ಕೋವಿಡ್ ನಿಯಂತ್ರಣಕ್ಕೆ “ಸರ್ಕಾರದ ಆದೇಶ ಪಾಲಿಸಿ, ಸಮುದಾಯ ಉಳಿಸಿ”ಬೇವಿನಹಾಳ ಪಿಡಿಓ, ಶರಣಮ್ಮ ಕರೆ

ವರದಿ ಸುಂದರ್ ರಾಜ್ ಕಾರಟಗಿ

GBnews:ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯಸರ್ಕಾರದ ಮಾರ್ಗಸೂಚಿಗಳನ್ವಯ ಇಂದು ಕಾರಟಗಿ ತಾಲೂಕಿನ ಬೇವಿನ ಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ನಲ್ಲಿ “ಕೋವಿಡ್ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ವಿಶೇಷ ಸಭೆ”ಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು ಕಾರ್ಯಕ್ರಮವನ್ನು ಉದ್ದೇಶಿಸಿ ಬೇವಿನಹಾಳ ಗ್ರಾಮ ಪಂಚಾಯಿತಿ ಪಿಡಿಓ ಶರಣಮ್ಮ ರವರು ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ ವ್ಯಾಪಕವಾಗಿ ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರು ಮುಂಜಾಗೃತ ಕ್ರಮ ಕೈಗೊಳ್ಳಬೇಕು ಮಾಸ್ಕ್ ಮತ್ತು ಸ್ಯಾನಿಟೈಸರ್ ತಪ್ಪದೆ ಬಳಸಬೇಕು .ಹಳ್ಳಿಗಳಿಗೆ ಬೇರೆಬೇರೆ ಪಟ್ಟಣ ಹೊರ ರಾಜ್ಯಗಳಿಂದ ಬಂದಂತಹ ವ್ಯಕ್ತಿಗಳನ್ನು ಗುರುತಿಸಿ ಪ್ರತಿಯೊಬ್ಬರಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ತಿಳಿಸಬೇಕು, ಗ್ರಾಮಗಳಲ್ಲಿ ಜನ ಆದಷ್ಟು ಗುಂಪಾಗಿ ಸೇರುವುದನ್ನು ನಿಯಂತ್ರಿಸಬೇಕು ಎಂದರು ಮತ್ತು 45 ವರ್ಷ ದಾಟಿದ ಪ್ರತಿಯೊಬ್ಬರು ಲಸಿಕೆ ಹಾಕಿಸಿ ಕೊಳ್ಳುವಂತೆ ಸೂಚಿಸಿದರು. ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಅಂಗನವಾಡಿ ಆಶಾ ಕಾರ್ಯಕರ್ತರು ವಾರ್ಡವಾರು ಕೋವಿಡ್ ನಿಯಂತ್ರಿಸುವಲ್ಲಿ ಜನಜಾಗೃತಿ ಮೂಡಿಸುವುದು ಆಧ್ಯ ಕರ್ತವ್ಯವಾಗಿದೆ ಎಂದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಬಸವಣ್ಣ ಕ್ಯಾಂಪ್ 09 ನಾಗನಕಲ್ಲು02 ಸೇರಿದಂತೆ ಒಟ್ಟು 16 ಪಾಸಿಟಿವ್ ಕೇಸ್ ದಾಖಲಾಗಿದ್ದು ಎಂದು ತಿಳಿಸುವುದರ ಜೊತೆಗೆ ಚಿಕಿತ್ಸೆಗೆ ಅನುಗುಣವಾಗಿ ಸಹಕಾರಿಯಾಗಲು ಮತ್ತು ಗುಣಮುಖರಾಗಲು ಆರೈಕೆ ಕೇಂದ್ರವಾದ ಕಾರಟಗಿ ತಾಲೂಕಿನ ಜಮಾಪುರ ಮೊರಾರ್ಜಿ ವಸತಿ ಶಾಲೆಯ 80 ಬೆಡ್ ಗಳಿರುವ ಆರೈಕೆ ಕೇಂದ್ರ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕೆ ಶ್ರೀದೇವಿ ಶ್ರೀನಿವಾಸ್, ಹಾಗೂ ಗ್ರಾಮ ಪಂಚಾಯತಿ ಸದಸ್ಯರಗಳು ಅಂಗನವಾಡಿ ,ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

=3

follow me

Leave a Reply

Your email address will not be published.

error: Content is protected !!
×