ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ; ಸಿದ್ದು ಟ್ವಿಟ್ಟಿಗೆ ಗುದ್ದು ಕೊಟ್ಟ ಟ್ವಿಟ್ಟಿಗರು

ಬೆಂಗಳೂರು:ಇಂದು ನಸುಕಿನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್​ ಅವರ ಮನೆಯ ಮೇಲೆ ದಾಳಿ ನಡೆಸಿ ಶಾಕ್​ ಕೊಟ್ಟ ಸಿಬಿಐ ವಿರುದ್ಧ ಕಾಂಗ್ರೆಸ್​ ವಲಯದಲ್ಲಿ ಭಾರಿ ಅಸಮಾಧಾನ ಭುಗಿಲೆದ್ದಿದೆ.

ಈ ಕುರಿತು ಕಿಡಿ ಕಾರಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮನೆ ಮೇಲೆ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ. ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಅದೇ ಇನ್ನೊಂದೆಡೆ, ಮೋದಿ-ಯಡಿಯೂರಪ್ಪ ಜೋಡಿಯು ತನ್ನ ಬೆದರಿಕೆ ಮತ್ತು ಕುತಂತ್ರಗಳ ಕಪಟ ಆಟದಿಂದ ತನ್ನ ಕೈಗೊಂಬೆ ಸಿಬಿಐ ಮೂಲಕ ಡಿಕೆ ಶಿವಕುಮಾರ್ ಅವರ ಮೇಲೆ ದಾಳಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ


ಕೆಪಿಸಿಸಿ ಅಧ್ಯಕ್ಷರಾದ @DKShivakumar ಮನೆ ಮೇಲೆ @narendramodi ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ.

ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ @BJP4India ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ.


ಸಿದ್ದು ಅವರ ಟ್ವೀಟ್​ಗೆ ಹಲವರು ಕಿಡಿ ಕಾರಿದ್ದಾರೆ. ಭ್ರಷ್ಟರ ಬೇಟೆಯನ್ನು ಸಂಬಂಧಪಟ್ಟ ಇಲಾಖೆ ಮಾಡುವಾಗ ನೈತಿಕ ದಿವಾಳಿ ತನದ ಪ್ರಶ್ನೆ ಎಲ್ಲಿದೆ ಸ್ವಾಮಿ. ಒಬ್ಬ ಹಿರಿಯ, ಮಾಜಿ ಮುಖ್ಯಮಂತ್ರಿಯವರು ಜನರಿಗೆ ಯಾವ ಸಂದೇಶ ನೀಡಲು ಈ ಹೇಳಿಕೆ. ಯಾರ ಮೇಲೆ ಕ್ರಮ ತೆಗೆದುಕೊಂಡರೂ ಇಂಥ ಭಾವನೆ ರಾಜಕಾರಣಿಗಳಿಗೆ ಇರುವದಾದರೆ ಆ ಇಲಾಖೆ ಏಕೆ ಬೇಕು ಅಲ್ಲವೇ ಎಂದು ಸುಂದರ್​ ಜಿ.ಕೆ ಎನ್ನುವವರು ಪ್ರಶ್ನಿಸಿದ್ದಾರೆ.

ಅವ್ರ ಕೆಲಸ ಅವ್ರ್ ಮಾಡುತ್ತಿದ್ದಾರೆ, ನಿಮ್​ ಕೆಲಸ ನೋಡಿ. ಕಾನೂನಿಗೆ ಮರ್ಯಾದೆ ಕೊಡಿ ಅಷ್ಟೇ ಅಕ್ರಮವಾಗಿ ಆಸ್ತಿ ಗಳಿಸಿಲ್ಲ ಅಂದ್ರೆ ಬಾಯಿ ಬಡ್ಕೊಳ್ಳೋದು ಯಾಕೆ? ಎಂದು ರಾಮ್​ ಎನ್ನುವವರು ಕಮೆಂಟ್​ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಎದುರಿಸೋಕೆ ಏನ್ ಇದೆ ಸ್ವಾಮಿ, ನಿಮ್ಮ ಪಕ್ಷದಲ್ಲಿ ಇಡೀ ದೇಶದಲ್ಲಿ ಇರೋದು 44ಸೀಟ್ ಹಾಗೇ ರಾಜ್ಯದಲ್ಲಿ ಇರೋದು ಒಂದು ಸೀಟ್ ಎಂದು ಧೊಟಿಹಲ್ ಮಂಜುನಾಥ್ ಹೇಳಿದ್ದರೆ, ಕಳೆದ ಭಾರಿ 51 ಸೀಟಿ ತಗೊಂಡಿದ್ದು ಮರೆತುಹೋಯಿತು, ಈಸಲ ಕಾಂಗ್ರೆಸ್ ಮುಕ್ತ ಭಾರತ ಪಕ್ಕ ಸಿದ್ಧ ಎಂದಿದ್ದಾರೆ ರಾಘು ಶರ್ಮಾ ಎನ್ನುವವರು. ತಪ್ಪೇ ಮಾಡಿಲ್ಲ ಎಂದರೆ ಭಯ ಪಡಬೇಡಿ ಸ್ವಾಮಿ ಎಂದಿದ್ದಾರೆ ಸಾಯಿಪ್ರಸಾದ್​ ಎಂಬುವವರು.

ಇದೇ ವೇಳೆ ಸಿದ್ದರಾಮಯ್ಯನವರ ಕೆಲವು ಅಭಿಮಾನಿಗಳು ದಾಳಿಯನ್ನು ತೀವ್ರವಾಗಿ ಕಮೆಂಟ್​ ಮೂಲಕ ಖಂಡಿಸಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ಡಿಕೆಶಿ ನಿವಾಸದ ಮೇಲೆ ಐವರು ಅಧಿಕಾರಿಗಳ ತಂಡವು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮುಂಜಾನೆ ದಾಳಿ ಮಾಡಿಲಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕನಕಪುರದ ನಿವಾಸದ ಮೇಲೂ ಅಧಿಕಾರಿಗಳ ತಂಡ ದಾಳಿ ಮಾಡಿದೆ.

ಈ ಹಿಂದೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಡಿಕೆಶಿ ವಿಚಾರಣೆ ಎದುರಿಸಿದ್ದರು. ಅಲ್ಲದೆ, ಬಂಧನಕ್ಕೆ ಒಳಗಾಗಿ ಜೈಲು ವಾಸವನ್ನು ಅನುಭವಿಸಿ, ಜಾಮೀನಿನ ಮೂಲಕ ಹೊರಬಂದಿದ್ದಾರೆ. ಇದೀಗ ಸಿಬಿಐ ಅಧಿಕಾರಿಗಳು ದಾಳಿ ಮಾಡಿರುವುದು ಡಿಕೆಶಿ ಮತ್ತೊಮ್ಮೆ ಶಾಕ್​ ಎದುರಾಗಿದೆ.

=4

follow me

Leave a Reply

Your email address will not be published.

error: Content is protected !!
×