ಜಿಬಿ ನ್ಯೂಸ್ ಕನ್ನಡ ವರದಿಗೆ ಎಚ್ಚೆತ್ತ ಕಾರಟಗಿ ತಸಿಲ್ದಾರ್; ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆ ಅರ್ಥಪೂರ್ಣವಾಗಿ ನಡೆಸಿದ ತಹಶೀಲ್ದಾರರು

ದಿನಾಂಕ 1.4 .2021 ತಾಲೂಕ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರಾದಂತಹ ತಹಸಿಲ್ದಾರರು ತಾಲೂಕು ಆಡಳಿತ ವರ್ಗದವರಿಗೆ ಆಹ್ವಾನ ನೀಡದೆ ಸಭೆ ನಡೆಸಲಾಗಿತ್ತು ಇದರ ಬಗ್ಗೆ ಜಿಬಿ ನ್ಯೂಸ್ ಕನ್ನಡ ಚಾನೆಲ್ ನಲ್ಲಿ ವರದಿಯಾಗಿತ್ತು ಎಚ್ಚೆತ್ತುಕೊಂಡ ಕಾರಟಗಿಯ ತಹಸೀಲ್ದಾರರು ಎಂದು ಮತ್ತೆ ಸಭೆ ಕರೆಯುವ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ

ವರದಿ ಸುಂದರರಾಜ್ ಕಾರಟಗಿ:

ಕಾರಟಗಿ ಯಲ್ಲಿ ದಿನಾಂಕ 3. 4 .2021ರಂದು ತಾಲೂಕು ತಹಸಿಲ್ ಕಚೇರಿಯಲ್ಲಿ ಡಾಕ್ಟರ್ ಬಾಬು ಜಗಜೀವನ್ ರಾಮ್ ಹಾಗೂ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರ ಜಯಂತಿ ಪೂರ್ವಭಾವಿ ಸಭೆ ನಡೆಯಿತು.  ಕಾರಟಗಿ ತಾಲೂಕು ಆಡಳಿತ ವರ್ಗದವರಿಗೆ ಆಹ್ವಾನ ಮಾಡಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು ಈ ಪೂರ್ವಭಾವಿ ಸಭೆಯಲ್ಲಿ ಕಾರಟಗಿ ಗ್ರಾಮೀಣ ಪಿಎಸ್ಐ ಮಲ್ಲಪ್ಪನವರು ಪುರಸಭೆಯ ಆಡಳಿತ ವರ್ಗದವರು ಕೃಷಿ ಇಲಾಖೆ ಅಧಿಕಾರಿಗಳು ಪಶುವೈದ್ಯಾಧಿಕಾರಿಗಳು ಅಗ್ನಿಶಾಮಕದಳದವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೆಇಬಿ ಅಧಿಕಾರಿಗಳು ಇನ್ನು ಹಲವಾರು ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು 14. 4 .2021 ನಡೆಯುವ ಬಿಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಸರಳ ರೀತಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ದಲಿತ ಮುಖಂಡರುಗಳು ಮೆರವಣಿಗೆಯ ಮೂಲಕ ಕಾರ್ಯಕ್ರಮವನ್ನು ಆಚರಿಸಬೇಕೆಂದು ಪಟ್ಟುಹಿಡಿದರು ಈ ಬಗ್ಗೆ ಕೆಲಕಾಲ ಸಭೆಯಲ್ಲಿ ಗೊಂದಲ ಉಂಟಾಯಿತು ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶ್ರೀ ತುಗಲಪ್ಪನವರು ದಲಿತ ಮುಖಂಡರುಗಳ ಮನವೊಲಿಸಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಲು ಮನವಿ ಮಾಡಿದರು ಹಾಗೂ ಸಭೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಓದಿದರು ತದನಂತರ ಸಭೆಯಲ್ಲಿ ಸರ್ವಾನುಮತದಿಂದ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ
ವೀರೇಶ್ ವಕೀಲರು ಯಲ್ಲಪ್ಪ ಕಟ್ಟಿಮನಿ ಪ್ರದೀಪ್ ತೊಂಡಿಹಾಳ ಕ್ಯಾಂಪ್ ಬಸವರಾಜ್ ಕುಷ್ಟಗಿ ಮರಿಯಪ್ಪ ನಾಗನಕಲ್ ಲೋಕೇಶ್ ಕಾರಟಗಿ ಶರಣಗೌಡ ಯರಡೋಣಿ ಮರಿಯಪ್ಪ ಸಾಲೋಣಿ ಜಮದಗ್ನಿ ಚೌಡಕಿ ಮುತ್ತಣ್ಣ ಸಿದ್ದಾಪುರ ವಿರುಪಾಕ್ಷಿ ಕುಂಟೋಜಿ ನಾಗರಾಜ್ ಈಳಿಗನೂರ್ ಆನಂದ ಎಂ ಕಾರಟಗಿ ಮುದಿಯಪ್ಪ ಇನ್ನೂ ಹಲವಾರು ಮುಖಂಡರುಗಳು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!