ಭೀಮಾತೀರದ ರಕ್ತಚರಿತ್ರೆ: ಮಹಾದೇವ ಭೈರಗೊಂಡ ಹತ್ಯೆಗೆ ಯತ್ನ, ಸಹಚರ ಗುಂಡೇಟಿಗೆ ಬಲಿ

ಜಿಬಿ ನ್ಯೂಸ್ ಕನ್ನಡ ಸುದ್ದಿ ವಿಜಯಪುರ: ಭೀಮಾ ತೀರ ಶಾಂತವಾಯ್ತು ಎನ್ನುತ್ತಿದ್ದಂತೆಯೇ ಸೋಮವಾರ ಕಾಂಗ್ರೆಸ್‌ ಮುಖಂಡ ಮಹಾದೇವ ಭೈರಗೊಂಡನ ಮೇಲೆ ಅಪರಿಚಿತರಿಂದ ಫೈರಿಂಗ್‌ ನಡೆದಿದೆ. ದೇಹಕ್ಕೆ 3 ಗುಂಡು ಹೊಕ್ಕಿ ಗಂಭೀರ ಗಾಯಗೊಂಡಿರುವ ಮಹಾದೇವ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದರೆ, ಅವರ ಓರ್ವ ಸಹಚರ ಗುಂಡೇಟಿಗೆ ಬಲಿಯಾಗಿದ್ದಾನೆ.
ಘಟನೆಯಲ್ಲಿ ಮಹಾದೇವ ಭೈರಗೊಂಡ ಸಹಚರ, ಕೆರೂರು ಗ್ರಾಪಂನ ಮಾಜಿ ಸದಸ್ಯ ಬಾಬುರಾಮ ಮಾರುತಿ ಕಂಚನಾಳ (64) ಮೃತಪಟ್ಟಿದ್ದಾನೆ.

ಘಟನೆಯ ವಿವರ:

ಸೋಮವಾರ ಮಧ್ಯಾಹ್ನ 3.30ರ ವೇಳೆ ಮಹಾದೇವ ಭೈರಗೊಂಡ, ಬೆಂಬಲಿಗರು, ಗನ್‌ಮನ್‌ಗಳಿದ್ದ ಕಾರಿನಲ್ಲಿ ಸೊಲ್ಲಾಪುರ ರಸ್ತೆಯಲ್ಲಿ ಚಡಚಣ ಕಡೆಗೆ ಹೊರಟಿದ್ದಾಗ ಕನ್ನಾಳ ಕ್ರಾಸ್‌ ಬಳಿ ಅವರ ಮೇಲೆ ಫೈರಿಂಗ್‌ ನಡೆದಿದೆ.

ಒಂದು ಕಾರಿನಲ್ಲಿ ಮಹಾದೇವ ಭೈರಗೊಂಡ, ಚಾಲಕ, ಮೂವರು ಗನ್‌ಮ್ಯಾನ್‌ ತೆರಳುತ್ತಿದ್ದರೆ, 2ನೇ ಕಾರಿನಲ್ಲಿ ಚಾಲಕ ಹಾಗೂ ಸಹಚರ ಬಾಬುರಾಮ ಮಾರುತಿ ಇದ್ದರು. 3ನೇ ಕಾರಿನಲ್ಲಿ 5 ಬೆಂಬಲಿಗರು ಇದ್ದರು. ಮಧ್ಯದಲ್ಲಿದ್ದ ಮಹಾದೇವ ಭೈರಗೊಂಡ ಕಾರಿಗೆ ಟಿಪ್ಪರ್‌ನಿಂದ ಡಿಕ್ಕಿ ಹೊಡೆಸಲಾಗಿದೆ.

ತಕ್ಷಣವೇ 8-10 ಜನ ಅಪರಿಚಿತರು ಕಾರುಗಳನ್ನು ಸುತ್ತುವರಿದು ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆ ಫೈರಿಂಗ್‌ ಮಾಡಿ ಪರಾರಿಯಾಗಿದ್ದಾರೆ ಎಂದು ಎಸ್ಪಿ ಅನುಪಮ್‌ ಅಗರ್‌ವಾಲ್‌ ವಿವರಿಸಿದರು.

ದುಷ್ಕರ್ಮಿಗಳು ಟಿಪ್ಪರ್‌ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಭೈರಗೊಂಡ ಅವರ ಮ್ಯಾನೇಜರ್‌ ಬಾಬುರಾಮಗೆ 2 ಗುಂಡು ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾದೇವ ಭೈರಗೊಂಡ ಅವರ ಹೊಟ್ಟೆ ಭಾಗಕ್ಕೆ 2, ಬೆನ್ನಿನ ಪಕ್ಕೆಲುಬಿಗೆ 1 ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದಾರೆ. ಚಾಲಕ ಲಕ್ಷ್ಮಣ, ಗನ್‌ಮ್ಯಾನ್‌ ರಮೇಶ ಎಂಬುವರು ಗಾಯಗೊಂಡಿದ್ದರೆ, ಇನ್ನುಳಿದ ಇಬ್ಬರು ಗನ್‌ಮ್ಯಾನ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

=6

follow me

Leave a Reply

Your email address will not be published.

error: Content is protected !!
×