ಇಂದು ಪೆಟ್ರೋಲ್ ಬೆಲೆ ಏರಿಕೆ, ಸಾರ್ವಜನಿಕರ ಶಾಪ..!

ಜಿಬಿ ನ್ಯೂಸ್ ಕನ್ನಡ ಸುದ್ದಿ ನವದೆಹಲಿ, ಫೆ.21- ಪೆಟ್ರೋಲ್ ಬೆಲೆ ಇಳಿಸಲು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹರಸಾಹಸಪಡುತ್ತಿದ್ದರೆ, ಇಂದು ಕೂಡ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆ ಆಗುವ ಮೂಲಕ ಸಾರ್ವಜನಿಕರು ಹಾಗೂ ಗ್ರಾಹಕರಿಗೆ ಶಾಕ್ ನೀಡಿದೆ. ಇಂದು ದೇಶದ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್‍ಗೆ 39 ಪೈಸೆ ಏರಿಕೆ ಮಾಡಿಕೊಂಡಿದ್ದರೆ, ಡೀಸೆಲ್ ಬೆಲೆಯು 37 ಪೈಸೆ ಹೆಚ್ಚಳವಾಗಿದೆ.

ಕಳೆದ 12 ದಿನಗಳಿಂದಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಗಗನಮುಖಿಯಾಗಿ ಏರಿಕೆಯಾಗುತ್ತಲೇ ಇದ್ದು , ಇದು ಭಾನುವಾರ ರಜದಿನವಾದರೂ ಇವುಗಳ ಬೆಲೆ ಏರಿಕೆಯಿಂದ ರಿಲೀಫ್ ಸಿಗಬಹುದು ಎಂದು ಗ್ರಾಹಕರು ಲೆಕ್ಕಚಾರಗಳನ್ನು ಹಾಕಿದ್ದರಾದರೂ ಇಂದು ಕೂಡ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆಯಾಗುವ ಮೂಲಕ ಅವರನ್ನು ಮತ್ತಷ್ಟು ದಿಕ್ಕೆಡುವಂತೆ ಮಾಡಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾ ಗೋಷ್ಠಿ ನಡೆಸಿ ಈಗಾಗಲೇ ದೇಶದ ಜನರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಸವಳಿದಿದ್ದಾರೆ, ಜನರ ಸಂಕಷ್ಟಕ್ಕೆ ಸರ್ಕಾರಗಳು ಸ್ಪಂದಿಸಬೇಕೆಂಬ ಹೇಳಿಕೆ ನೀಡಿದ್ದರಿಂದ ಇನ್ನು ಮುಂದೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಯಬಹುದು ಎಂದು ಗ್ರಾಹಕರು ಅಂದಾಜಿಸಿದ್ದರು.

ಜನರ ಆಕ್ರೋಶ:
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಎಷ್ಟೋ ವಾಹನ ಸವಾರರು ಈಗ ಜನಸ್ನೇಹಿ ಬಸ್‍ಗಳಲ್ಲಿ ಓಡಾಡಲು ಶುರು ಮಾಡಿರುವ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿಯಂತ್ರಿಸುವಲ್ಲಿ ಎಡವಿರುವ ಕೇಂದ್ರ ಸರ್ಕಾರದ ವಿರುದ್ಧ ಕೆಂಡಾ ಮಂಡಲ ವಾಗಿದ್ದಾರೆ.

ಯುಪಿಎ ಸರ್ಕಾರದಲ್ಲಿ ಪೆಟ್ರೋಲ್ ಮೇಲಿನ ಸುಂಕ 9.20 ರೂ. ಹಾಗೂ ಡೀಸೆಲ್ ಸುಂಕ 3.46ರಷ್ಟಿತ್ತು ಆದರೆ ಮೋದಿ ನಾಯಕತ್ವದ ಎನ್‍ಡಿಎ ಸರ್ಕಾರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 31.80 ರೂ. ಅಬಕಾರಿ ಸುಂಕವಾಗಿರುವುದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲು ಕಾರಣ ಎಂದು ದೇಶದ ಜನತೆ ದೂರುತ್ತಿದ್ದಾರೆ.

 ಶತಕದತ್ತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ:
ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‍ಗೆ ಭಾರೀ ಬೇಡಿಕೆ ಇರುವ ಸಮಯದಲ್ಲೇ ಕಚ್ಚಾ ತೈಲದ ಬೇಡಿಕೆಯೂ ಹೆಚ್ಚಾಗುತ್ತಿರುವುದರಿಂದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆಯು ಶತಕ ಬಾರಿಸಲು ಶರವೇಗದಲ್ಲಿ ಮುನ್ನುಗ್ಗು ತ್ತಿದೆ. ದೇಶದ ರಾಜಧಾನಿ ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 90.19 ರೂ., ಡೀಸೆಲ್ ಬೆಲೆ 80.60 ರೂ.ಗೆ ಏರಿಕೆಯಾಗಿದ್ದರೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 93.61(ಪೆಟ್ರೋಲ್), 85.84 ರೂ. (ಡೀಸೆಲ್) ಆಗಿದ್ದು ಗ್ರಾಹಕ ಕೈ ಸುಡುತ್ತಿದೆ.

ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕೆಳಕಂಡಂತಿದೆ:
ಮುಂಬೈ:97ರೂ.(ಪೆಟ್ರೋಲ್), 88.06 ರೂ. (ಡೀಸೆಲ್)
ಕೋಲ್ಕತ್ತಾ:
91.78 ರೂ.(ಪೆಟ್ರೋಲ್), 84.56 ರೂ. (ಡೀಸೆಲ್)
ಚೆನ್ನೈ:92.59ರೂ.(ಪೆಟ್ರೋಲ್), 85.98 ರೂ. (ಡೀಸೆಲ್)
ಹೈದ್ರಾಬಾದ್:
94.18 ರೂ.(ಪೆಟ್ರೋಲ್), 88.31 ರೂ. (ಡೀಸೆಲ್)
ಜೈಪುರ:
97.46 ರೂ.(ಪೆಟ್ರೋಲ್), 89.77 ರೂ. (ಡೀಸೆಲ್)

=13

follow me

Leave a Reply

Your email address will not be published.

error: Content is protected !!
×