ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ : ಗಂಗಾವತಿಯ ಜಿಲ್ಲಾಪಂಚಾಯತ್ ವಾಟರ್ ಸಪ್ಲೈ ವಿಭಾಗದ ಎಇಇ ಚಿದಾನಂದ ಅವರ ಮೇಲೆ ಟೋಲ್ ಸಿಬ್ಬಂದಿ ಸೇರಿದಂತೆ ಕೆಲ ಜನ ಹಲ್ಲೆ ಮಾಡಿದ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಟೋಲ್ನಲ್ಲಿ ಹಣ ಪಾವತಿಗೆ ಸಂಬಂಧಿಸಿದಂತೆ ಅಧಿಕಾರಿ ಮತ್ತು ಟೋಲ್ ಸಿಬ್ಬಂದಿ ನಡುವೆ ಕಿರಿಕ್ ಆಗಿತ್ತು. ಇದ್ರಿಂದ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ ಹಿಟ್ನಾಳ್ ಗ್ರಾಮದ ಸಿಬ್ಬಂದಿ ತಮ್ಮ ಸ್ನೇಹಿತರ 20 ಜನ ಗುಂಪನ್ನು ಕರೆಸಿ ಅಮಾನುಷವಾಗಿ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ರು. ಇದರ ಬೆನ್ನಲ್ಲೇ ಇದೀಗ ಟೋಲ್ ಮಾಲಿಕರು ವಿಡಿಯೋ ವೈರಲ್ ಮಾಡಿದ್ದು, ಟೋಲ್ ಸಿಬ್ಬಂದಿಯನ್ನು ಮೊದಲೇ ಅಧಿಕಾರಿಗಳ ತಂಡ ಎಳೆದಾಡಿ ಹಲ್ಲೆ ಮಾಡಿರುವ ಬಗ್ಗೆ ಸಿಸಿಟಿವಿ ದೃಶ್ಯ ರಿಲೀಸ್ ಮಾಡಿದೆ.
ಕೆವಲ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಆ ತಂಡ ತಪ್ಪಿಲ್ಲ ಇದರ ಜೊತೆಗೆ ಮೊದಲೇ ಅಧಿಕಾರಿ ಮತ್ತು ಅವರ ಸ್ನೇಹಿತರು ಹಲ್ಲೆ ಮಾಡಿ, ಯುವಕರನ್ನು ರೊಚ್ಚಿಗೇಳುವಂತೆ ಮಾಡಿತ್ತು ಎಂದು ಹೇಳಲಾಗಿದೆ.
ಇನ್ನು ಅಧಿಕಾರಿ ಮೇಲೆ ಹಲ್ಲೆ ಮಾಡಿದ ಸುಮಾರು 14 ಜನರನ್ನು ಪೊಲೀಸ್ ಬಂಧಿಸಿ, ಕೇಸ್ ಹಾಕಿದ್ದಾರೆ