ಯೋಗ್ಯತೆ ಇಲ್ಲದವರೆಲ್ಲಾ ವಿಜಯಸಂಕೇಶ್ವರ್ ಬಗ್ಗೆ ಮಾತನಾಡುತ್ತಿದ್ದಾರೆ

📝 ರಕ್ಷತ್ ಶೆಟ್ಟಿ, ದಿಗ್ವಿಜಯ ನ್ಯೂಸ್ ನಿರೂಪಕ

ಡಾ. ವಿಜಯ ಸಂಕೇಶ್ವರ ಅವರ ಹೆಸರು ಹೇಳಲು ಯೋಗ್ಯತೆ ಇಲ್ಲದ ‘ಸಿಂಬಳದ ಹುಳ’ ಗಳೆಲ್ಲಾ ಅವರ ಬಗ್ಗೆ ಮಾತಾನಾಡೋಕೆ ಶುರು ಮಾಡಿದ್ದಾವೆ. ಸಂಕೇಶ್ವರರು ಹೇಳಿದ ಲಿಂಬೆ ಹುಳಿ ಸಲಹೆ ಬಗ್ಗೆ ಕೊಂಕು ಮಾತನಾಡುತ್ತಾ, ಏನೇನೋ ಕಥೆಗಳನ್ನು ಸೃಷ್ಟಿಸಿ ಅವರ ಮೇಲಿನ ಹೊಟ್ಟೆಕಿಚ್ಚು, ಅಸೂಯೆ, ನಂಜಿ ಮತ್ಸರಗಳನ್ನೆಲ್ಲಾ ಹೊರಹಾಕುತ್ತಿದ್ದಾವೆ.
ಮೊನ್ನೆ ಡಾ.ಸಂಕೇಶ್ವರ ಅವರು ಹೇಳಿದ್ದು ಇಷ್ಟೇ ಕಫ, ಶೀತದ ಕಾರಣದಿಂದ ಮೂಗು ಬ್ಲಾಕ್ ಆಗಿ, ಉಸಿರಾಟಕ್ಕೆ ಸಮಸ್ಯೆಯಾಗುತ್ತಿದ್ದರೆ, ಲಿಂಬೆ ರಸ ಮೂಗಿಗೆ ಹಾಕಿ ಅದರಿಂದ ತಕ್ಷಣದ ರಿಲೀಫ್ ಸಿಗುತ್ತೆ, ಉಸಿರಾಟ ಸರಾಗವಾಗುತ್ತೆ, ನಾನು ಇದನ್ನು ಟ್ರೈ ಮಾಡಿದ್ದೇನೆ, ನನಗೆ ರಿಸಲ್ಟ್ ಸಿಕ್ಕಿದೆ, ಕರೊನಾದಿಂದ ಉಸಿರಾಟದ ಸಮಸ್ಯೆ ಇದ್ದರೆ ಒಮ್ಮೆ ಪ್ರಯತ್ನಿಸಿ ನೋಡಿ ಎಂದಿದ್ದಾರೆ ಅಷ್ಟೇ, ಇನ್ನು ಅವರು ಎಲ್ಲೂ ಕೂಡ ಕರೊನಾಗೆ ಲಿಂಬೆ ರಸ ಔಷಧಿ ಅಂತ ಹೇಳಿಲ್ಲ,ಯಾರೂ ವೈದ್ಯರ ಬಳಿ ಹೋಗಬೇಡಿ ಅಂದಿಲ್ಲ, ಎಚ್ಚರಿಕೆಯಿಂದಿರಿ ಅಂತ ಸಲಹೆಯಷ್ಟೇ ಕೊಟ್ಟು ಮಾತು ಮುಗಿಸಿದ್ದಾರೆ. ಉಸಿರಾಟದ ಸಮಸ್ಯೆಯಾಗಿ, ಆಸ್ಪತ್ರೆಗೆ ಸೇರುವ ದಾರಿ ಮಧ್ಯೆಯೇ ರೋಗಿಗಳು ಸಾಯಬಾರದು ಅನ್ನೋ ಕಾರಣಕ್ಕಾಗಿ ಡಾ. ಸಂಕೇಶ್ವರ ಅವರು ಈ ಮಾತನ್ನು ಹೇಳಿದ್ದಾರಯೇ ವಿನಾಃ ಅದರಿಂದ ಅವರಿಗೇನು ಲಾಭ ಇಲ್ಲ, ಸ್ವಂತ ಬಳಕೆಗೆ 2, 2 ವಿಮಾನ ಹೊಂದಿರುವ ವ್ಯಕ್ತಿಗೆ ಮನೆಯಲ್ಲಿ 4 ಆಕ್ಸಿಜನ್ ಸಿಲಿಂಡರ್ ತಂದಿಡೋದು ಕಷ್ಟದ ಕೆಲಸವಲ್ಲ ನೆನಪಿಡಿ!

