ವ್ಯಾಕ್ಸಿನ್ ಹಾಕಿಸಿಕೊಂಡ 5 ದಿನಕ್ಕೆ ಚಿತ್ರನಟಿ ನಘ್ಮ ಗೆ ಕರೋನಾ ಪಾಸಿಟಿವ್

ಮುಂಬೈ: ನಟಿ ಕಂ ರಾಜಕಾರಣಿ ನಗ್ಮಾ ಅವರಿಗೆ ಬುಧವಾರ ಕೊರೊನಾ ಪಾಸಿಟಿವ್ ಬಂದಿದ್ದು, ಸದ್ಯ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

50 ವರ್ಷ ನಗ್ಮಾ ಅವರು ಟ್ವೀಟ್ ಮಾಡಿದ್ದು, ಕೆಲ ದಿನಗಳ ಹಿಂದೆ ಕೋವಿಡ್ 19 ಮೊದಲನೇ ಡೋಸ್ ಲಸಿಕೆ ತೆಗೆದುಕೊಂಡಿದ್ದೆ. ಇದೀಗ ಮತ್ತೆ ಕೊರೊನಾ ಟೆಸ್ನ್ ನಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ದಯವಿಟ್ಟು ಎಲ್ಲಾರೂ ಜಾಗರೂಕರಾಗಿರಿ. ಅಲ್ಲದೆ ಈಗಾಗಲೇ ಮೊದಲೇ ಡೋಸ್ ಪಡೆದುಕೊಂಡವರು ಕೂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನಗ್ಮಾ ಅವರು ಏಪ್ರಿಲ್ 2ರಂದು ಮೊದಲನೇ ಲಸಿಕೆ ಹಾಕಿಸಿಕೊಂಡಿದ್ದರು. ಆ ಬಳಿಕ ಇದೀಗ ಮತ್ತೆ ಟೆಸ್ಟ್ ಮಾಡಿದಾಗ ಪಾಸಿಟಿವ್ ಇರುವುದು ಗೊತ್ತಾಗಿದ್ದು, ಸದ್ಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗ್ಮಾ ಅವರು ತೆಲುಗು, ತಮಿಳು, ಭೊಜ್ ಪುರಿ, ಮಲಯಾಳಂ, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ.

=5

follow me

Leave a Reply

Your email address will not be published.

error: Content is protected !!
×