ರಾಜಕಾರಣಿ ಮತ್ತು ಪ್ರಜೆಯ ನಡುವಿನ ವಾಸ್ತವ

ಶಿವಯ್ಯ ಸ್ವಾಮಿ ನವಲಿ:

ಸಾಮನ್ಯ ಪ್ರಜೆ: ಚುನಾವಣೆಯ ಅಬ್ಬರದ ಪ್ರಚಾರಕ್ಕೆ ಇಲ್ಲದ ಕರೋನಾ ನಿಯಮ..

ಜಾತ್ರೆ, ಹಬ್ಬ, ಧಾರ್ಮಿಕ ಕಾರ್ಯಗಳಿಗೆ ಮಾತ್ರ ಅನ್ವಯ ಯಾಕೆ..

ರಾಜಕಾರಣಿ: ನಮ್ಮ ತೆವಲಿನ ಪ್ರಚಾರಕ್ಕೆ ಜನರಿಗೆ ದುಡ್ಡು ಕೊಟ್ಟು ಸೇರಸ್ತಿವಿ ಅದಕ್ಕೆ ಅಲ್ಲಿ ನಿಯಮವಿಲ್ಲ..

ಮತ್ತೆ ಧಾರ್ಮಿಕ ಆಚರಣೆಗಳಲ್ಲಿ ಜನ ಭಕ್ತಿ ಶ್ರದ್ಧೆಯಿಂದ ಸೇರತಾರೆ ಅದಕ್ಕೆ ಅಲ್ಲಿ ಕರೋನಾ ನಿಯಮ ಅನ್ವಯ.. ಯಾಕಂದ್ರೆ ನಿಯಮ ಮತ್ತು ಆದೇಶ ಮಾಡೋರು ನಾವೆ ಅಲ್ವ..

ಸಾಮನ್ಯ ಪ್ರಜೆ :ಇದರಿಂದ ಪ್ರಜೆಗಳಿಗೆ ತೊಂದರೆ ಆಗಲ್ವ..?

ರಾಜಕಾರಣಿ: ಅದೆಗೆ ತೊಂದರೆ ಆಗುತ್ತೆ ನಮಗೆ ಓಟು ಹಾಕುವಾಗ ನಮ್ಮ ಕಡೆ ಪ್ರಜೆಗಳು ದುಡ್ಡು ತಗೊಂಡಿರುತ್ತಾರೆ.. ಪುಗಸ್ಟೆನು ಅಲ್ಲಾ, ಅಲ್ಲದೆ ಗ್ರಾಮ ಮಟ್ಟದಿಂದ ಹಿಡಿದು ನಗರ ಮಟ್ಟದ ಕೆಲ ಪುಡಾರಿ ಲಿಡರ್ ಗಳನ್ನು ನಾವು ಸಾಕಬೇಕು ಅವರಿಗೂ ದುಡ್ಡು ಕಾಸು ಕೋಡಬೇಕು.. ಮತ್ತೆ ನಮ್ಮ ಬೆನ್ನ ಬಿದ್ದಿರೊ ಕೇಲ ಪೇನ್ನು, ಕಾಗದ, ಕ್ಯಾಮರ ವಿಡಿಯೊ ಪ್ರಸಾರಿಗಳಿಗೆ ದುಡ್ಡು ಕಾಸು ಕೊಡಬೇಕು, ನಕಲಿ ರೊಲ್ ಕಾಳ್ ಓಲಾಟಗಾರರಿಗೆ ಸಾಕಬೇಕು,

ನಮ್ಮ ಮಕ್ಕಳು ಕುಟುಂಬದವರನ್ನ ರಾಜಕಾರಣಿ ಮಾಡಬೇಕು.

