ಭಾರತ್ ಬಂದ್ ಕರ್ನಾಟಕದಲ್ಲಿ ಮಿಶ್ರಪ್ರತಿಕ್ರಿಯೆ

ಬೆಂಗಳೂರು: ಸಂಸತ್​​ನಲ್ಲಿ ಅಂಗೀಕಾರವಾಗಿರೋ ಮೂರು ಕೃಷಿ ಮಸೂದೆಗಳನ್ನ ವಿರೋಧಿಸಿ ರೈತ ಸಂಘಟನೆಗಳು ಇಂದು ಭಾರತ್​ ಬಂದ್​ಗೆ ಕರೆ ನೀಡಿವೆ. 31 ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿವೆ. ಪಂಜಾಬ್​​ನಲ್ಲಿ ಸಂಪೂರ್ಣ ಬಂದ್​ ಆಚರಿಸಲು ನಿರ್ಧರಿಸಲಾಗಿದೆ. ಕೃಷಿ ವಿಧೇಯಕಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದಲ್ಲಿ ತಿಂಗಳ ಹಿಂದೆಯೇ ಪ್ರತಿಭಟನೆ ಆರಂಭಿಸಲಾಗಿದೆ. ಅದೀಗ ದೇಶಾದ್ಯಂತ ವ್ಯಾಪಿಸಿ ಭಾರತ್ ಬಂದ್​​ಗೆ ಕರೆ‌ ನೀಡಲಾಗಿದೆ.

ಇತ್ತ ರಾಜ್ಯದಲ್ಲೂ ಎಇಎಂಸಿ, ಭೂಸುಧಾರಣಾ ಕಾಯ್ದೆ ಸುಗ್ರೀವಾಜ್ಞೆ ವಿರುದ್ಧ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ ರೈತರ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದೇ ಇರುವುದನ್ನ ವಿರೋಧಿಸಿ ಇಂದು ಅನ್ನದಾತರು ರಸ್ತೆ ತಡೆ ನಡೆಸಲು ನಿರ್ಧರಿಸಿದ್ದಾರೆ.

ಐಕ್ಯ ಹೋರಾಟ ಸಮಿತಿಯಿಂದ ಮೈಸೂರ್ ಬ್ಯಾಂಕ್ ಸರ್ಕಲ್​ನಲ್ಲಿ ರಸ್ತೆ ತಡೆದು ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ.

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಿರೊ ಅನ್ನದಾತರು, ಜೈಲ್ ಭರೋ ಚಳುವಳಿ ಕೂಡ ನಡೆಸಲಿದ್ದಾರೆ. ರೈತರ ಹೋರಾಟಕ್ಕೆ 34ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ ಸಿಕ್ಕಿದೆ. ಬೆಂಗಳೂರು ಸಂಪರ್ಕಿಸುವ ಹೆದ್ದಾರಿಗಳಲ್ಲಿ ರಸ್ತೆ ತಡೆ ಹೋರಾಟ ಇರಲಿದೆ

=4

follow me

Leave a Reply

Your email address will not be published.

error: Content is protected !!
×