ಜಿಲ್ಲಾದ್ಯಂತ ಪರಿವೀಕ್ಷಣಾ ಮಂದಿರ ಗಳ ಅನುದಾನ ತನಿಖೆಗೆ ಆಗ್ರಹ :ಶರಣಪ್ಪ ಕೊತ್ವಾಲ್

ವರದಿ :ಸುಂದರರಾಜ್ ಕಾರಟಗಿ

GB News: ಭಾರತೀಯ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ಕೊತ್ವಾಲ್ ರವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಸಿ ಪಾಟೀಲರು ಗಂಗಾವತಿಗೆ ನಿನ್ನೆ ಭೇಟಿ ಕೊಟ್ಟ ಸಂದರ್ಭದಲ್ಲಿ ಜಿಲ್ಲಾದ್ಯಂತ ಇರುವಂತಹ ಎಲ್ಲಾ ಪರಿವೀಕ್ಷಣಾ ಮಂದಿರಗಳ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನಗಳ ಬಳಕೆಯ ತನಿಖೆ ಕುರಿತು ದೂರನ್ನು ನೀಡಿದ್ದಾರೆ. ಸರ್ಕಾರ ಪ್ರತಿವರ್ಷ ಒಂದೊಂದು ಪರೀಕ್ಷಣಾ ಮಂದಿರಕ್ಕೆ ಸುಮಾರು 10 ಲಕ್ಷ ರೂಪಾಯಿಗಳು ಅನುದಾನ ಬಿಡುಗಡೆಯಾಗುತ್ತಿದ್ದು ಬಿಡುಗಡೆಯಾಗಿರುವ ಅನುದಾನಗಳ ಸದ್ಬಳಕೆಯಾಗದೆ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ ಪರಿವೀಕ್ಷಣಾ ಮಂದಿರಗಳ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರಕಾರದ ಅನುದಾನ ನುಂಗಿ “ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರು ನೋಡಿಲ್ಲ” ಎಂಬಂತೆ ಅನುದಾನ ದುರ್ಬಳಕೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಪರಿವೀಕ್ಷಣಾ ಮಂದಿರಗಳ ನಿರ್ವಹಣೆ ಸರಿಯಾಗಿ ಮಾಡದೆ ಆಡಿದ್ದೆ ಆಟ ಎಂಬಂತೆ ವರ್ತಿಸುತ್ತಿದ್ದಾರೆ ,ಈ ಕೂಡಲೇ ಜಿಲ್ಲಾಧ್ಯಂತ ಇರುವಂತಹ ಎಲ್ಲಾ ಪರಿವೀಕ್ಷಣಾ ಮಂದಿರ ಗಳಿಗೆ ಈ ಮೂರು ನಾಲ್ಕು ವರ್ಷಗಳಿಂದ ಬಿಡುಗಡೆಯಾಗಿರುವ ಅನುದಾನ ಮಾಹಿತಿ ಪಡೆದು ನಿರ್ವಹಣೆಗಳ ಕುರಿತು ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರನ್ನು ನೀಡಿದ್ದಾರೆ ದೂರನ್ನು ಸ್ವೀಕರಿಸುವ ಸಂದರ್ಭದಲ್ಲಿ ಕಾರಿನಲ್ಲಿದ್ದ ಬಿ.ಸಿ.ಪಾಟೀಲರು ತರಾತುರಿಯಲ್ಲಿದ್ದಂತೆ ಕಾಣುತ್ತಿತ್ತು ಶರಣಪ್ಪ ಕೋತ್ವಾಲ್ ಅವರು ಪರಿವೀಕ್ಷಣಾ ಮಂದಿರ ಗಳಿಗೆ ಸಂಬಂಧಿಸಿದಂತೆ ದೂರನ್ನು ವಿವರಣೆ ಮಾಡುವ ಸಂದರ್ಭದಲ್ಲಿ ಸಚಿವ ಬಿಸಿ ಪಾಟೀಲ್ ಅವರು ತಲೆ ಕೂದಲು ಮತ್ತು ಮಾಸ್ಕನ್ನು ಸರಿ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು ಅವಸರವಸರದಲ್ಲಿದ್ದ ಇದ್ದ ಸಚಿವರು “ಅರ್ಜಿ ಮೊದಲ ಕೊಡಪ್ಪಾ ಕೊಡು ಎಂದು ಕೇಳಿ ಅರ್ಜಿ ಕೈಯಲ್ಲಿ ಕಸಿದುಕೊಳ್ಳುವ ಪ್ರಯತ್ನ”ದ ಪ್ರಸಂಗವೂ ನಡೆಯಿತು.ಆದರೆ ಇದನ್ನು ಯಾವುದನ್ನು ಲೆಕ್ಕಿಸದ ಶರಣಪ್ಪ ಕೊತ್ವಾಲ್ ರವರು ಶಾಂತರೀತಿಯಲ್ಲಿ ದೂರಿನ ಸಂಪೂರ್ಣ ವಿವರಣೆಯನ್ನು ಸಚಿವರಿಗೆ ನೀಡಿದ್ದು ಗಮನಾರ್ಹ. ಕೊಪ್ಪಳ ಸಚಿವರು ಮುಂದೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದುನೋಡಬೇಕಾಗಿದೆ.

=4

follow me

Leave a Reply

Your email address will not be published.

error: Content is protected !!
×