ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ “ತಾಳ್ಮೆ ಸಹನೆ ಭಕ್ತಿ ಸಾತ್ವಿಕ ಬದುಕಿನಿಂದಾಗಿಯೇ ಅಜರಾಮರಾಗಿದ್ದಾರೆ” ದಾನನ ಗೌಡ ತಾಲೂಕ ಪಂಚಾಯತಿ ಸದಸ್ಯರು

ವರದಿ ಸುಂದರರಾಜ್ ಕಾರಟಗಿ

GBnews:ಇಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ 599 ನೇ ಜಯಂತೋತ್ಸವ ಅಂಗವಾಗಿ ದಾನನ ಗೌಡ ತಾಲೂಕು ಪಂಚಾಯಿತಿ ಸದಸ್ಯರು ಇವರು GBnews ಗೆ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವಸಿದ್ಧಾಂತಗಳನ್ನು ವಿವರಿಸಿ ಎಲ್ಲರಿಗೂ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನವರ 599 ಜಯಂತೋತ್ಸವದ ಶುಭಾಶಯಗಳನ್ನು ತಿಳಿಸಿದರು
ತಾಳ್ಮೆ ಸಹನೆ ಭಕ್ತಿ ಸಾತ್ವಿಕ ಬದುಕಿನಿಂದಾಗಿ ಮಲ್ಲಮ್ಮ ಚರಿತ್ರೆ ಪುಟದೊಳಗೆ ಅಜರಾಮರರಾಗಿ ಉಳಿದಿದ್ದಾರೆ ಎಂದು ತಿಳಿಸಿದರು ಪ್ರತಿಯೊಬ್ಬರೂ ಅವರ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

 

“”ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನವರ ಜೀವನ ಚರಿತ್ರೆ”””

” ಹೇಮರೆಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯದೈವ ವಾಗಿ ಆರಾಧಿಸಿ ಮಲ್ಲಿಕಾರ್ಜುನನನ್ನು ಸಾಕ್ಷಾತ್ಕರಿಸಿಕೊಂಡು ಹೇಮರೆಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದ್ದರು ತಾನು ಎಷ್ಟೇ ಕಷ್ಟ ಅನುಭವಿಸಿದರು ಯಾವುದಕ್ಕೂ ಹೆದರದೆ ಸಹನೆಯಿಂದ ಮಲ್ಲಿಕಾರ್ಜುನನನ್ನು ಪೂಜಿಸಿ ಧ್ಯಾನಿಸಿ ಮುಕ್ತಿ ಪಡೆದರು . ಶ್ರೀಶೈಲದ ದಕ್ಷಿಣಕ್ಕಿರುವ
ವೆಲ್ಲ ಟೂರು ಜಿಲ್ಲೆಯ ರಾಂಪುರದ ರೆಡ್ಡಿ ಅರಸುತ್ತಿ ಗೆಯಾ ನಾಗ ರೆಡ್ಡಿ ಗೌರಮ್ಮ ದಂಪತಿಗಳಿಗೆ ಜನಿಸಿದ ಮಲ್ಲಮ್ಮ ಬಾಲ್ಯದಲ್ಲಿಯೇ ಸದಾಕಾಲ ಶ್ರೀಶೈಲ ಮಲ್ಲಿಕಾರ್ಜುನ ಪೂಜೆ ಜಪ ಧ್ಯಾನಗಳಲ್ಲಿ ಮಗ್ನರಾಗುತ್ತಿದ್ದರು ನಾಗರೆಡ್ಡಿ ತನ್ನ ಮಗಳಿಗೆ ಪುರಾಣ ಶಾಸ್ತ್ರ ಪುಣ್ಯ ಕಥೆಗಳನ್ನು ಹೇಳುತ್ತಿದ್ದರು ಇದೆ ಸಂಸ್ಕಾರದಲ್ಲಿ ಬಂದ ರೆಡ್ಡಿ ಮಲ್ಲಮ್ಮನವರು ಸಿದ್ದಾಪುರದ ಕುಮಾರ ಗಿರಿ ವೇಮರೆಡ್ಡಿ ಪುತ್ರ ಭರಮರೆಡ್ಡಿ ಗೆ ಮದುವೆ ಮಾಡಿಕೊಡಲಾಯಿತು ಅತಿ ಮುಗ್ಧ ಸ್ವಭಾವ ನಾದ ಗಂಡ ಭರಮರೆಡ್ಡಿ ಯನ್ನು ದೇವರಂತೆ ಉಪಚರಿಸುತ್ತಿದ್ದರು ಮಲ್ಲಮ್ಮ ವಿಷಲಂಟನಾಗಿದ್ದ ಮೈದುನ ವೇಮನ ನನ್ನು ಮಗನಂತೆ ಕಂಡು ಪ್ರೀತಿಯಿಂದ ತಿದ್ದಿ ಬುದ್ಧಿ ಹೇಳಿ ಮಹಾಯೋಗಿ ಯನ್ನಾಗಿ ಪರಿವರ್ತಿಸಿದರು ಮಲ್ಲಮ್ಮನ ಅತ್ತೆ ಮನೆಯವರು ವಿವಿಧ ಬಗೆಯ ಹಿಂಸೆ ನೀಡಿ ಮನೆಯಿಂದ ಹೊರದಬ್ಬಿದರು ಕಾಡಿಗೆ ಹೋಗಿ ಗೋವುಗಳನ್ನು ಕಾಯುತ್ತಾ ಮಲ್ಲಿಕಾರ್ಜುನನ ಉಪಾಸನೆಯಲ್ಲಿ ಮಗ್ನರಾಗುತ್ತಿದ್ದರು ಇದನ್ನು ಸಹಿಸದ ನಗೆಯನಣ್ಣಿಯರು ಮಲ್ಲಮ್ಮ ಪರಪುರುಷನ ಸಂಘದಲ್ಲಿ ಇದ್ದಾರೆ ಎಂದು ಆರೋಪ ಹೊರಿಸಿ ಅವರನ್ನು ಕೊಲ್ಲಲು ಗಂಡ ಭರಮರೆಡ್ಡಿ ತಿಳಿಸುತ್ತಾರೆ ಆದರೆ ಅವರನ್ನು ಕೊಳ್ಳಲು ಹೋದ ಬರಮ ರೆಡ್ಡಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆದು ತಂಗಿಯರು ಎಷ್ಟು ನೀಚರು ಎಂಬುದನ್ನು ತಿಳಿಸುತ್ತಾನೆ ಮಲ್ಲಮ್ಮ ಜೀವನವಿಡಿ ಕಷ್ಟಗಳನ್ನುಡರೂ ತನಗೆ ನೋವುಂಟು ಮಾಡಿದವರ ಹಿತವನ್ನು ಬಯಸಿದರು ಮನೆಯ ಒಡತಿ ಯಾಗಿದ್ದರು, ದಾಸಿಯಂತೆ ಸೇವೆ ಸಲ್ಲಿಸಿ ಎಂತ ಕಷ್ಟದದಲ್ಲೂ ಶಿವನನ್ನು ಸ್ಮರಿಸುತ್ತಿದ್ದರು ಸಂದರ್ಭದಲ್ಲಿ ಮಲ್ಲಿಕಾರ್ಜುನ ಧ್ಯಾನಿಸಬೇಕಾದ ರೆ ಮಲ್ಲಿಕಾರ್ಜುನ ಪ್ರತ್ಯಕ್ಷನಾಗಿ ನಿನಗೆ ಏನು ಬೇಕು ವರವಾ ಬೇಡಿಕೊ ಎಂದು ಕೇಳಿದಾಗ ತನ್ನ ಸಮುದಾಯಕ್ಕೆ ಬಡತನ ಬಾರದಿರಲು ವರವ ಬೇಡಿಕೊಂಡಳು “ರೆಡ್ಡಿ ಬಂಗಾರದ ಕಡ್ಡಿ ಆಗಲಿ” ಎಂದು ವರವ ಪಡೆದುಕೊಂಡಳು ಮಲ್ಲಿಕಾರ್ಜುನ ನಿಂದ ವರಪಡೆದ ಮಲ್ಲಮ್ಮ ತನ್ನ ಬಳಗವನ್ನು ಕರೆದು “ಸಂಪತ್ತಿಗೆ ಸೋಕ್ಕ ಬೇಡಿ ದಾನ ಗುಣ ಬೆಳೆಸಿಕೊಳ್ಳಿ “ಎಂದು ಹೇಳಿದರು ಎಂಬುವುದಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎನ್ನುತ್ತಾರೆ ದಾರ್ಶನಿಕರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ 12ನೇ ಶತಮಾನದ ಶಿವಶರಣರ ವಚನಗಳನ್ನು ರಚಿಸಿದರು ರಚಿಸಲಿಲ್ಲ ವಾದರೂ ಅವರ ಬದುಕೇ ಒಂದು ವಚನ ಸಂಪುಟದಲ್ಲಿ ಅವರ ಜೀವನ ಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಅಮೂಲ್ಯ ಕಾಣಿಕೆಗಳಾಗಿವೆ.

=2

follow me

Leave a Reply

Your email address will not be published.

error: Content is protected !!
×