ಮತ್ತೆ ದುಡದು ತಿನ್ನಿ ಅಂತ ಹೇಳಿದ್ರೆ ನಮಗೆ ನೆಕ್ಷ್ಟ್ ಮುಖ ಎತ್ತಿಕೂಡ ನೋಡಲ್ಲಾ ಅದಕ್ಕೆ ಪುಗಸಟ್ಟೆ ಕೇಲ ಯೋಜನೆಗಳನ್ನ ಜಾರಿ ಮಾಡಬೇಕು.,

ಇಷ್ಟೇಲ್ಲಾ ನಮ್ಮ ಶ್ರಮ ಇರುವಾಗ ಪ್ರಜೆಗಳು ನಮ್ಮ ಪರಸ್ಥಿತಿ ತಿಳಕೊಂಡು ನಾವು ಮಾಡೋ ಕೇಲ ನಿಯಮನ ಅನಸರಿಸಲೆ ಬೇಕು..

ಸಾಮನ್ಯ ಪ್ರಜೆ : ಎಲ್ಲರೂ ದುಡ್ಡು ತಗೊಂಡು ಓಟ್ ಹಾಕತಾರೆ ಅಂತ ಅದೇಗೆ ಹೇಳತಿರಿ

ಕೆಲ ಸ್ವಾಭಿಮಾನಿ ಮತದಾರರು ಇಲ್ವಾ.. ಗ್ರಾಮ ಮತ್ತು ನಗರಗಳಲ್ಲಿ ಸ್ವಾಭಿಮಾನಿ ಲಿಡರ್ ಗಳು ಇಲ್ಲಾ ಅಂತನಾ ನೀಮ್ಮ ಅರ್ಥ

ನಿಮ್ಮ ಮಾತು ವಾಪಾಸ್ ತಗೋಳಿ ಯಾರೋ ದುಡ್ಡು ತಗೋತಾರಿ ಅಂತ ಎಲ್ಲರಿಗೂ ಯಾಕೆ ಈ ತರ ಮಾಡತಿರಿ ನೀವು ಇದು ಅನ್ಯಾಯ ಅಲ್ವಾ..?

ರಾಜಕಾರಣಿ: ನೋಡು ಬುದ್ದಿವಂತ.., ಅಪರಾದ ಮಾಡಿದ್ದು ಸಿಡಿ ಆದ್ರೇ ಸಂಕಷ್ಠ ಅನುಭವಿಸಿದ್ದು ಅವರ ಕುಟುಂಬದವರು.. ಮಗ/ಮಗಳು ಅಪರಾದ ಮಾಡಿದ್ರೆ ಅವರ ಮನೆಯವರು ಅದರ ಸಂಕಟಗಳನ್ನ ನೋವುಗಳನ್ನ ಅನಭವಿಸಬೇಕಾಗುತ್ತೆ ಅಲ್ವ,

100 ಜನರಲ್ಲಿ 10 ಸ್ವಾಭಿಮಾನಿಗಳಿದ್ದರೆ ಎನು ಮಾಡೋಕೆ ಆಗೋಲ್ಲಾ..

90 ಜನ ನಮಗೆ ಬೇಕು ಸಂವಿಧಾನದ ಪ್ರಕಾರ ಯಾವ ಕಡೆ ಜಾಸ್ತಿ ಇರತಾರೋ ಅವರದೆ ಮೆಜಾರಟಿ ಅಂತ ಇದೆ ಅದಕ್ಕೆ ನಾವು 10 ಜನ ನೋಡಲ್ಲಾ 90 ಜನ ಓಟರ್ಸ್ ನೋಡತಿವಿ

ಸರಿ ಯಾವುದು ತಪ್ಪು ಯಾವುದು ಅಂತ ಯೋಚನೆ ಮಾಡಬೇಕಾದವರು ಜನರೇ.. ಹೊರತು ನಾವಲ್ಲಾ..?

ಯಾಕಂದ್ರೇ ಪುಗಸ್ಟೆ ಯೋಜನೆಗಳನ್ನ ಜಾರಿ ಮಾಡಿದಾಗ ಯೋಚಿಸಿ ಇದರಿಂದ ನಮಗೆ ಆಗುವ ಲಾಭ ನಷ್ಟಗಳನ್ನ ತೂಕ ಮಾಡಿ ಅವಗಳನ್ನ ವಿರೋದಿಸಿ ರದ್ದು ಮಾಡಿಸಬೇಕು..

