ಭಾರತದಲ್ಲಿ ಕರೋನಾ ಸೋಂಕು ಇಳಿಮುಖ ಆಗುವುದಕ್ಕೆ ಕಾರಣ ಏನು?

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಹರ್ಡ್ ಇಮ್ಯುನಿಟಿ ಕಾರಣ ಎಂದು ತಜ್ಞರು ಹೇಳಿದ್ದಾರೆ. ಇನ್ನು ಭಾರತದಲ್ಲಿ ಅನೇಕ ಭಾಗಗಳಲ್ಲಿ ‘ಹರ್ಡ್ ಇಮ್ಯುನಿಟಿ’ ಇದೆ. ಹೀಗಾಗಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.
ಜನತೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಸೋಂಕು ಹರಡದಂತೆ ತಡೆಯುವುದೇ ಹರ್ಡ್ ಇಮ್ಯುನಿಟಿ ಅಥವಾ ಸಮುದಾಯ ಪ್ರತಿರೋಧಕ ಶಕ್ತಿ ಎಂದು ಕರೆಯುತ್ತಾರೆ.

ಹರ್ಡ್ ಇಮ್ಯುನಿಟಿ ಎನ್ನುವುದು ವೈರಸ್ ಅಥವಾ ರೋಗದಿಂದ ನಮಗೆ ಸಿಗುವ ಪರೋಕ್ಷ ರಕ್ಷಣೆ, ಇದರಿಂದ ಜನರನ್ನು ರಕ್ಷಣೆ ಮಾಡಬಹುದಾಗಿದೆ. ಒಂದು ಲಸಿಕಅಭಿವೃದ್ಧಿಪಡಿಸಿದಾಗ ಅಥವಾ ಜನರಿಗೆ ಸೋಂಕು ತಗುಲಿ ಗುಣಮುಖರಾದಾಗ ಇದು ಹೆಚ್ಚು ಅನುಕೂಲವಾಗುತ್ತದೆ.

ಅತಿ ಹೆಚ್ಚು ಜನಸಂಖ್ಯೆಗೆ ಸೋಂಕು ಹರಡಿ ಗುಣವಾದಾಗ ಅಥವಾ ಅತಿ ಹೆಚ್ಚು ಜನರು ಪ್ರತಿರೋಧ ಶಕ್ತಿ ಬೆಳೆಸಿಕೊಂಡಾಗ ವೈರಸ್ ಹರಡುವಿಕೆ ಕ್ರಮೇಣ ಕಡಿಮೆಯಾಗುತ್ತದೆ.

ಬಹುಪಾಲು ಜನರಿಗೆ ಸೋಂಕು ತಗುಲಿದಾಗ ತನ್ನಿಂತಾನೆ ಜನರಲ್ಲಿ ರೋಗ ನಿರೋಧಕರ ಶಕ್ತಿ ಬೆಳೆಯುತ್ತದೆ, ಅದನ್ನು ಹರ್ಡ್ ಇಮ್ಯುನಿಟಿ ಎನ್ನಲಾಗುತ್ತದೆ. ಯುರೋಪ್‌ನ ಬಹುತೇಕ ಭಾಗಗಳಲ್ಲಿ ಎರಡನೇ ಹಂತದ ಲಾಕ್‌ಡೌನ್ ವಿಧಿಸಲಾಗಿದೆ, ಅಮೆರಿಕದಲ್ಲೂ ನಿತ್ಯ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.

ಆದರೆ ಭಾರತದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಆದರೆ ನಿಜವಾದ ಕಾರಣ ಏನೆಂದು ಇಲ್ಲಿಯವರೆಗೂ ತಿಳಿದುಬಂದಿಲ್ಲ.

ರೋಗ ನಿರೋಧಕ ಕಡಿಮೆ ಇರುವ ದೇಹದಲ್ಲಿ ವೈರಸ್ ಪ್ರವೇಶಿಸಿದಾಗ ಅದು ವಿನಾಶಕ್ಕೆ ಕಾರಣವಾಗುತ್ತದೆ. ಹಾಗೆಯೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದಾಗ ರೋಗಕಾರಕದೊಂದಿಗಿನ ಸಂಬಂಧ ಬದಲಾಗುತ್ತದೆ.

ಬ್ರೆಜಿಲ್ ನಲ್ಲಿ ಝಿಖಾ ವೈರಸ್ ಬಂದಿದ್ದು, ಅಲ್ಲಿಯ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಇದ್ದ ಕಾರಣ ಬಹುಬೇಗ ಅದರ ಅಪಾಯ ಕಡಿಮೆಯಾಯಿತು. ಹಾಗೆಂದ ಮಾತ್ರ ಝಿಕಾ ವೈರಸ್ ಸಂಪೂರ್ಣವಾಗಿ ಕಡಿಮೆಯಾಗಿದೆ ಎಂದು ಅರ್ಥವಲ್ಲ ಅಪಾಯ ಕೊಂಚ ತಗ್ಗಿದೆ.

=7

follow me

Leave a Reply

Your email address will not be published.

error: Content is protected !!
×