ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಸಂತೆಗಳಿಗೆ ಅವಕಾಶವಿಲ್ಲ; ಜಿಲ್ಲಾಧಿಕಾರಿಗಳಿಂದ ಆದೇಶ

 

ಕೊಪ್ಪಳ ಜಿಬಿ ನ್ಯೂಸ್ ಕನ್ನಡ ಸುದ್ದಿ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಂತೆಗಳು ಕರೋನ ಕಾರಣವಾಗಿ  ಸರ್ಕಾರದ ನಿಯಮದಂತೆ ರದ್ದಾಗಿದ್ದವು.  ಆದರೆ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಪುನಹ ಕುರಿ ಮತ್ತು ಮೇಕೆ ಸಂತೆ ಗಳನ್ನು ಪುನರಾರಂಭಿಸಲು ಕೊಪ್ಪಳ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು.

ಕೊಪ್ಪಳದಲ್ಲಿ ಇತ್ತೀಚಿಗೆ ಕೋವಿಡ್ ಸೋಂಕು ಜಾಸ್ತಿ ಆಗುತ್ತಿರುವ ಕಾರಣ ಮತ್ತು ಕೋವಿಡ19 ನಿಂದ ಸಾವುಗಳು ಹೆಚ್ಚುತ್ತಿರುವ  ಕಾರಣದಿಂದಾಗಿ ಇಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕುರಿ-ಮೇಕೆ ಸಂತೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಅಧಿಕಾರಿಗಳ ಆದೇಶದ ಮೇರೆಗೆ ಜಿಲ್ಲಾ ಪೊಲೀಸ ಇಲಾಖೆ ಹಾಗೂ ಸಂತೆಗಳು ನಡೆಯುತ್ತಿರುವ ಠಾಣಾ ವ್ಯಾಪ್ತಿಯ ಅಧಿಕಾರಿಗಳು, ಯಾವುದೇ ರೀತಿಯ ಕುರಿ ಮತ್ತು ಮೇಕೆ ಸಂತೆಗಳನ್ನು ನಡೆಸಬಾರದು ಎಂದು ಸಾರ್ವಜನಿಕರಿಗೆ ಪ್ರಕಟಣೆಯ ಮುಖಾಂತರ ಎಚ್ಚರಿಕೆ ನೀಡಿದ್ದಾರೆ ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿ ಕುರಿ ಮತ್ತು ಮೇಕೆ ಸಂತೆಯನ್ನು ಮಾಡಿದ್ದೆ ಆದರೆ ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವರಿಕೆ ಮಾಡಿದೆ

=5

follow me

One Reply to “ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಸಂತೆಗಳಿಗೆ ಅವಕಾಶವಿಲ್ಲ; ಜಿಲ್ಲಾಧಿಕಾರಿಗಳಿಂದ ಆದೇಶ”

Leave a Reply

Your email address will not be published.

error: Content is protected !!
×