ಅದು ಬಿಟ್ಟು ಪುಗಸ್ಟೆ ಇದೆ ಅಂತ ನನಗೊಂದಿರಲಿ ನಮ್ಮಪ್ಪಗೊಂದಿರಲ್ಲಿ ಅಂತ ಬಾಚೊದು

ಮತ್ತೆ ಅದು ಖಾಲಿ ಆದ ತಕ್ಷಣ ಸರಕಾರದಿಂದ ನಮಗೆ ಇನ್ನು ಎನು ಸಿಕ್ಕಿಲ್ಲಾ ಅಂದ್ರೆ ಹೇಗೆ

ಅದಕ್ಕಾಗಿ ಪುಡಾರಿಗಳು ಗಲಾಟೆ ಬೇರೆ ಎನ್ ಮಾಡೋಣ ನಾವು..?

 

ಸಾಮಾನ್ಯ ಪ್ರಜೆ: ಜನರನ್ನ ದಾರಿ ತಪ್ಪಸೋರು ನೀವೆ ಅಲ್ವ ನಿವೆ ಸರಿ ಮಾಡೋಕೆ ಯಾಕ ಆಗಲ್ಲಾ..

 

ರಾಜಕಾರಣಿ : ಸರಿ ಮಾಡೋಕೆ ಹೋದ್ರೆ ಸರಕಾರ ಇರೊಲ್ಲಾ ಯಾಕಂದ್ರೆ ಸರಕಾರ ರಚನೆಗೆ ಮೆಜಾರಟಿ ಬೇಕು.. ಮೆಜಾರಟಿ ಬೇಕು ಅಂದ್ರೆ ನಾನು ಮೊದಲೆ ಹೇಳಿದಾಂಗೆ 90% ಜನ ನಮ್ಮಕಡೆ ಬೇಕು ಆ 90% ಜನ ಯಾರು ಅಂದ್ರೆ ಅವರೆ ಇಗಾಗಿ ಅದು ನಮ್ಮ ಕಡೆ ಸಾಧ್ಯ ಆಗೋದು ಕಷ್ಟ,

ಸಾಮಾನ್ಯ ಪ್ರಜೆ : ನೀವು ಪ್ರತಿ ಸಾರಿನು ಜನರೆ ತಪ್ಪುಗಾರರು , ಸಾರ್ವಜನಿಕರೆ ಸರಿಯಾಗಬೇಕು ಅಂತಿದಿರಿ ಇದು ಬಹಳ ಕೆಟ್ಟ ಉತ್ತರ ನಿಮ್ಮದು.. ನೀಮ್ಮ ಸಲುವಾಗಿ ಜನರನ್ನು ತಪ್ಪಿತಸ್ಥರನ್ನಾಗಿ ಮಾಡಬೇಡಿ.

ರಾಜಕಾರಣಿ : ನಾನು ಹೇಳಿದ್ದೆ ಸರಿ ಪ್ರಜೆಗಳಿಂದ ಪ್ರಜಗಳಿಗೋಸ್ಕರ ಪ್ರಜಗಳಿಗಾಗಿಯೆ ಜನ ಸರಕಾರ ಅಂತ ಇರುವಾಗ ಪ್ರಜೆಗಳೆ ಆಯ್ಕೆ ಮಾಡುವಾಗ ಸರಿಯಾದ ರೀತಿ ಇರಬೇಕು.

