ರವಿ ಬೆಳಗೆರೆ ಅನ್ನುವ ದೊಡ್ಡ ಪತ್ರಿಕಾ ಧ್ವನಿ ಅಸ್ತಂಗತ

ಜಿಬಿ ನ್ಯೂಸ್ ಕನ್ನಡ ಸುದ್ದಿ ಬೆಂಗಳೂರ : ಹಾಯ್ ಬೆಂಗಳೂರು ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ರವಿ ಬೆಳೆಗೆರೆ (62) ಶುಕ್ರವಾರ ಬೆಳಗಿನ ಜಾವ ನಿಧನ ಹೊಂದಿದರು.ಅವರಿಗೆ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ವಿಧಿವಶರಾದರು.ಸಂಯುಕ್ತ ಕರ್ನಾಟಕದಲ್ಲಿ ಹಲವು ವರ್ಷಗಳ ಕಾಲ ನಿರ್ವಹಿಸಿದ್ದಅವರು 1995ರಲ್ಲಿ ಹಾಯ್ ಬೆಂಗಳೂರು ಎಂಬ ಕಪ್ಪು ಸುಂದರಿ ಮೂಲಕ ನಾಡಿನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ್ದರು.

ಬಾಟಮ್ ಐಟಮ್, ಸಂಪಾದಕೀಯ, ಅಂಕಣಗಳು, ಅದರಲ್ಲೂ ಭೀಮಾತೀರದ ರಕ್ತಪಾತದ ಚರಿತ್ರೆ ಇರಬಹುದು, ಜಮ್ಮು ಕಾಶ್ಮಿರದ ವಸ್ತು ಸ್ಥಿತಿ ಇರಬಹುದು ಅದನ್ನು ಬರೆಯಲು ಸ್ವತಃ ಸ್ಥಳಅಧ್ಯಯನ ಮಾಡಿ ಮಾಹಿತಿಗಳನ್ನು ಹೆಕ್ಕಿ ತೆಗೆದುಕೊಂಡು ಓದುಗರಿಗೆ ಉಣಬಡಿಸುತ್ತಿದ್ದರು.

ಒಂದಾನೊಂದು ಕಾಲದಲ್ಲಿ ಹಾಯ್ ಬೆಂಗಳೂರು ಓದಲು ಜನ ಮುಗಿಬಿಳುತ್ತಿದ್ದರು. ಇತ್ತೀಚೆಗೆ ಕರೋನಾ ಹೊಡೆತದಿಂದ ಪತ್ರಿಕೆ ಸ್ಥಗಿತಗೊಂಡಿತ್ತು. ಅವರ ಆರೋಗ್ಯ ಕೂಡ ಸಾಕಷ್ಟು ಕೈ ಕೊಟ್ಟಿತ್ತು.ರವಿ ಬೆಳೆಗೆರೆ ಅವರು ಕ್ರೈಂ ಡೈರಿ ಮೂಲಕ ಅಪರಾಧ ಲೋಕದ ಅನಾವರಣ ಮಾಡಿದ್ದರು. ಅಲ್ಲದೆ, ಈಟಿವಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದರು.

ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದ್ದಅವರು ಅನಾರೋಗ್ಯದ ನಡುವೆ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದರು.
ಆದರೂ ಮತ್ತೆ ಅದನ್ನು ಎರಡು ವಾರಗಳ ಹಿಂದೆಯಷ್ಟೇ ಆರಂಭಿಸಿ ನಾಡಿನ ಜನರ ಗಮನ ಸೆಳೆದಿದ್ದರು.ಅವರ ಸಾಹಿತ್ಯ, ಬರವಣಿಗೆಗೆ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಹರಿದುಬಂದಿವೆ.

ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳ ಬಳಗ ಹೊಂದಿರುವ ರವಿ ಬೆಳೆಗೆರೆ ಪ್ರಾರ್ಥನಾ ಶಾಲೆಯ ಮೂಲಕ ಒಂದು ಹೊಸ ಅಧ್ಯಾಯ ಆರಂಭಿಸಿ, ಸಾವಿರಾರು ಮಕ್ಕಳ ಬಾಳು ಬೆಳಗುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.ಹೆಚ್ ಐ ವಿ ಸೋಂಕಿನ ವಿರುದ್ದ ವೀಣಾ ಜೊತೆಗೆ ಕೈಜೋಡಿಸಿ ಗಮನ ಸೆಳೇದಿದ್ದರು.

ಹಲವು ಪ್ರಭಾವಿ ರಾಜಕಾರಣಿಗಳ ಹಾಗೂ ರೌಡಿಸಂ ಹುಟ್ಟು ಅಡಗಿಸಿದ್ದರು.ಅವರು ಪತ್ನಿ ಲಲಿತಾ, ಮಗಳು ಭಾವನಾ, ಚೇತನಾ, ಮಗ ಕರ್ಣ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಬೆಂಗಳೂರಿನ ಪ್ರಾರ್ಥನಾ ಶಾಲೆ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ.ಅವರ ನಿಧನಕ್ಕೆ ನಾಡಿನ ಅನೇಕ ಹಿರಿಯ ಸಾಹಿತಿಗಳು, ಪತ್ರಕರ್ತರು, ಕರವೇ ಯುವಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಸೇರಿದಂತೆ ಅಪಾರ ಅಭಿಮಾನಿಗಳು, ಓದುಗರ ಪಡೆ ಕಂಬನಿ ಮಿಡಿದಿದೆ.

=5

follow me

Leave a Reply

Your email address will not be published.

error: Content is protected !!
×