ನಿಜವಾದ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಕಲ್ಪಿಸಬಹುದು; ಸುಪ್ರೀಂಕೋರ್ಟ್

ನವದೆಹಲಿ : ಪರಿಶಿಷ್ಟ ಜಾತಿಯಲ್ಲಿನ ಜನತೆಗೆ ಒಳಮೀಸಲಾತಿ ಕಲ್ಪಿಸಬಹುದು ಎಂದು, ಸುಪ್ರಿಂಕೋರ್ಟ್‌ ಅಭಿಪ್ರಾಯ ಪಟ್ಟಿದ್ದು, ಈ ಮೂಲಕ ಕರ್ನಾಟಕದ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟಕ್ಕೆ ಕಾನೂನ್ಮತಕ ಬೆಂಬಲ ಸಿಕ್ಕಿದೆ. ಇದಲ್ಲದೇ ಒಳಮೀಸಲಾತಿಗೆ ತಮ್ಮದೇ ಆದ ದಾಟಿಯಲ್ಲಿ ವಿರೋಧ ವ್ಯಕ್ತಪಡಿಸಕೊಳ್ಳುತ್ತ ಬರುತ್ತಿದ್ದ ಒಳಮೀಸಲಾತಿ ವಿರೋಧಿಗಳಿಗೆ ಈ ಮೂಲಕ ಮುಖಭಂಗವಾಗಿದ್ದು, ಹಾಗೂ ನೈಜ ದಲಿತರಿಗೆ ಸುಪ್ರಿಂಕೋರ್ಟ್‌ನ ಈ ಅಭಿಪ್ರಾಯ ಮೀಸಲಾತಿಯ ಮೂಲ ಉದ್ದೇಶಕ್ಕೆ ಸಿಕ್ಕ ಜಯ ಅಂತ ವಿಶ್ಲೇಷಣೆ ಮಾಡಲಾಗುತ್ತಿದೆ.

ಸದಾಶಿವ ಆಯೋಗದ ವರದಿ ಜಾರಿಗೆ ನಡೆದ ಹೋರಾಟ

ಪರಿಶಿಷ್ಟರಲ್ಲದವರು ಕೂಡ ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿರುವ ಪ.ಪಟ್ಟಿಯಲ್ಲಿ ಮೀಸಲಾತಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು, ಈ ಮೂಲಕ ನೈಜ ಪರಿಶಿಷ್ಟರಿಗೆ ಸಿಗಬೇಕಾದ ಸವಲತ್ತು, ಸೌಲಭ್ಯಗಳು ಸಿಗದೇ ಇರುವುದು ಕೂಡ ಮೂಲ ದಲಿತರಲ್ಲಿ ಆತಂಕ್ಕೆ ಕಾರಣವಾಗಿದ್ದು, ಇದಲ್ಲದೇ ಸಂವಿಧಾನದ ಮೀಸಲಾತಿ ಉದ್ದೇಶ ಈಡೇರಿರುವುದಿಲ್ಲ ಅನ್ನೋ ಆಂತಕ ಕೂಡ ಮೂಲ ದಲಿತರಲ್ಲಿ ಮನೆ ಮಾಡಿದ್ದು, ಈ ಹಿನ್ನಲೆಯಲ್ಲಿ ಮೀಸಲಾತಿಯಿಂದ ವಂಚನೆಗೆ ಒಳಗಾಗಿರುವ ದಲಿತರು ಈಗಾಗಲೇ ಒಳಮೀಸಲಾತಿ ನೀಡುವಂತೆ ಆಯಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿಕೊಂಡು ಬರುತ್ತಲೇ ಇವೆ.

