ಕರ್ನಾಟಕ ರೈತರ ಹಿತ ರಕ್ಷಣಾ ವೇದಿಕೆಯಿಂದ ತುಂಗಾಭದ್ರ ನದಿಗೆ ಬಾಗಿನ ಅರ್ಪಣೆ

ಕೊಪ್ಪಳ : ಕಲ್ಯಾಣ ಕರ್ನಾಟಕ ಭಾಗದ ಜೀವನದಿ ತುಂಗಾಭದ್ರ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಕರ್ನಾಟಕ ರೈತರ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಶುಕ್ರವಾರದಂದು ನದಿಗೆ ಬಾಗಿನ ಅರ್ಪಿಸಲಾಯಿತು. ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಜಂತಗಲ್-ಕಂಪ್ಲಿ ತುಂಗಭದ್ರಾ ಸೇತುವೆ ಬಳಿ ಕರ್ನಾಟಕ ರೈತರ ಹಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆಸರಹಟ್ಟಿ ಶರಣೇಗೌಡ ಅವರ ನೇತೃತ್ವದಲ್ಲಿ ರೈತರು ಬಾಗಿನ ಅರ್ಪಿಸಿದರು. ಬಾಗಿನ ಅರ್ಪಿಸಿ ಜಿಲ್ಲಾಧ್ಯಕ್ಷರಾದ ಕೆಸರಹಟ್ಟಿ ಶರಣೆಗೌಡ ಮಾತನಾಡಿ, ಪಶ್ಚಿಮಘಟ್ಟದಲ್ಲಿ ಮಳೆಯಾಗಿರುತ್ತಿರುವ ಹಿನ್ನಲೆ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಇನ್ನೂ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಯುತ್ತಿರುವ ಹಿನ್ನಲೆ ಈ ಭಾಗದ ರೈತರಿಗರ ಗಂಗೆಮಾತೆಯ ಕರುಣೆ ಆಶೀರ್ವಾದ ಸದಾ ಇರಲಿ ಅಲ್ಲದೇ ನೀರಿನ ಪ್ರವಾಹ ತಗ್ಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಗಿದೆ. ಇನ್ನೂ 133 ಟಿಎಂಸಿ ಸಾಮಾರ್ಥ್ಯದ ನಮ್ಮ ಜಲಾಶಯ, ಹೂಳು ತುಂಬಿಕೊಂಡು 100 ಟಿಎಂಸಿ ಮಾತ್ರ ಸಂಗ್ರಹವಾಗುತ್ತಿದೆ. ಆದರೂ ಸಹ ತುಂಗಭದ್ರಾ ಮಾತೆಯ ಆಶೀರ್ವಾದ ನಮ್ಮ ಮೇಲೆ ಇದ್ದು, ರೈತರ ಎರಡು ಬೆಳೆಗಳಿಗೆ ನೀರು ಹರಿದು ಬರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬರಗೂರ ನಾಗರಾಜ್, ಬಸವರಾಜ್ ಹಳ್ಳಿ, ಪಂಪಯ್ಯಸ್ವಾಮಿ ಹಿರೇಮಠ, ದೇವೇಂದ್ರಗೌಡ, ಶಶಿಧರ್, ಚನ್ನಬಸವ ಹೆರೂರು ಇದ್ದರು.

=5

follow me

One Reply to “ಕರ್ನಾಟಕ ರೈತರ ಹಿತ ರಕ್ಷಣಾ ವೇದಿಕೆಯಿಂದ ತುಂಗಾಭದ್ರ ನದಿಗೆ ಬಾಗಿನ ಅರ್ಪಣೆ”

  1. ರೈತರನ್ನ ಬೆಂಬಲಿಸಿದಕ್ಕೆ ಧನ್ಯವಾದಗಳು GB.NEWS ನವರಿಗೆ
    ನನ್ನ ರೈತರ ಪರವಾಗಿ.

Leave a Reply

Your email address will not be published.

error: Content is protected !!
×