ಯಾವುದೆ ಲಾಭಿ ಇಲ್ಲದೆ, ದುಡ್ಡು ಪಡೆಯದೆ, ದುಡ್ಡು ಕೊಟ್ಟು ನಾವು ಪ್ರಚಾರಕ್ಕೆ ಕರೆದಾಗ ಹೋಗದೆ, ಪುಗಸ್ಟೆ ಯೋಜನೆಗಳನ್ನ ಪಡೆಯದೆ, ಭ್ರಷ್ಠಾಚಾರಿ ಅಧಿಕಾರಿಗಳ ವಿರುದ್ದ ಪ್ರತಿಭಟಿಸದೆ, ಸರಿಯಾಗಿ ಧ್ವನಿ ಎತ್ತದೆ, ಸಾಮಾಜಿಕ ನ್ಯಾಯದ ಪರ ಚಿಂತನೆ ಮಾಡದೆ ಇದ್ದರೆ ನಾವೆನು ಮಾಡೋಣ.. ನಮಗೆ ಧರ್ಭಾರ್ ಬೇಕು ಅದಕ್ಕೆ ನಾವು ಆತರ ಅಷ್ಟೇ

ಇದರಲ್ಲೇನು ತಪ್ಪು., ನಾನು ಹೇಳಿದ್ದು ಯೋಚಿಸಿ ಅಪರಾಧಿ ಯಾರೆಂದು ನಿಮಗೆ ತಿಳಿಯುತ್ತದೆ.,

ಸಾಮನ್ಯ ಪ್ರಜೆ : ಆಗದರೆ ಸದೃಡವಾಧ ಸಮರ್ಥ ಸುಧಾರಣೆ ಆಡಳಿತ ವ್ಯವಸ್ಥೆ ಮಾಡಲು ಸಾಧ್ಯವೇ ಇಲ್ಲವಾ..?

ರಾಜಕಾರಣಿ : ಇದೆ ಆದರೆ ಕೆಲ ಅಂಶಗಳು ಬದಲಾದರೆ ಮಾತ್ರ.

ಸಾಮಾನ್ಯ ಪ್ರಜೆ: ಯಾವು ಆ ಅಂಶಗಳು ಹೇಳಿ, ಜನರು ಇವುಗಳನ್ನು ಕೇಳಿ ಎನಾದರು ಬದಲಾಯಿಸುತ್ತಾರೋ ನೋಡೋಣ

ರಾಜಕಾರಣಿ: ಆಡಳಿತವೇ ಗೊತ್ತಿರದ ರಾಜಕಾರಣಿ, ತಾನು ಮಾಡುವ ಕಾರ್ಯವೇ ಗೊತ್ತಿರದ ಅಧಿಕಾರಿಗಳು, ಕೆಲಸಕ್ಕೆ ಬಾರದ್ದನ್ನು ತೋರಿಸುವ ಕೇಲ ವಿಡಿಯೋ ಮಾಧ್ಯಮಗಳು, ಅರ್ಥವಿಲ್ಲದನ್ನು ಬರೆಯುವ ಕೆಲ ಪತ್ರಿಕೆಗಳು, ಚಿಂತನೆಗಳಿಲ್ಲದ ಕೆಲ ಚಿಂತಕರು, ತೊಚಿದ್ದು ಗಿಚುವ ಕೆಲ ಸಾಹಿತಿಗಳು, ನೈಜತೆ ಇಲ್ಲದ ಹೋರಾಟಗಳು, ಪುಗಸ್ಟೆ ತಿನ್ನುವ ಜನರು.,