ಒಳಮೀಸಲಾತಿ ಗಾಗಿ ನಡೆದ ಹೋರಾಟದ ತುಣುಕು

ಇದಲ್ಲದೇ ಕರ್ನಾಟಕದಲ್ಲಿ ಈಗಾಗಲೇ ಮಾ ನ್ಯಾ.ಎ.ಜೆ.ಸದಾಶಿವ ಅವರು ಸಲ್ಲಿಸರುವ ವರದಿ ಕೂಡ ಶೈತ್ಯಗಾರಕ್ಕೆ ಸೇರಿಕೊಂಡಿದೆ. ಒಳಮೀಸಲಾತಿಯ ಪೆಟ್ಟು ಈಗಾಗಲೇ ರಾಜ್ಯದ ಪ್ರಮುಖ ನಾಯಕರುಗಳಿಗೆ ಹೊಡೆತ ಬಿದಿದ್ದು, ಬಾದಾಮಿ ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಮಾಜಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಲ್ಲಿ ಆದ ಹಿಂದೇಟುಗಳೇ ಕಾಂಗ್ರೆಸ್‌ ಮತ್ತೆ ರಾಜ್ಯದಲ್ಲಿ ಅಡಳಿತಕ್ಕೆ ಬಾರದೇ ಇರೋದಕ್ಕೆ ಕಾರಣ ಅಂತ ಒಪ್ಪಿಕೊಂಡಿದ್ದರು, ಅದು ನಿಜವೂ ಕೂಡ ಬಿಡಿ.

ಇದಲ್ಲದೇ ದಲಿತರಲ್ಲೇ ಬಹುಸಂಖ್ಯಾತರು ಅಂತ ಹೇಳಿಕೊಳ್ಳುತ್ತಿರುವ ಮಾದಿಗ ಸಮುದಾಯದ ಜನತೆ ಕೂಡ ಮೀಸಲಾತಿ ವಿಚಾರದಲ್ಲಿ ಒಗ್ಗೂಡುತ್ತಿದ್ದು, ಹಾಗೂ ಕಾಂಗ್ರೆಸ್‌ ತನ್ನ ಸಾಂಪ್ರದಾಯಕ ಮತಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಶುರುವಾಗಿದೆ. ಕಾಂಗ್ರೆಸ್‌ ಈ ಹಿಂದೆ ಎ.ಜೆ.ಸದಾಶಿವ ವರದಿ ಸೇರಿದಂತೆ, ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ವೇಳೆಯಲ್ಲಿ ಎಡಗೈ ಸಮುದಾಯವನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ, ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್‌ ಎಡಗೈ ಸಮುದಾಯದ ಹೆಚ್ಚು ಮಂದಿಗೆ ಟಿಕೇಟ್‌ ನೀಡಲಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ ಕೂಡ. ಕಾಂಗ್ರೆಸ್‌ ಮಾಡಿದ ತಪ್ಪನ್ನೇ ಮಾಡದ ಬಿಜೆಪಿ ಎಡಗೈ ಸಮುದಾಯದ ನಾಯಕರಿಗೆ ಡಿಸಿಎಂ ಹುದ್ದೆಗಳು ಸೇರಿದಂತೆ ಪ್ರಮುಖ ಹುದ್ದೆಗಳನ್ನು ತನ್ನ ಪಕ್ಷದಲ್ಲಿ ನೀಡುತ್ತ ಹೋಗುತ್ತಿದ್ದು, ಖುದ್ದು ಕಾಂಗ್ರೆಸ್‌ ನಾಯಕರಿಗೆ ಇದು ಭಯದ ವಾತವಾರಣ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ಸುಪ್ರಿಂಕೋರ್ಟ್‌ನ ಈ ನಿರ್ದೇಶನಿಂದ ಒಳಮೀಸಲಾತಿಯ ಕಾವು ಇನ್ನೂ ಹೆಚ್ಚಾಗಲಿದ್ದು, ಮುಂಬರುವ ದಿನದಲ್ಲಿ ಇದು ಯಾವ ತಿರುವು ತರಲಿದೆ ಎನ್ನವುದುನ್ನು ಕಾದು ನೋಡಬೇಕಾಗಿದೆ.

 

=20

follow me

Leave a Reply

Your email address will not be published.

error: Content is protected !!
×