JPN ಪ್ರತಿಷ್ಠಾನಕ್ಕೆ ಟ್ರಸ್ಟಿಯಾಗಿ ರಾಘವೇಂದ್ರ ಉಯಿಲುಗೋಳ ಆಯ್ಕೆ; ಅಭಿನಂದನಾ ಕಾರ್ಯಕ್ರಮ

ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ: ಇಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಆರ್ಯ ಈಡಿಗ ಸಂಘ ಕೊಪ್ಪಳ ಇವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಗೌಡ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು

ಹಿಂದುಳಿದ ವರ್ಗಕ್ಕೆ ಸೇರಿದ ಆರ್ಯ ಈಡಿಗ ಸಮುದಾಯವನ್ನು ಮೇಲ್ಪಂಕ್ತಿಗೆ ತರಲು ಸ್ಥಾಪಿತವಾದ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನದ ಟ್ರಸ್ಟಿಯಾಗಿ ಆಯ್ಕೆಯಾದ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ರಾಘವೇಂದ್ರ ಉಯಿಲುಗೋಳ ಅವರನ್ನು ಆರ್ಯ ಈಡಿಗ ಸಂಘ ಇಂದು ಅವರನ್ನು ಅಭಿನಂದಿಸಿ ಗೌರವ ನೀಡಿತು.

ಈ ಸಮಯದಲ್ಲಿ ಮಾತನಾಡಿದ ನಾಗರಾಜ್ ಗುತ್ತೇದಾರ್ ಅವರು ನಾವು ಯಾವಾಗಲೂ ಒಗ್ಗಟ್ಟಾಗಿದ್ದರೆ ಮಾತ್ರ ನಮಗೆ ಬೆಲೆ ಇರುತ್ತದೆ ಇಲ್ಲದಿದ್ದರೆ ನಾವು ಬೆಲೆ ಕಳೆದುಕೊಳ್ಳುತ್ತೇವೆ ಆದ್ದರಿಂದ ಸಮಾಜದ ಜೊತೆಜೊತೆಯಾಗಿ ನಾವು ಬೆಳೆಯಬೇಕು ಹಾಗೂ ಸಮಾಜಕ್ಕೆ ನಮ್ಮದೇ ಆದ ಕೊಡುಗೆಯನ್ನು ನಾವು ಕೊಡಬೇಕು ಅಂದಾಗ ಮಾತ್ರ ನಾವು ಬೆಳೆಯಲು ಸಾಧ್ಯ ಎಂದು ಹೇಳಿದರು.

ನಂತರ ಮಾತನಾಡಿದ ಯಲಬುರ್ಗಾ ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಆರ್ಯ ಈಡಿಗ ಮುಖಂಡರಾದ ಶರಣಪ್ಪ ಇಳಿಗೆರ ರವರು ನಾವು ಯಾರೂ ದೊಡ್ಡವರಲ್ಲ ಎಲ್ಲರೂ ಸರಿಸಮಾನರಾಗಿ ಸಂಘಟನೆ ಬಲಗೊಳಿಸೋಣ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಶಕ್ತಿಶಾಲಿ ಯುತವಾಗಿ ಸಂಘಟನೆಯನ್ನು ಕಟ್ಟಿ ಬೆಳಸೋಣ ಎಂದು ಹೇಳಿದರು.

JPN ಪ್ರತಿಷ್ಠಾನದ ಟ್ರಸ್ಟಿಯಾಗಿ ಆಯ್ಕೆಯಾಗಿರುವ ರಾಘವೇಂದ್ರ ಗೌಡ ಅವರು ಮಾತನಾಡಿ ದಕ್ಷಿಣ ಕರ್ನಾಟಕದಲ್ಲಿ ಸಂಘಟನೆ ಬಲವಾಗುತ್ತಿದೆ ಆದರೆ ಉತ್ತರಭಾಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಘಟನೆ ಬಲವಾಗುತ್ತಿಲ್ಲ ವಿಷಾದನೀಯ ಆದರೆ ಸಂಘಟನೆಯನ್ನು ಬಲಗೊಳಿಸಿ ದಕ್ಷಿಣ ಕರ್ನಾಟಕದಂತೆ ಉತ್ತರ ಕರ್ನಾಟಕವನ್ನು ಕೂಡ ಈಡಿಗ ಸಂಘಟನೆಯನ ಮುಂಚೂಣಿಗೆ ತಂದು ಈಡೀಗ ಜನಗಳನ್ನ ಮೇಲ್ಪಂಕ್ತಿಗೆ ತರುವುದು ನನ್ನ ಕರ್ತವ್ಯ ಎಂದು ರಾಘವೇಂದ್ರ ಹುಯಿಲುಗೋಳ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಆರ್ಯ ಈಡಿಗ ಸಂಘ ಕೊಪ್ಪಳ ತಾಲೂಕು ಅಧ್ಯಕ್ಷರಾದ ಈರಣ್ಣ ಹುಲಿಗಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎವಿ ರವಿ, ಅನಿಲ್ ಹುಲಿಗಿ, ಎವಿ ಗುರುರಾಜ್, ಯಲಬುರ್ಗಾ ಪಟ್ಟಣ ಪಂಚಾಯತ್ ಸದಸ್ಯರಾದ ಶರಣಪ್ಪ ಈಳಿಗೇರ,

ಈಡಿಗ ಯುವ ಮುಖಂಡರಾದ ನಾಗರಾಜ್ ಗುತ್ತೇದಾರ್, ಕಾರ್ಯಕ್ರಮದ ಎಲ್ಲಾ ರೂಪರೇಷೆಗಳನ್ನು ಕಿರಣ್ ಕುಮಾರ್ ಇಳಿಗೆರ್ ಅವರು ನೆರವೇರಿಸಿದರು ಮತ್ತು ಅನೇಕ ಈಡಿಗ ಮುಖಂಡರು ಹಾಜರಿದ್ದರು.

=4

follow me

Leave a Reply

Your email address will not be published.

error: Content is protected !!
×