಷಿಸುತ್ತಿರುವುದು,
ಏಲ್ಲೋ ಒಂದು ಕಡೆ ಅಧಿಕಾರಿವರ್ಗ ಯಾರದ್ದೋ ಒತ್ತಡಕ್ಕೆ ಅಥವಾ ಯಾವುದೋ ಆಮಿಷಕ್ಕೆ ಒಳಗಾಗಿರುವರೇ ಅನ್ನೊದೆ ಮಿಲಿಯನ್ ಡಾಲರ್ ಪ್ರಶ್ನೆ.

ಇಷ್ಟೆಲ್ಲಾ ಸರಕಾರಿ ಆಸ್ತಿ ಲೂಟಿ ಮಾಡಲಾಗುತ್ತಿದ್ದರು ಕೂಡ ಇತ್ತ ಕಡೆಗೆ ತಲೆಯು ಹಾಕಿ ಮಲಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಈ ಅಕ್ರಮದಲ್ಲಿ ಏನಾದರೂ ಪಾಲು ಇದೆಯಾ? ಅಥವಾ ಜಮಖಂಡಿ ವಿಜಯಪುರ ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲೆ ನಡೆಯುವ ಈ ಅಕ್ರಮದ ಬಗ್ಗೆ ಅಧಿಕಾರಿಗಳಿಗೆ ಸುಳಿವೇ ಸಿಕ್ಕಿಲ್ವಾ?

ಇನ್ನು ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿರಿ ಯಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳ ವರೆಗೂ ಗಮನಕ್ಕೆ ತಂದರು ಕೂಡ ಯಾವುದೇ ಕ್ರಮ ಕೈ ಗೊಳ್ಳದೆ ಇರುವುದು ಹಲವಾರು ಸಂಶಯ ಗಳಿಗೆ ದಾರಿಮಾಡಿ ಕೊಟ್ಟಿದೆ.
ಅದರಂತೆಯೇ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧೀನ ದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆದಿದ್ದು ಜಮಖಂಡಿಯಲ್ಲೆ ಕೃಷ್ಣಾ ಮೇಲ್ದಂಡೆ ಯೋಜನೆ ಹೆಚ್ಚುವರಿ ಡಿಸಿ ಕಛೇರಿ ಇದ್ದರೂ ಕೂಡಾ ಅವರದ್ದೇ ಇಲಾಖೆಯ ಆಸ್ತಿ ಅದು. ಜಮಖಂಡಿ ಅಕ್ಕಪಕ್ಕದಲ್ಲಿ ಅಧಿಕಾರಿಗಳ ಮೂಗಿನ ನೆರಕ್ಕೆ ನಡೆಯೊ ಈ ಲೂಟಿ ತಡೆಯೊದರಲ್ಲಿ ವಿಫಲವಾಗಿದ್ದು ನಿಜಕ್ಕೂ ವಿಷಾದ ಕರ ಸಂಗತಿ.

ಇದೇ ಅಕ್ರಮದ ಬಗ್ಗೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರನ್ನು ವಿಚಾರಿಸಿದರೆ, ಕಟ್ಟಡಗಳಿಗೆ ಇಟ್ಟಿಗೆ ಅತ್ಯಾವಶ್ಯಕ ಮತ್ತು ಯಾವುದೇ ಇಟ್ಟಿಗೆ ಭಟ್ಟಿ ಗಳು ಸಂಪೂರ್ಣ ಕಾನೂನು ಬದ್ದವಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದು ದುರದೃಷ್ಟಕರ ಎಂದೆ ಹೇಳಬಹುದು. ಇಷ್ಟೆಲ್ಲಾ ಬೆಳವಣಿಗೆ ಗಳನ್ನು ಗಮನಿಸಿದರೆ ಈ ಅಕ್ರಮ ಧಂದೆ ಶಾಸಕರ ಕೃಪಾ ಕಟಾಕ್ಷದಲ್ಲಿ ನಡಿತಿದೆಯಾ ಎಂದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ?

=5

follow me

Leave a Reply

Your email address will not be published.

error: Content is protected !!
×