ಇನ್ನೂ ವಿಜಯ ಸಂಕೇಶ್ವರ ಅವರನ್ನು ಟೀಕಿಸುವ ನೆಪದಲ್ಲಿ ಪತ್ರಕರ್ತರೊಬ್ಬರು ಸಂಕೇಶ್ವರರು ಪತ್ರಿಕೆ ಮೂಲಕ ಒತ್ತಡ ಹಾಕಿ ಸಂಸದರಾದ್ರು ಅಂತ ಬರೆದಿದ್ದಾರೆ, ಅವರ ಗಮನಕ್ಕೆ ಡಾ.ವಿಜಯ ಸಂಕೇಶ್ವರರು ಮೊದಲ ಬಾರಿ ಸಂಸದರಾಗಿದ್ದು 1996ರಲ್ಲಿ, ವಿಜಯ ಕರ್ನಾಟಕ ಪತ್ರಿಕೆ ಶುರುವಾಗಿದ್ದು 1999ರಲ್ಲಿ, ಆರಂಭವೇ ಆಗಿರದಿದ್ದ ಪತ್ರಿಕೆಯನ್ನು ಬಳಸಿ, ಡಾ.ಸಂಕೇಶ್ವರ ಅವರು 1996ರಲ್ಲಿ ಹೇಗೆ ಒತ್ತಡ ಹಾಕಿದ್ರೋ ಗೊತ್ತಿಲ್ಲ!

ನಾನು ಕಳೆದ 4 ವರ್ಷಗಳಿಂದ ವಿಆರ್ ಎಲ್ ಸಂಸ್ಥೆಯಲ್ಲಿ ಉದ್ಯೋಗಿ , ಈ ನಾಲ್ಕು ವರ್ಷದಲ್ಲಿ ನಮಗೆ ಒಂದು ದಿನವೂ ಸಂಬಳ ತಡವಾಗಿಲ್ಲ, ಕರೊನಾ ಹೊಡೆತಕ್ಕೆ ಲಾಕ್ ಡೌನ್ ಆಗಿ, ಜಗತ್ತೇ ಆರ್ಥಿಕ ಸಂಕಷ್ಟ ಎದುರಿಸಿದಾಗಲೂ ಸರಿಯಾದ ಸಮಯಕ್ಕೆ ಸ್ಯಾಲರಿ ಹಾಕಿ, ಬೋನಸ್ ಕೊಟ್ಟು ಬೆನ್ನು ತಟ್ಟಿದವರು ನಮ್ಮ ಬಾಸ್ ಡಾ.ವಿಜಯ ಸಂಕೇಶ್ವರ್..

ಅಂದಹಾಗೇ ವಿಜಯ ಸಂಕೇಶ್ವರರು 20 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಕೊಟ್ಟು, ನನ್ನಂತಹ ಲಕ್ಷಾಂತರ ಮಂದಿಗೆ ಬೆಳಕಾಗಿದ್ದಾರೆ, ಅವರ ಬಗ್ಗೆ ಬೊಗಳುತ್ತಿರುವವರು, ಸೋಷಿಯಲ್ ಮೀಡಿಯಾದಲ್ಲಿ ಅರಚುತ್ತಿರುವವರು ಸಮಾಜಕ್ಕೆ ಏನು ಮಾಡಿದ್ದಾರೆ, ಸ್ವಲ್ಪ ಹೇಳ್ತಿರಾ?

=5

follow me

Leave a Reply

Your email address will not be published.

error: Content is protected !!
×