ನಾಯಕತ್ವ ಗುಣ ಗೊತ್ತಿರದ ಪುಡಾರಿ ಲಿಡರ್ ಗಳು, ಸಮಾಜದ ಸುಧಾರಣೆ ಬಿಟ್ಟು ಸ್ವಾರ್ಥಕ್ಕಾಗಿ ನಿಂತ ಕೆಲ ಸ್ವಾಮಿಗಳು, ನಮ್ಮ ನಮ್ಮ ಧರ್ಮವನ್ನು ಹೆಚ್ಚಿಸಬೇಕು ಎನ್ನುವ ಚಪಲ ತುಂಬಿ ಜನರಿಗೆ ಮರಳು ಮಾಡುವ ಧರ್ಮಾಂದ ಖುಲಾಂತರಿಗಳು, ಜಾತಿ ಜಾತಿಗಳು ಹೊಂದಾಣಿಕೆ ಇದ್ದರು ತಮ್ಮ ಚಚಲಕ್ಕಾಗಿ ಜಾತಿಗಳ ಮಧ್ಯ ಜಗಳವಿಡುವ ಜಾತ್ಯಾಥೋತರಿಗಳು, ಸರಿಯಾದ ಶಿಕ್ಷಣ ಮಾರ್ಗನೀಡದ ರಾಜಕೀಯ ತೆವಲಿಗೆ ಬಿದ್ದ ಕೆಲ ಶಿಕ್ಷಣ ಕ್ಷೇತ್ರದವರು, ಅನ್ಯಾಯವನ್ನು ಪ್ರತಿನಿಧಿಸಿ ಅದನ್ನು ವೈಭವಿಕರಿಸುವ ನ್ಯಾಯಲಯದ ಕೆಲ ವೃತಿವ್ಯಾದಿಗಳು.. ಆರೋಗ್ಯದ ಬಗ್ಗೆ ಜ್ಞಾನವೆ ಇರದೆ ಹಣಕ್ಕಾಗಿ ಜನರ ಜೀವನದ ಜೋತೆ ಚಲ್ಲಾಟವಾಡುವ ಕೇಲ ವೈದ್ಯಲೋಕದವರು.. ಬಂಡಲ್ ಬಡಾಯಿಗಳು ಇನ್ನು,, ಮುಂದುವರೆದು ಇಂತವರ ಅಂಶಗಳು ಬದಲಾವಣೆ ಆಗುವವರೆಗೂ ನೀನು ಹೇಳಿದ “ಸದೃಡವಾಧ ಸಮರ್ಥ ಸುಧಾರಣೆ ಆಡಳಿತ ವ್ಯವಸ್ಥೆ ಮಾಡಲು ಸಾಧ್ಯವೇ ಇಲ್ಲ”

ಸಾಮನ್ಯ ಪ್ರಜೆ : ಹುಷ್ಯಷ್ಯಷ್ಯ (ನಿಟ್ಟುಸಿರು ಬೀಟ್ಟು) ಇ ಅಂಶಗಳಲ್ಲಿ ಒಂದಾದರು ಸಾಧ್ಯವಾಗುತ್ತಾ..?

ರಾಜಕಾರಣಿ: (ನಗುತ್ತಾ) ಪ್ರಪಂಚ ಪ್ರಳಯವಾದಗ ಇದು ಸಾಧ್ಯನಾ ನೋಡೋಣಾ..?

ಸುಮ್ಮನೆ ಜಾಸ್ತಿ ಯೋಚನೆ ಮಾಡಬೇಡ.. ನನಗೆ ಮುಂದೆ ಕೆಲಸ ಬಹಳ ಇದೆ

ಹೊಗತಿನಿ ತಗೋ ಈ 500 ರೂಪಾಯಿ ತಪ್ಪದೆ ನನಗೆ ಓಟ್ ಹಾಕು..

 

ಕೊನೆಯದಾಗಿ ಹಿರಿಯರು ಹೇಳಿದ ಮಾತಿನಂತೆ ದೃಷ್ಠಿ ಬದಲಾದರೆ.. ಸೃಷ್ಠಿ ಬದಲಾದಿತು..

ಮೊದಲು ನಿ ಬದಲಾಗು… ನಿ ಬದಲಾಗು.. ನಿನ್ನಿಂದಲೆ ಬದಲಾವಣೆ ಸಾಧ್ಯ,,

(ಬದಲಾಯಿಸಲು ನಾವೇನು ಮಾಡಬೇಕು.. ಮುಂದಿನ ಬರಹದಲ್ಲಿ ನೋಡೋಣ)

=6

follow me

One Reply to “ರಾಜಕಾರಣಿ ಮತ್ತು ಪ್ರಜೆಯ ನಡುವಿನ ವಾಸ್ತವ”

Leave a Reply

Your email address will not be published.

error: Content is protected !!
×