1 ಕೋಟಿ 89 ಲಕ್ಷ ಕಾರಟಗಿ ಭತ್ತ ಬೆಳೆ ಹಾನಿ ಸಮೀಕ್ಷೆ ವರದಿ ಕೂಡಲೇ ರೈತರಿಗೆ ವಿತರಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್ಸಾಬ್ ಮೂಲಿಮನಿ ಒತ್ತಾಯ

ವರದಿ: ಸುಂದರರಾಜ ಕಾರಟಗಿ

GBnews:ದಿನಾಂಕ 29.04.2021 ರಂದು ರಾತ್ರಿ ಸುರಿದ ಬಿರುಗಾಳಿ ಮಳೆಗೆ ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮದ ಸುತ್ತಮುತ್ತಲಿನ ರೈತರ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿತ್ತು ಕನಕಗಿರಿ ಶಾಸಕ ಬಸವರಾಜ್ ದಡೇಸುಗೂರು ರವರು ಕಂದಾಯ ಇಲಾಖೆಯವರನ್ನು ಕೃಷಿ ಇಲಾಖೆ ಅಧಿಕಾರಿಗಳನ್ನು ಜೊತೆಗೆ ಕರೆದುಕೊಂಡು ನೇರವಾಗಿ ರೈತರ ಹೊಲಗದ್ದೆಗಳಿಗೆ ಭೇಟಿಕೊಟ್ಟು ಹಾನಿಯಾಗಿರುವ ರೈತರ ಬೆಳೆಗಳನ್ನು ವೀಕ್ಷಣೆ ಮಾಡಿ ಈ ಕೂಡಲೇ ಬೆಳೆಹಾನಿ ಸಮೀಕ್ಷೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲು ಕಂದಾಯ ಮತ್ತು ಕೃಷಿ ಇಲಾಖೆಯವರಿಗೆ ಸೂಚಿಸಿದರು. ಅದರಂತೆ ಕಾರಟಗಿ ತಾಲೂಕಿನ ವ್ಯಾಪ್ತಿಯಲ್ಲಿ 1 ಕೋಟಿ 89 ಲಕ್ಷ ರಷ್ಟು ರೈತರ ಭತ್ತ ಬೆಳೆ ನಾಶವಾಗಿದ್ದು ಸಮೀಕ್ಷೆಯ ಮೂಲಕ ವರದಿಯನ್ನು ಕಂದಾಯ ಇಲಾಖೆಯವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ ದಿನಾಂಕ 7.5.2021ರಂದು ಕೃಷಿ ಮತ್ತು ಕೊಪ್ಪಳ ಉಸ್ತುವಾರಿ ಸಚಿವರು ಬಿ ಸಿ ಪಾಟೀಲರು

ಕುಷ್ಟಗಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕೊಪ್ಪಳ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರು ನಜೀರ್ ಸಾಬ್ ಮೂಲೆಮನೆ ಕುಷ್ಟಗಿ ತೋಟಗಾರಿಕೆ ಬೆಳೆಗಳಿಗೆ ಲಾಕ್ಡೌನ್ ನಿಂದಾಗಿ ಆಗಿರುವ ತೊಂದರೆಯನ್ನು ವಿವರಿಸಿದರು ಹಾಗೂ ಕಾರಟಗಿ ಭಾಗದ ಬೆಳೆಹಾನಿ ರೈತರಿಗೆ ಶೀಘ್ರವೇ ಪರಿಹಾರ ವಿತರಿಸಲು ಒತ್ತಾಯಿಸಿದರು

=0

follow me

Leave a Reply

Your email address will not be published.

error: Content is protected !!
×